Advertisement

ಗುವಾಹಟಿ; ಲಂಕೆಗೆ ಗುದ್ದು ಕೊಟ್ಟ ಭಾರತ; ಕೊಹ್ಲಿ ಸೆಂಚುರಿ ನಂ. 45; ಶಣಕ ಶತಕ ವ್ಯರ್ಥ

10:33 PM Jan 10, 2023 | Team Udayavani |

ಗುವಾಹಟಿ: ವಿರಾಟ್‌ ಕೊಹ್ಲಿ ಅವರ 45ನೇ ಶತಕ, ರೋಹಿತ್‌ ಶರ್ಮ-ಶುಭಮನ್‌ ಗಿಲ್‌ ಜೋಡಿಯ ಶತಕದ ಜತೆಯಾಟದ ನೆರವಿನಿಂದ ಶ್ರೀಲಂಕಾ ವಿರುದ್ಧದ ಗುವಾಹಟಿಯ ದೊಡ್ಡ ಮೊತ್ತದ ಏಕದಿನ ಪಂದ್ಯವನ್ನು ಭಾರತ 67 ರನ್ನುಗಳಿಂದ ಗೆದ್ದಿದೆ. “ಏಕದಿನ ವಿಶ್ವಕಪ್‌ ವರ್ಷ’ದ ಮೊದಲ ಪಂದ್ಯದಲ್ಲೇ ತನ್ನ ಪಾರಮ್ಯ ಮೆರೆದಿದೆ.

Advertisement

ಆರಂಭದಲ್ಲಿ ಭಾರತ ದೊಡ್ಡ ಅಂತರದ ಗೆಲುವು ಸಾಧಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಲಂಕಾ ನಾಯಕ ದಸುನ್‌ ಶಣಕ ಸಿಡಿದು ನಿಂತು ಆಕರ್ಷಕ ಸೆಂಚುರಿ ಬಾರಿಸಿ ಹೋರಾಟ ಸಂಘಟಿಸಿದರು. ಆದರೆ ಆಗಲೇ ಕಾಲ ಮಿಂಚಿತ್ತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಇದರ ಭರಪೂರ ಲಾಭವೆತ್ತಿತು. 7 ವಿಕೆಟಿಗೆ 373 ರನ್‌ ಸೂರೆಗೈದು ಸವಾಲೊಡ್ಡಿತು. ಚೇಸಿಂಗ್‌ ವೇಳೆ ಲಂಕಾ ಆರಂಭದಲ್ಲಿ ಯಾವುದೇ ಹೋರಾಟ ನೀಡಲಿಲ್ಲ. ಆದರೆ ನಾಯಕ ದಸುನ್‌ ಶಣಕ ಸಿಡಿದು ನಿಂತರು. ಲಂಕಾ 8 ವಿಕೆಟಿಗೆ 306 ರನ್‌ ಬಾರಿಸಿ ಶರಣಾಯಿತು.

ಭಾರತದ ಬೃಹತ್‌ ಮೊತ್ತದಲ್ಲಿ ಕೊಹ್ಲಿ ಶತಕಕ್ಕೆ ಅಗ್ರಸ್ಥಾನ. ಅವರು 113 ರನ್‌ ಬಾರಿಸಿದರು. ಹಾಗೆಯೇ ರೋಹಿತ್‌-ಗಿಲ್‌ ವೈಯಕ್ತಿಕ ಅರ್ಧ ಶತಕದ ಜತೆಗೆ ಮೊದಲ ವಿಕೆಟಿಗೆ ಬಿರುಸಿನ ಗತಿಯಲ್ಲಿ 143 ಪೇರಿಸಿದರು. ಟೀಮ್‌ ಇಂಡಿಯಾದ ಸ್ಕೋರ್‌ ಬೆಳೆಯುತ್ತಲೇ ಹೋಯಿತು. ಲಂಕಾ ಈ ಮೊತ್ತವನ್ನು ಕಂಡೇ ದಿಗಿಲುಗೊಂಡಂತೆ ಆಡಿತು. ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವೈಫ‌ಲ್ಯ ಮುಳುವಾಯಿತು. ನಾಯಕ ದಸುನ್‌ ಶಣಕ ಸರ್ವಾಧಿಕ ಅಜೇಯ 108, ಆರಂಭಕಾರ ಪಥುಮ್‌ ನಿಸ್ಸಂಕ 72, ಧನಂಜಯ ಡಿ ಸಿಲ್ವ 47 ರನ್‌ ಮಾಡಿದರು.

ಲಂಕೆಯ 8ನೇ ವಿಕೆಟ್‌ 38ನೇ ಓವರ್‌ನಲ್ಲಿ, 206 ರನ್‌ ಆದಾಗ ಉರುಳಿತ್ತು. ಆದರೆ ದಸುನ್‌ ಶಣಕ-ಕಸುನ್‌ ರಜಿತ ಮುರಿಯದ 9ನೇ ವಿಕೆಟಿಗೆ ಭರ್ತಿ 100 ರನ್‌ ಪೇರಿಸಿದರು. ಶಣಕ ಅವರ 108 ರನ್‌ 88 ಎಸೆತಗಳಿಂದ ಬಂತು (12 ಬೌಂಡರಿ, 3 ಸಿಕ್ಸರ್‌). ಇದು ಅವರ 2ನೇ ಶತಕ ಹಾಗೂ ಜೀವನಶ್ರೇಷ್ಠ ಗಳಿಕೆ.

