Advertisement

ಉದ್ಘಾಟನಾ ಪಂದ್ಯದಲ್ಲೇ ಅವಳಿ ದಾಖಲೆಗಳ ಮೇಲೆ ಕೊಹ್ಲಿ ಕಣ್ಣು

12:30 AM Mar 21, 2019 | |

ಚೆನ್ನೈ: ಶನಿವಾರದ ಉದ್ಘಾಟನಾ ಐಪಿಎಲ್‌ ಪಂದ್ಯದಲ್ಲೇ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಅವಳಿ ದಾಖಲೆಗಳ ಮೇಲೆ ಕಣ್ಣು ನೆಟ್ಟಿದ್ದಾರೆ. ಇದರೊಂದಿಗೆ 12ನೇ ಐಪಿಎಲ್‌ ಪಂದ್ಯಾವಳಿಗೆ ಭರ್ಜರಿ ಆರಂಭ ಲಭಿಸುವ ಸಾಧ್ಯತೆಯೊಂದು ಗೋಚರಿಸಿದೆ.

Advertisement

ಕೊಹ್ಲಿಗೆ ಕಾದಿರುವ ಎರಡು ದಾಖಲೆಗಳೆಂದರೆ ಐಪಿಎಲ್‌ನಲ್ಲಿ ಸರ್ವಾಧಿಕ ರನ್‌ ಹಾಗೂ ಅತೀ ಹೆಚ್ಚು ಸಲ 50 ಪ್ಲಸ್‌ ರನ್‌ ಸಾಧನೆ. ಸದ್ಯ ಐಪಿಎಲ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿದ ದಾಖಲೆ ಸುರೇಶ್‌ ರೈನಾ ಹೆಸರಲ್ಲಿದೆ (4,985 ರನ್‌). ಕೊಹ್ಲಿ 4,948 ರನ್‌ ಗಳಿಸಿದ್ದಾರೆ. ರೈನಾ ಸಾಧನೆಯನ್ನು ಸರಿದೂಗಿಸಲು ಕೊಹ್ಲಿಗೆ ಬೇಕಿರುವುದು ಇನ್ನು 37 ರನ್‌ ಮಾತ್ರ.

ಹಾಗೆಯೇ ಐಪಿಎಲ್‌ನಲ್ಲಿ ಈವರೆಗೆ ಅತೀ ಹೆಚ್ಚು 39 ಸಲ 50 ಪ್ಲಸ್‌ ರನ್‌ ಬಾರಿಸಿದ ದಾಖಲೆ ಡೇವಿಡ್‌ ವಾರ್ನರ್‌ ಹೆಸರಲ್ಲಿದೆ. ಕೊಹ್ಲಿ 38 ಸಲ ಈ ಸಾಧನೆಗೈದಿದ್ದಾರೆ. ಹೀಗಾಗಿ ಇನ್ನೊಂದು ಅರ್ಧ ಶತಕ ಬಾರಿಸಿದರೆ ಕೊಹ್ಲಿ ಎರಡೂ ದಾಖಲೆಗಳನ್ನು ಒಟ್ಟಿಗೇ ನಿರ್ಮಿಸಬಹುದಾಗಿದೆ. ಕೊಹ್ಲಿಗೆ ಚೆನ್ನೈ ಅಂಗಳ ಒಲಿದೀತೇ ಎಂಬುದು ಆರ್‌ಸಿಬಿ ಅಭಿಮಾನಿಗಳ ಕುತೂಹಲ.

ಹಾವು-ಏಣಿ ಏಟ
ಈ ಪಂದ್ಯಾವಳಿಯಲ್ಲಿ ಸುರೇಶ್‌ ರೈನಾ ಮತ್ತು ಡೇವಿಡ್‌ ವಾರ್ನರ್‌ ಇಬ್ಬರೂ ಆಡುತ್ತಿರುವುದರಿಂದ ದಾಖಲೆಗಳನ್ನು ಕಾಯ್ದಿಟ್ಟುಕೊಳ್ಳುವುದು ಸುಲಭವಲ್ಲ. ರೈನಾ ಚೆನ್ನೈ ತಂಡದಲ್ಲೇ ಇರುವುದರಿಂದ ಆರಂಭಿಕ ಪಂದ್ಯದಲ್ಲಿ ಅವರ ರನ್‌ ಗಳಿಕೆಯಲ್ಲೂ ಹೆಚ್ಚಳವಾಗುವ ಸಂಭವ ಇದ್ದೇ ಇದೆ. ವಾರ್ನರ್‌ ಸನ್‌ರೈಸರ್ ಹೈದರಾಬಾದ್‌ ಪರ ಆಡಲಿದ್ದಾರೆ. 

ನಿಷೇಧದಿಂದಾಗಿ ಅವರ ಫಾರ್ಮ್ ಹೇಗಿದ್ದೀತು ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ.

Advertisement

ಆದರೆ ಈ ಎರಡೂ ದಾಖಲೆಗಳ ರೇಸ್‌ನಲ್ಲಿ ಕ್ರಿಕೆಟಿಗರು ಹಾವು-ಏಣಿ ಆಟ ಆಡುವುದು ಖಚಿತ!

Advertisement

Udayavani is now on Telegram. Click here to join our channel and stay updated with the latest news.

Next