Advertisement

ಕೋಲಾರ: ರಸ್ತೆ, ಹೆದ್ದಾರಿ ಅಗಲೀಕರಣ

05:37 PM Sep 14, 2021 | Team Udayavani |

ಕೋಲಾರ: ರಸ್ತೆಗೆ ಅಡ್ಡಲಾಗಿರುವ ಹಾಗೂ ಸರ್ಕಾರಿ ಜಾಗಗಳನ್ನು ಅತಿಕ್ರಮಿಸಿ ನಿರ್ಮಾಣ ಮಾಡಿದ್ದ ದೇವಾಲಯ, ಚರ್ಚ್‌ ಹಾಗೂ ದರ್ಗಾ
ಮಸೀದಿಗಳನ್ನು ಕೆಡವುವ ಪ್ರಕ್ರಿಯೆ ರಾಜ್ಯಾದ್ಯಂತ ಆರಂಭವಾಗಿದ್ದು, ಕೋಲಾರ ಜಿಲ್ಲೆಯಲ್ಲಿ ಇಂತಹ 24 ದೇವಾಲಯ ಕಟ್ಟಡಗಳನ್ನು ಗುರುತಿಸಿ
ಈಗಾಗಲೇ ಕೆಡವಲಾಗಿದೆ.

Advertisement

ಬಹುತೇಕ ದೇವಾಲಯ, ಚರ್ಚ್‌ ಹಾಗೂ ದರ್ಗಾ ಕಟ್ಟಡಗಳು ರಸ್ತೆ ಅಗಲೀಕರಣ ಕಾಮಗಾರಿ ಸಂಬಂಧ ಕೆಡವಲಾಗಿದ್ದು, ಈ ಕುರಿತು ಜಿಲ್ಲಾಡಳಿತ ಈಗಾಗಲೇ ಸಂಬಂಧಪಟ್ಟವರಿಗೆ ವರದಿಯನ್ನು ರವಾನಿಸಿದೆ.

ಕೋಲಾರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೆಡವಲಾಗಿರುವ ದೇವಾಲಯಗಳ ಪೈಕಿ ಒಂದು ದರ್ಗಾ, ಒಂದು ಗುರುದ್ವಾರ, ಮೂರು ಚರ್ಚ್‌
ಹಾಗೂ19ದೇವಾಲಯಗಳು ಸೇರಿವೆ.ಕೋಲಾರದ ಸರ್ವಜ್ಞ ಉದ್ಯಾನದ ಬಳಿ ಇದ್ದ ಶನಿಮಹಾತ್ಮ ದೇವಾಲಯ, ಕುರುಬರ ಪೇಟೆಯ ಆಂಜನೇಯಸ್ವಾಮಿ ದೇವಾಲಯ, ಕಠಾರಿಪಾಳ್ಯದ ಕಠಾರಿಗಂಗಮ್ಮ ದೇವಾಲಯ, ಎಸ್‌ಎನ್‌ಆರ್‌ ಆಸ್ಪತ್ರೆ ಹಿಂಭಾಗದ ನಾಗರಕಟ್ಟೆ. ಮುಳಬಾಗಿಲು ತಾಲೂಕಿನ ವಿರೂಪಾಕ್ಷ ಮಾರೆಮ್ಮ ದೇವಾಲಯ, ಕಪ್ಪಲಮಡಗು ಆಂಜನೇಯಸ್ವಾಮಿ ದೇವಾಲಯ, ಕೆಜಿಎಫ್
ಮುಳಬಾಗಿಲು ರಸ್ತೆಯ ದರ್ಗಾ, ಶ್ರೀನಿವಾಸಪುರ ಪಟ್ಟಣದ ಮುನಿಸಿಫ‌ಲ್‌ ಆಸ್ಪತ್ರೆ ಬಳಿಯ ಅಶ್ವತ್ಥಕಟ್ಟೆ, ಇದೇ ತಾಲೂಕಿನ ತಾಡಿಗೋಳ್‌ ಕ್ರಾಸ್‌ನ ಈಶ್ವರ ದೇವಾಲಯ, ಮಾಲೂರು ತಾಲೂಕು ಗುಡ್ನಹಳ್ಳಿಯ ಮಾರೆಮ್ಮ ದೇವಾಲಯ, ಕೆಜಿಹಳ್ಳಿ ರಾಘವೇಂದ್ರಸ್ವಾಮಿ ದೇವಾಲಯ, ಟೇಕಲ್‌ ರೈಲ್ವೆ ನಿಲ್ದಾಣ ಸಮೀಪದ ಆಂಜನೇಯಸ್ವಾಮಿ ದೇವಾಲಯ.