Advertisement

ಸ್ಕೋರ್‌ಪಟ್ಟಿ
ಭಾರತ 50 ಓವರ್‌, 373/7
ರೋಹಿತ್‌ ಶರ್ಮ ಬಿ ಮದುಶಂಕ 83
ಶುಭಮನ್‌ ಗಿಲ್‌ ಎಲ್‌ಬಿಡಬ್ಲ್ಯು ಶಣಕ 70
ವಿರಾಟ್‌ ಕೊಹ್ಲಿ ಸಿ ಮೆಂಡಿಸ್‌ ಬಿ ರಜಿತ 113
ಶ್ರೇಯಸ್‌ ಐಯ್ಯರ್‌ ಸಿ ಆವಿಷ್ಕ ಬಿ ಧನಂಜಯ 28
ಕೆ.ಎಲ್‌.ರಾಹುಲ್‌ ಬಿ ರಜಿಥ 39
ಹಾರ್ದಿಕ್‌ ಪಾಂಡ್ಯ ಸಿ ಹಸರಂಗ ಬಿ ರಜಿತ 14
ಅಕ್ಷರ್‌ ಪಟೇಲ್‌ ಸಿ ಆವಿಷ್ಕ ಬಿ ಕರುಣಾರತ್ನೆ 9
ಮೊಹಮ್ಮದ್‌ ಶಮಿ ಔಟಾಗದೆ 4
ಮೊಹಮ್ಮದ್‌ ಸಿರಾಜ್‌ ಔಟಾಗದೆ 7
ಇತರೆ 6
ವಿಕೆಟ್‌ ಪತನ: 1-143, 2-173, 3-213, 4-303, 5-330, 6-362, 7-364.
ಬೌಲಿಂಗ್‌:
ಕಸುನ್‌ ರಜಿಥ 10- 0- 88- 3
ದಿಲಾÏನ್‌ ಮದುಶಂಕ 6- 0- 43- 1
ವನಿಂದು ಹಸರಂಗ 10- 0- 67- 0
ಚಮಿಕ ಕರುಣಾರತ್ನೆ 8- 0- 54- 1
ದುನಿತ್‌ ವೆಲ್ಲಲಗೆ 8- 0- 65- 0
ದಸುನ್‌ ಶಣಕ 3- 0- 22- 1
ಧನಂಜಯ ಡಿ ಸಿಲ್ವ 5- 0- 33- 1

ಶ್ರೀಲಂಕಾ 50 ಓವರ್‌, 306/8
ಪಾಥುಮ್‌ ನಿಸ್ಸಂಕ ಸಿ ಪಟೇಲ್‌ ಬಿ ಮಲಿಕ್‌ 72
ಆವಿಷ್ಕ ಫೆರ್ನಾಂಡೊ ಸಿ ಪಾಂಡ್ಯ ಬಿ ಸಿರಾಜ್‌ 5
ಕುಸಲ್‌ ಮೆಂಡಿಸ್‌ ಬಿ ಮೊಹಮ್ಮದ್‌ ಸಿರಾಜ್‌ 0
ಚರಿಥ ಅಸಲಂಕ ಸಿ ರಾಹುಲ್‌ ಬಿ ಮಲಿಕ್‌ 23
ಧನಂಜಯ ಸಿಲ್ವ ಸಿ ರಾಹುಲ್‌ ಬಿ ಶಮಿ 47
ದಸುನ್‌ ಶಣಕ ಅಜೇಯ 108
ವನಿಂದು ಹಸರಂಗ ಸಿ ಐಯ್ಯರ್‌ ಬಿ ಚಹಲ್‌ 16
ದುನಿಥ್‌ ವೆಲ್ಲಲಗೆ ಸಿ ಶುಭಮನ್‌ ಬಿ ಮಲಿಕ್‌ 0
ಕರುಣಾರತ್ನೆ ಸಿ ಶರ್ಮ ಬಿ ಪಾಂಡ್ಯ 14
ಕಸುನ್‌ ರಜಿಥ ಅಜೇಯ 9
ಇತರೆ 12
ವಿಕೆಟ್‌ ಪತನ: 1-19, 2-23, 3-64, 4-136, 5-161, 6-178, 7-179, 8-206
ಬೌಲಿಂಗ್‌
ಮೊಹಮ್ಮದ್‌ ಶಮಿ 9- 0- 67- 1
ಮೊಹಮ್ಮದ್‌ ಸಿರಾಜ್‌ 7- 1- 30- 2
ಹಾರ್ದಿಕ್‌ ಪಾಂಡ್ಯ 6- 0- 33- 1
ಉಮ್ರಾನ್‌ ಮಲಿಕ್‌ 8- 0- 57- 3
ಯಜುವೇಂದ್ರ ಚಹಲ್‌ 10- 0- 58- 1
ಅಕ್ಷರ್‌ ಪಟೇಲ್‌ 10- 0- 58- 0

 

Advertisement

Udayavani is now on Telegram. Click here to join our channel and stay updated with the latest news.

Next