Advertisement

ಕೊಕ್ಕಡ: ಎಂಡೋ ಸಂತ್ರಸ್ತರಿಗೆ ಸಮವಸ್ತ್ರ ವಿತರಣೆ 

12:39 PM Mar 15, 2017 | Team Udayavani |

ನೆಲ್ಯಾಡಿ :  ಮಹಿಳಾ ದಿನಾಚರಣೆ ಪ್ರಯುಕ್ತ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಕೊಕ್ಕಡ ಎಂಡೋ ಪಾಲನ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ  ನಡೆಯಿತು.

Advertisement

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂಜಾ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಹಿಳಾ ಮೋರ್ಚಾದಿಂದ ವಿಶಿಷ್ಟವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂಡೋ ಸಂತ್ರಸ್ತ ಮಹಿಳೆಯರಿಗೆ ಸಮವಸ್ತ್ರವನ್ನು ನೀಡುವ ಮೂಲಕ ಸಂತೈಸುವ ಕಾರ್ಯದಲ್ಲಿ ಆತ್ಮತೃಪ್ತಿಯಿದೆ. ದುರಂತಕ್ಕೊಳಗಾದ ಸಂತ್ರಸ್ತರನ್ನು ಕೈಲಾದ ಮಟ್ಟಿಗೆ ಸಂತೈಸಿ ಅವರಿಗೆ ಧ್ಯರ್ಯ ತುಂಬುವ ಕಾರ್ಯವನ್ನು ನಡೆಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ, ಮಹಿಳಾ ದಿನಾಚರಣೆಯಂದು ಮಹಿಳಾ ಮೋರ್ಚಾದಿಂದ ಎಂಡೋ ಸಂತ್ರಸ್ತರಿಗೆ ಸಮವಸ್ತ್ರ ನೀಡಿರುವುದು ಅರ್ಥಪೂರ್ಣ ಕಾರ್ಯವಾಗಿದೆ ಎಂದರು. 

ರಾಜ್ಯ ಕಾರ್ಯಕಾರಿಣಿ ಸದಸ್ಯೆಯರಾದ ರಜನಿ ದುಗ್ಗಣ್ಣ, ಜಯಂತಿ ನಾಯಕ್‌, ಜಿಲ್ಲಾ ಕಾರ್ಯದರ್ಶಿ ಪ್ರಭಾ ಮಾಲಿನಿ, ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ಶಾರದಾ ರೈ, ಧರ್ಮಸ್ಥಳ ತಾ.ಪಂ. ಸದಸ್ಯೆ ಧನಲಕ್ಷೀ¾ ಜನಾರ್ದನ್‌, ಜಿಲ್ಲಾ ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಸೇವಂತಿ, ರೇಖಾ ಶೆಟ್ಟಿ, ಕೊಕ್ಕಡ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ಕೊಕ್ಕಡ ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ., ಪೋಷಕ ಸಂಘದ ಅಧ್ಯಕ್ಷ ರಾಮಣ್ಣ ಗೌಡ, ಎಂಡೋ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು, ಕೊಕ್ಕಡ ಸೇವಾ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಗೌಡ ಪಿ.  ಉಪಸ್ಥಿತರಿದ್ದರು. ರೇವತಿ   ತಾಮಣಕರ್‌ ಸ್ವಾಗತಿಸಿ ಎಂಡೋ ಪಾಲನ ಕೇಂದ್ರದ ಸಂಯೋಜಕ ಸತೀಶ್‌ ನಾಯ್ಕ  ವಂದಿಸಿದರು. ಎಂಡೋ ಪಾಲನ ಕೇಂದ್ರದಲ್ಲಿರುವ ಮಹಿಳೆಯರು, ಮಕ್ಕಳು ಮತ್ತು ಪುರುಷರಿಗೆ ಉಡುಪುಗಳು ಮತ್ತು ಸಮವಸ್ತ್ರ, ಸಿಹಿತಿಂಡಿ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next