ಇದನ್ನೂ ಓದಿ:ರಾಜ್ಯದಲ್ಲಿ ಐದು ಸಾವಿರ ಶಿಕ್ಷಕರ ನೇಮಕ : ಸಚಿವ ಬಿ.ಸಿ. ನಾಗೇಶ್ ಭರವಸೆ

ಕೆಜಿಎಫ್ ತಾಲೂಕಿನ ನೀಲಗಿರಿಹಳ್ಳಿಯ ಗಂಗಮ್ಮ ದೇವಾಲಯ, ಕೆಂಪಾಪುರದ ಚೌಡೇಶ್ವರಿ ದೇವಾಲಯ, ಟೆಕ್‌ಫೌಂಡ್‌ ರಸ್ತೆಯ ಸುಬ್ರಹ್ಮಣ್ಯ
ಸ್ವಾಮಿ ದೇವಾಲಯ, ಬೇತಮಂಗಲ ಕ್ಯಾಸಂಬಳ್ಳಿ ರಸ್ತೆಯ ಮರಿಯಮ್ಮ ದೇವಾಲಯ, ಕೆಜಿಎಫ್ ವಿಕೋಟ ರಸ್ತೆಯ ಚರ್ಚ್‌, ಹೊಸಕೋಟೆ ವಿಕೋಟ ರಸ್ತೆಯ ಗುರುದ್ವಾರ.

Advertisement

ಬಾಗೇಪಲ್ಲಿ ಬಂಗಾರಪೇಟೆ ರಾಜ್ಯ ಹೆದ್ದಾರಿ 5ರಲ್ಲಿನ ಆಂಜನೇಯಸ್ವಾಮಿ ದೇವಾಲಯ, ನಂಜುಂಡೇಶ್ವರ ದೇವಾಲಯ, ಹೊಸಕೋಟೆ
ವಿಕೋಟ ರಾಜ್ಯ ಹೆದ್ದಾರಿ 95ರಲ್ಲಿನ ಆಂಜನೇಯ ಸ್ವಾಮಿ ದೇವಾಲಯ, ಇದೇ ಹೆದ್ದಾರಿಯಲ್ಲಿನ ಮತ್ತೆರೆಡು ಆಂಜನೇಯಸ್ವಾಮಿ ದೇವಾಲಯ,
ಬಂಗಾರಪೇಟೆ, ಬಾಗೇಪಲ್ಲಿ ರಾಜ್ಯ ಹೆದ್ದಾರಿ 5 ರಲಿನ ಎರಡು ಚರ್ಚ್‌ಗಳನ್ನು ಜಿಲ್ಲಾಡಳಿತ ಈಗಾಗಲೇ ಸಂಪೂರ್ಣ ಕೆಡವಿ ರಸ್ತೆ ಅಥವಾ ಹೆದ್ದಾರಿ ಅಗಲೀಕರಣ ಕಾಮಗಾರಿಗಳನ್ನು ನಿರ್ವಹಿಸಿದೆ. ಕೆಲವೆಡೆ ನಿರ್ವಹಿಸುತ್ತಿದೆ.

ಸದ್ಯಕ್ಕೆ ಜಿಲ್ಲಾಡಳಿತದ ಮುಂದೆ ಹೊಸದಾಗಿ ಯಾವುದೇ ದೇವಾಲಯ, ದರ್ಗಾ, ಚರ್ಚ್‌, ಗುರುದ್ವಾರ ಕೆಡವುವ ಪ್ರಸ್ತಾಪಗಳಿಲ್ಲ. ಮುಂದಿನ ಹಂತದ ಕಾಮಗಾರಿಗಳನ್ನು ನಿರ್ವಹಿಸುವಾಗ ಆಯಾ ಭಾಗದ ಒತ್ತುವರಿ ಕಟ್ಟಡ ಗುರುತಿಸಿ ಕೆಡವಲು ಯೋಜಿಸಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

2009ರಲ್ಲಿ ಪಟ್ಟಿ ಮಾಡಲಾದ ಎಲ್ಲಾ ಧಾರ್ಮಿಕಕೇಂದ್ರಗಳನ್ನು ತೆರವು ಮಾಡಲಾಗಿದೆ,ಕೋರ್ಟ್‌ ಆದೇಶದಂತೆ ತರವು ಮಾಡಿದ್ದೇವೆ, ಈಗ ಮತ್ತೆ ಜಿಲ್ಲೆಯ ಅನಧಿಕೃತ ಧಾರ್ಮಿಕಕೇಂದ್ರಗಳ ಪಟ್ಟಿ ಮಾಡಬೇಕಿದೆ.
-ಡಾ.ಆರ್‌.ಸೆಲ್ವಮಣಿ, ಜಿಲ್ಲಾಧಿಕಾರಿ.

 

Advertisement

Udayavani is now on Telegram. Click here to join our channel and stay updated with the latest news.

Next