Advertisement

ಕೋಳಕೂರ: 27ರಿಂದ ಕುಂಭಮೇಳ-ಧರ್ಮಸಭೆ

12:25 PM Apr 23, 2022 | Team Udayavani |

ಜೇವರ್ಗಿ: ತಾಲೂಕಿನ ಸುಕ್ಷೇತ್ರ ಕೋಳಕೂರ ಗ್ರಾಮದ ಆರಾಧ್ಯ ದೈವ ಶ್ರೀ ಸಿದ್ಧಬಸವೇಶ್ವರ ಪುರಾಣ ಮಹಾ ಮಂಗಲೋತ್ಸವ ನಿಮಿತ್ತ ಕುಂಭಮೇಳ ಹಾಗೂ ಧಾರ್ಮಿಕ ಸಭೆ ಏ.27, 28ರಂದು ನಡೆಯಲಿದೆ.

Advertisement

ಕಳೆದ ಏ.2ರಿಂದ ಕೋಳಕೂರಿನ ಸಿದ್ಧಬಸವೇಶ್ವರ ಸಮುದಾಯ ಭವನದ ಆವರಣದಲ್ಲಿ ವಡಗೇರಾದ ನಾಗಯ್ಯಶಾಸ್ತ್ರೀಗಳಿಂದ ಸಿದ್ಧಬಸವೇಶ್ವರ ಪುರಾಣ ಪ್ರಾರಂಭವಾಗಿದೆ. ಏ.26ರಂದು ರಾತ್ರಿ 10 ಗಂಟೆಯಿಂದ ಗುರುನಾಥ ಮಾಸ್ತರ ಮತ್ತು ರೇಖಾ ಹರನಾಳ ಅವರಿಂದ ಡೊಳ್ಳಿನ ಪದ ಕಾರ್ಯಕ್ರಮ ಜರುಗುವುದು.

ಏ.27ರಂದು ಪುರವಂತರ ಸೇವೆ, ವಿವಿಧ ಕಲಾ ತಂಡಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಸಂಜೆ ಪುರಾಣ ಮಹಾಮಂಗಲಗೊಳ್ಳುವುದು. ಏ.28ರಂದು ಸಂಜೆ 5 ಗಂಟೆಗೆ ಬಾಳೆಹೊನ್ನೂರಿನ ಡಾ| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಿ, ಅದ್ಧೂರಿ ಸ್ವಾಗತ ಕೋರಲಾಗುತ್ತಿದೆ. ಸಂಜೆ 8 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ರಂಭಾಪುರಿ ಜಗದ್ಗುರು ಡಾ| ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಾನಿಧ್ಯ, ರೋಜಾಮಠದ ಕೆಂಚಬಸವ ಶಿವಾಚಾರ್ಯರು ನೇತೃತ್ವ ವಹಿಸುವರು.

ಸೊನ್ನದ ಡಾ| ಶಿವಾನಂದ ಸ್ವಾಮೀಜಿ, ಬಡದಾಳ ತೇರಿನಮಠದ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು, ಫಿರೋಜಾಬಾದನ ಗುರುಬಸವ ಸ್ವಾಮೀಜಿ, ಕಡಕೋಳದ ಡಾ| ರುದ್ರಮುನಿ ಶಿವಾಚಾರ್ಯರು, ಜೇರಟಗಿಯ ಮಹಾಂತ ಸ್ವಾಮೀಜಿ, ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಡಾ| ಅಪ್ಪಾರಾವ್‌ ಮುತ್ಯಾ ಮಹಾರಾಜರು, ಬಸವಕಲ್ಯಾಣದ ಡಾ| ಅಭಿನವ ಶರಣಶಂಕರಲಿಂಗ ಮಹಾರಾಜರು, ಬಸವಪಟ್ಟಣದ ಮರೆಪ್ಪ ಶರಣರು, ಚಿತ್ತಾಪುರದ ಸೋಮಶೇಖರ ಶಿವಾಚಾರ್ಯರು, ಕುಮಸಗಿಯ ಅಭಿನವ ವೆಂಕಟೇಶ್ವರ ಸ್ವಾಮೀಜಿ, ಬಬಲಾದನ ಶಿವಮೂರ್ತಿ ಶಿವಾಚಾರ್ಯರು, ಹಲಕರ್ಟಿ ಮುನೀಂದ್ರ ಶಿವಾಚಾರ್ಯರು ಪಾಲ್ಗೊಳ್ಳಿದ್ದಾರೆ.

ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೆಯ ಪಾಟೀಲ ರೇವೂರ ಧರ್ಮಸಭೆ ಉದ್ಘಾಟಿಸುವರು. ಶಾಸಕ ಡಾ| ಅಜಯಸಿಂಗ್‌ ಅದ್ಯಕ್ಷತೆ ವಹಿಸುವರು. ಸಂಸದ ಡಾ| ಉಮೇಶ ಜಾಧವ, ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸೇಡಂ ದ್ವನಿ ಸುರುಳಿ ಬಿಡುಗಡೆ ಮಾಡುವರು. ಭಾವಚಿತ್ರಕ್ಕೆ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಪೂಜೆ ಸಲ್ಲಿಸುವರು.

Advertisement

ಜೆಡಿಎಸ್‌ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಾಜಿ ಮೇಯರ್‌ ಶರಣಕುಮಾರ ಮೋದಿ, ರಾಜಶೇಖರ ಸೀರಿ, ಅಶೋಕಸಾಹು ಗೋಗಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಇದೇ ವೇಳೆ ಉದ್ಯಮಿ ಬಸವಂತರಾವ್‌ ಪಾಟೀಲ ಕಣ್ಣಿ, ಸಾಹಿತಿ ಬಂಡೆಪ್ಪ ಹಳ್ಳಿ ಅವರನ್ನು ಸತ್ಕರಿಸಲಾಗುವುದು ಎಂದು ದೇವಸ್ಥಾನ ಟ್ರಸ್ಟ್‌ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next