Advertisement

ಇಂದು ಕೊಹ್ಲಿ ಪತ್ರಿಕಾಗೋಷ್ಠಿ ನಡೆಸುತ್ತಾರೆ!

11:14 AM Jul 29, 2019 | keerthan |

ಮುಂಬಯಿ: ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ತೆರಳುವ ಮುನ್ನ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಪತ್ರಿಕಾಗೋಷ್ಠಿ ನಡೆಸುವುದಿಲ್ಲ ಎಂಬ ಸುದ್ದಿಗಳು ಹರಡಿದ್ದವು. ಆದರೆ ಕೊಹ್ಲಿ ಪತ್ರಿಕಾಗೋಷ್ಠಿಯನ್ನು ಸೋಮವಾರ ಸಂಜೆ 6 ಗಂಟೆಗೆ ನಡೆಸುತ್ತಾರೆಂದು ಸ್ವತಃ ಬಿಸಿಸಿಐ ಖಚಿತಪಡಿಸಿದೆ ಎಂದು ವರದಿಯಾಗಿದೆ.

Advertisement

ಕೊಹ್ಲಿ ಮತ್ತು ರೋಹಿತ್‌ ಶರ್ಮ ನಡುವೆ ಭಿನ್ನಮತ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸದೇ ಕೊಹ್ಲಿ ಅಮೆರಿಕಕ್ಕೆ ಹಾರುತ್ತಾರೆ ಎಂದು ಹೇಳಲಾಗಿತ್ತು.

ವಿದೇಶಿ ಸರಣಿಯೊಂದಕ್ಕೆ ಭಾರತೀಯ ತಂಡ ತೆರಳುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡು ವುದು ವಾಡಿಕೆ. ಈ ಬಾರಿ ಆ ಪದ್ಧತಿ ಮುರಿದು ನಾಯಕ ಕೊಹ್ಲಿ ಜಾಹೀರಾತು ಕಾರ್ಯಕ್ರಮವೊಂದರಲ್ಲಿ ಮಾತ್ರ ಭಾಗವಹಿಸುತ್ತಾರೆ ಎನ್ನಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ನಾಯಕ-ಉಪನಾಯಕನ ನಡುವೆ ಭಿನ್ನ ಮತದ ಸುದ್ದಿಯೇ ಮುಖ್ಯ ಸ್ಥಾನ ಪಡೆಯುವ ನಿರೀಕ್ಷೆಯಿರುವುದೇ ಇದಕ್ಕೆ ಕಾರಣ ಎನ್ನಲಾಗಿತ್ತು.

ಭಾರತೀಯ ತಂಡ ಸೋಮವಾರ ಅಮೆರಿಕಕ್ಕೆ ತೆರಳಲಿದೆ. ಫ್ಲೋರಿಡಾದಲ್ಲಿ ಆ. 3, 4ರಂದು ಸತತ 2 ಟಿ20 ಪಂದ್ಯವಾಡಿದ ಅನಂತರ ವಿಂಡೀಸ್‌ಗೆ ತೆರಳಿ ಪ್ರವಾಸದ ಮುಂದಿನ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ.

Advertisement

ಭಿನ್ನಮತವೇಕೆ?
ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋತ ಭಾರತ ತಂಡ ತವರಿಗೆ ಆಗಮಿಸಿದ ಬಳಿಕ ಕೊಹ್ಲಿ ಮತ್ತು ರೋಹಿತ್‌ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ನಿರ್ದಿಷ್ಟವಾಗಿ ಯಾವ ಕಾರಣದಿಂದ ಇಬ್ಬರ ನಡುವೆ ಭಿನ್ನಮತವಿದೆ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿಯಿಲ್ಲ. ಕೂಟದ ಬಳಿಕ ಬಿಸಿಸಿಐನೊಳಕ್ಕೆ ರೋಹಿತ್‌ಗೆ ಏಕದಿನ ನಾಯಕತ್ವ ನೀಡಬೇಕೆಂಬ ಲೆಕ್ಕಾಚಾರ ನಡೆದಿದ್ದವು ಎನ್ನಲಾಗಿತ್ತು. ಆದರೆ ಬಿಸಿಸಿಐ ಇಂತಹ ಎಲ್ಲ ವದಂತಿಗಳನ್ನು ಅಲ್ಲಗಳೆದು, ಕೊಹ್ಲಿಗೆ ಮೂರೂ ಮಾದರಿಯ ನಾಯಕತ್ವವನ್ನು ಮುಂದುವರಿಸಿದೆ. ಅಷ್ಟು ಮಾತ್ರವಲ್ಲ ಬಿಸಿಸಿಐ ಇಂತಹ ಎಲ್ಲ ವರದಿ ಗಳನ್ನು ಸತತವಾಗಿ ನಿರಾಕರಿಸಿಕೊಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next