Advertisement
ನೀಲೇಶ್ವರ ಎಡಮನೆ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಸಂತ ರಾವ್, ಸದಸ್ಯರಾದ ವಿಟ್ಠಲ ಗೌಡ ಟಿ., ಶ್ರೀಕಾಂತ ಆಚಾರ್ಯ, ಸುಚಿತ್ರಾ ಕೊಲ್ಲಾಜೆ, ಬಾಬು ಎಂ.ಕೆ., ರೋಹಿತಾಕ್ಷ ಆಚಾರ್ಯ, ಪದ್ಮಾ ಟಿ.ಎಂ., ಸೇಸಪ್ಪ ಸಾಲಿಯಾನ್, ಅರ್ಚಕರಾದ ರಮಾನಂದ ಭಟ್ ಮತ್ತು ಭಕ್ತರು ಭಾಗವಹಿಸಿದ್ದರು.
ಮೇ 7ರಂದು ಬೆಳಗ್ಗೆ 8 ಗಂಟೆಗೆ ಉತ್ಸವ ಹೊರಟು ದರ್ಶನ ಬಲಿ, ಚಂದ್ರಮಂಡಲ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಉತ್ಸವ ಹೊರಟು ಶ್ರೀ ದೇವರ ಮಹಾರಥೋತ್ಸವ ನಡೆಯಲಿದೆ. ಜಾತ್ರೆ ಪ್ರಯುಕ್ತ ರಾತ್ರಿ 10ರಿಂದ ಶ್ರೀ ಮಂಗಳಾದೇವಿ ಮೇಳದವರಿಂದ ಯಕ್ಷಗಾನ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.