Advertisement

Kolar: 1.25 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌ಗಳು ಪತ್ತೆ

02:49 PM Aug 28, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿರುವ “ಅನರ್ಹ’ ಪಡಿತರ ಕಾರ್ಡ್‌ಗಳ ವಿರುದ್ಧ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅನರ್ಹ ಪಡಿತರ ಕಾರ್ಡ್‌ಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ಈವರೆಗೆ 2.50 ಲಕ್ಷಕ್ಕೂ ಅಧಿಕ ಕಾರ್ಡ್‌ಗಳನ್ನು ಆಹಾರ ಇಲಾಖೆ ರದ್ದುಗೊಳಿಸಿದೆ. ಇನ್ನುಳಿದ ಕಾರ್ಡ್‌ಗಳನ್ನು ಅನರ್ಹಗೊಳಿಸುವ ಪ್ರಕ್ರಿಯೆ ಮುಂದುವರಿದಿದೆ. 6 ತಿಂಗಳಿಂದ ಯಾವುದೇ ಪಡಿತರ ಪಡೆಯದಿರುವ ಹಿನ್ನೆಲೆಯಲ್ಲಿ ಇಲಾಖೆಯು ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿರಿಸಿದೆ.

Advertisement

ಈ ಪೈಕಿ ಕೋಲಾರ ಜಿಲ್ಲೆಯಲ್ಲಿ 1.25 ಲಕ್ಷ ಪಡಿತರ ಚೀಟಿಗಳು ಅನರ್ಹವಾಗಲಿವೆ. ಬೆಂಗಳೂರು ನಗರದಲ್ಲಿ 1,23,070 ಅನರ್ಹ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ. ಕಳೆದ 6 ತಿಂಗಳಿಂದ ತುಮಕೂರು ಜಿಲ್ಲೆಯಲ್ಲಿ 60 ಸಾವಿರ ಕಾರ್ಡ್‌ಗಳನ್ನು ಅಧಿಕಾರಿಗಳು ರದ್ದು ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ 54,093, ಉಡುಪಿ ಜಿಲ್ಲೆಯಲ್ಲಿ 38,765 ಅನರ್ಹ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ. ಬೆಳಗಾವಿಯಲ್ಲಿ 19,969 ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ.

ಬೆಂಗಳೂರು ಪೂರ್ವ 9129, ಉತ್ತರ 17382, ದಕ್ಷಿಣ 11447, ಪಶ್ಚಿಮ 19549, ಬೆಂಗಳೂರು 65553, ಒಟ್ಟು 123 070 ಅನರ್ಹ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ. ಈ ವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಕಡಿಮೆ 38 ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ರಾಮನಗರ ಜಿಲ್ಲೆಯಲ್ಲಿ 8530 ಅಕ್ರಮ ಬಿಪಿಎಲ್‌ ಕಾಡ್‌ ìಗಳು ಇರುವುದನ್ನು ಪತ್ತೆ ಹಚ್ಚಲಾಗಿದ್ದು ಈ ಪೈಕಿ 814 ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ದಾವಣಗೆರೆಯಲ್ಲಿ 4332, ಕೊಪ್ಪಳದಲ್ಲಿ 5000 ಹಾಗೂ ಹಾವೇರಿಯಲ್ಲಿ 6420 ಕಾರ್ಡ್‌ಗಳನ್ನು ಅಮಾನತುಗೊಳಿಸಲಾಗಿದೆ.

ಕೋಲಾರ ಜಿಲ್ಲೆಯಲ್ಲಿ 29,714 ಅಂತ್ಯೋದಯ, 3,10,350 ಆದ್ಯತಾ ವಲಯದ ಕುಟುಂಬಗಳು ಸೇರಿ ಒಟ್ಟು 3.40 ಲಕ್ಷ ಆದ್ಯತಾ ಕುಟುಂಬಗಳಿದ್ದು, ಈ  ಪೈಕಿ 1.25 ಲಕ್ಷ ಕುಟುಂಬಗಳು ವಿವಿಧ ಕಾರಣಗಳಿಗಾಗಿ ಅನರ್ಹಗೊಳ್ಳಲಿವೆ ಎಂದು ಅಂದಾಜಿಸಲಾಗಿದೆ. ತುಮಕುರು ಜಿಲ್ಲೆಯಲ್ಲಿ 1ನೇ ಹಂತದಲ್ಲಿ 37 ಸಾವಿರ 2ನೇ ಹಂತದಲ್ಲಿ 23 ಸಾವಿರ ಸೇರಿ 60,000 ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ.

ಶಿವಮೊಗ್ಗದಲ್ಲಿ 8 ಸಾವಿರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ರಾಯಚೂರಿನಲ್ಲಿ 12 ಸಾವಿರ ಬಿಪಿಎಲ್‌ ಕಾರ್ಡ್‌ಗಳನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆ. ಬೆಳಗಾವಿಯಲ್ಲಿ 6 ತಿಂಗಳಿಂದ 19,969 ಬಿಪಿಎಲ್‌ ಕಾರ್ಡ್‌ ರದ್ದುಗೊಳಿಸಿದ್ದು 1.89 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.

Advertisement

ದಾವಣಗೆರೆಯಲ್ಲಿ 4332 ಪಡಿತರ ಚೀಟಿ ಅಮಾನತಿನಲ್ಲಿಡಲಾಗಿದೆ. ಕೊಪ್ಪಳದಲ್ಲಿ 5000, ಹಾಸನದಲ್ಲಿ 14000 ಅಕ್ರಮ ಬಿಪಿಎಲ್‌ ಕಾರ್ಡ್‌ಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿ ರದ್ದುಪಡಿಸಲು ಕ್ರಮ ಕೈಗೊಂಡಿದ್ದಾರೆ. ಬೀದರ್‌ನಲ್ಲಿ 14,146, ವಿಜಯಪುರದಲ್ಲಿ 12 ಸಾವಿರಕ್ಕೂ ಅಧಿ ಕ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಯಾದಗಿರಿಯಲ್ಲಿ 10.009, ಹಾವೇರಿಯಲ್ಲಿ 6420, ಮಂಡ್ಯದಲ್ಲಿ 8,102, ಚಿಕ್ಕಬಳ್ಳಾಪುರದಲ್ಲಿ 8,396 ಅನರ್ಹ ಬಿಪಿಎಲ್‌ ಕಾ ರ್ಡ್‌ಗಳನ್ನು ಇಲಾಖೆ ಪತ್ತೆ ಮಾಡಿದೆ. ಗದಗದಲ್ಲಿ 5,350 ಪಡಿತರ ಚೀಟಿಗಳನ್ನು ಅಮಾನತುಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next