ಕೇಪ್ ಟೌನ್ : ಭಾರತ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಭಾನುವಾರ ಅಭ್ಯಾಸಕ್ಕೆ ಮರಳಿದ್ದು , ಅವರ ಕವರ್ ಡ್ರೈವ್‌ಗಳು ಮತ್ತು ಆಫ್ ಡ್ರೈವ್‌ಗಳು ಪರಿಪೂರ್ಣವಾಗಿರುವುದು ಕಂಡು ಬಂದರೆ ದಕ್ಷಿಣ ಆಫ್ರಿಕಾ ವಿರುದ್ಧದ ನಿರ್ಣಾಯಕ ಮೂರನೇ ಪಂದ್ಯಕ್ಕೆ ಮರಳುವ ಸಾಧ್ಯತೆಗಳಿವೆ.
ಬೆನ್ನುಮೂಳೆಯ ಸೆಳೆತದಿಂದಾಗಿ ಎರಡನೇ ಪಂದ್ಯದಿಂದ ಹೊರಗುಳಿದಿದ್ದರು, ಉಪನಾಯಕ ಕೆ ಎಲ್ ರಾಹುಲ್ ಅವರು ತಂಡವನ್ನು ಮುನ್ನೆಡೆಸಿದ್ದರು.
ಜೋಹಾನ್ಸ್‌ಬರ್ಗ್‌ನಲ್ಲಿನ ಸೋಲಿನಿಂದ ಚೇತರಿಸಿಕೊಳ್ಳಲು ಮತ್ತು ಸರಣಿ ಗೆಲುವನ್ನು ಪಡೆಯುವ ಆಶಯದೊಂದಿಗೆ ಭಾರತ ತಂಡವು ಮೂರನೇ ಮತ್ತು ಅಂತಿಮ ಟೆಸ್ಟ್‌ಗಾಗಿ ತರಬೇತಿಯನ್ನು ಭಾನುವಾರ ಪ್ರಾರಂಭಿಸಿದೆ.
”ನಾವು ಇಲ್ಲಿ ಸುಂದರವಾದ ಕೇಪ್ ಟೌನ್‌ನಲ್ಲಿದ್ದೇವೆ. ಟೀಮ್ ಇಂಡಿಯಾ 3 ನೇ ಟೆಸ್ಟ್‌ಗೆ ತಯಾರಿಯನ್ನು ಪ್ರಾರಂಭಿಸಿದೆ ,” ಎಂದು ಭವ್ಯವಾದ ನ್ಯೂಲ್ಯಾಂಡ್ಸ್ ಮೈದಾನಕ್ಕಿಳಿದ ಭಾರತೀಯ ಶಿಬಿರದ ಚಿತ್ರಗಳೊಂದಿಗೆ ಬಿಸಿಸಿಐ ಟ್ವೀಟ್ ಮಾಡಿದೆ. ಮೂರನೇ ಟೆಸ್ಟ್ ಜನವರಿ 11-15ರವರೆಗೆ ನಡೆಯಲಿದೆ.
ಮತ್ತೊಂದು ಟ್ವೀಟ್‌ನಲ್ಲಿ ಕೊಹ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದೆ. ದಕ್ಷಿಣ ಆಫ್ರಿಕಾದ ನೆಲದಲ್ಲಿ ತಮ್ಮ ಮೊದಲ ಸರಣಿಯನ್ನು ಗೆಲ್ಲಲು ಬಯಸುತ್ತಿರುವ ಭಾರತ , ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಏಳು ವಿಕೆಟ್‌ಗಳ ಸೋಲಿಗೆ ಶರಣಾಗಿತ್ತು. ಮೊದಲ ಸೆಂಚುರಿಯನ್ ಪಂದ್ಯದಲ್ಲಿ113 ರನ್‌ಗಳಿಂದ ಗೆದ್ದುಕೊಂಡಿತ್ತು.
ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಸರಣಿ-ನಿರ್ಣಯ ಪಂದ್ಯಕ್ಕೆ ನಾಯಕ ಕೊಹ್ಲಿ ಮರಳುವ ಭರವಸೆಯಿದೆ ಎಂದು ಹೇಳಿದ್ದರು. ಭಾರತ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಸಂಬಂಧಿಸಿದಂತೆ, ಮೊಹಮ್ಮದ್ ಸಿರಾಜ್ ಬದಲಿಗೆ ಅನುಭವಿ ಸೀಮರ್ ಇಶಾಂತ್ ಶರ್ಮಾ ಬರುವ ಸಾಧ್ಯತೆಯಿದೆ. ಅವರು ಎರಡನೇ ಟೆಸ್ಟ್‌ನಲ್ಲಿ ಮಂಡಿಯ ಗಾಯಕ್ಕೆ ಒಳಗಾಗಿದ್ದರು.