ಆರ್‌ಸಿಬಿ ತಂಡದ ಸ್ಟಾರ್ ಆಟಗಾರರಾದ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿವಿಲಿಯರ್ಸ್ ಚೆನ್ನೈಗೆ ಬಂದಿಳಿದಿದ್ದಾರೆ. ಒಂದು ವಾರದ ಕ್ವಾರಂಟೈನ್ ಮುಗಿಸಿದ ಬಳಿಕ ಅಭ್ಯಾಸಕ್ಕೆ ಹಾಜರಾಗಲಿದ್ದಾರೆ. ಎ. 9ರಂದು ಆರಂಭವಾಗಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.
“ಬ್ರೇಕಿಂಗ್ ದಿ ಇಂಟರ್ನೆಟ್: ವೈಮಾನಿಕ ನೌಕೆ ಬಂದಿಳಿದೆ’ ಎಂದು ಆರ್‌ಸಿಬಿ ಟ್ವೀಟ್ ಮೂಲಕ ಎಬಿಡಿ ಅವರನ್ನು ತಂಡಕ್ಕೆ ಬರಮಾಡಿಕೊಂಡಿದೆ.
ಚೆನ್ನೈಗೆ ಕೈಕೊಟ್ಟ ಹ್ಯಾಝಲ್‌ವುಡ್ :
ಚೆನ್ನೈ ತಂಡದ ಆಸ್ಟ್ರೇಲಿಯನ್ ವೇಗಿ ಜೋಶ್ ಹ್ಯಾಝಲ್‌ವುಡ್ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. “ಕಳೆದ 10 ತಿಂಗಳಿಂದ ಜೈವಿಕ ಸುರಕ್ಷಾ ವಲಯ ಹಾಗೂ ಕ್ವಾರಂಟೈನ್‌ನಲ್ಲೇ ಹೆಚ್ಚಿನ ಅವಧಿ ಕಳೆದಿದ್ದೇನೆ. ಹೀಗಾಗಿ ಮುಂದಿನ ಎರಡು ತಿಂಗಳು ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದು ಕುಟುಂಬದ ಜತೆ ಇರಲು ನಿರ್ಧರಿಸಿದ್ದೇನೆ’ ಎಂದು ಹ್ಯಾಝಲ್‌ವುಡ್ ತಿಳಿಸಿದ್ದಾರೆ.
ಹ್ಯಾಝಲ್‌ವುಡ್ ಸ್ಥಾನಕ್ಕೆ ಸದ್ಯ ಸಿಎಸ್‌ಕೆ ಯಾವುದೇ ಆಟಗಾರನನ್ನು ಸೇರಿಸಿಕೊಂಡಿಲ್ಲ.
ನಿತೀಶ್ ರಾಣಾಗೆ ಕೋವಿಡ್ ನೆಗೆಟಿವ್ :
ಕೆಕೆಆರ್ ತಂಡದ ಎಡಗೈ ಆಟಗಾರ ನಿತೀಶ್ ರಾಣಾ ಅವರಿಗೆ ಕೋವಿಡ್ ನೆಗೆಟಿವ್ ಫಲಿತಾಂಶ ದೊಂದಿಗೆ ತಂಡದ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಿದ್ದಾರೆ.
ಮಾ. 19ರಂದು ಮುಂಬಯಿ ಹೊಟೇಲಿನಲ್ಲಿ ಕೋವಿಡ್ ಟೆಸ್ಟ್ ನಡೆಸಿದಾಗ ರಾಣಾ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ 3 ದಿನಗಳ ಬಳಿಕ ಪಾಸಿಟಿವ್ ಬಂದ ಕಾರಣ ಅವರನ್ನು ಕೆಕೆಆರ್ ತಂಡ ದಿಂದ ಪ್ರತ್ಯೇಕಗೊಳಿಸಲಾಯಿತು. ಗುರುವಾರ ನಡೆಸಲಾದ ಮತ್ತೂಂದು ಟೆಸ್ಟ್‌ನಲ್ಲಿ ರಾಣಾ ಫಲಿತಾಂಶ ನೆಗೆಟಿವ್ ಬಂದಿದೆ.