Advertisement
ಸ್ಥಳೀಯರಿಗೆ ಕಿರಿಕಿರಿಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಖರ್ಚು ಮಾಡುವುದರೊಂದಿಗೆ ರಸ್ತೆಯಲ್ಲಿ ಸಾಗುವ ಸ್ಥಳೀಯರಿಗೆ, ವಾಹನ ಸವಾರರಿಗೆ ಅಡ್ಡಿಯುಂಟಾಗುತ್ತಿದೆ. ಈ ಜಾಗದಲ್ಲಿ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಹುಡುಕುವ ಪ್ರಯತ್ನವನ್ನು ಪಾಲಿಕೆ ಮಾಡಿಲ್ಲ ಎನ್ನುವುದು ಆರೋಪ.
ಜೋರಾಗಿ ಮಳೆ ಬಂದರೆ ಈ ಪ್ರದೇಶದ ಸುತ್ತಮುತ್ತಲಿನ ಮನೆಗೆ ಕೃತಕ ನೆರೆ ಉಂಟಾಗುತ್ತದೆ. ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಸಮರ್ಪಕವಾಗಿರದ ಕಾರಣ, ಮಳೆ ನೀರು ರಾಜಕಾಲುವೆಯನ್ನು ಸೇರುತ್ತಿಲ್ಲ. ಬದಲಾಗಿ ರಸ್ತೆಯಲ್ಲಿಯೇ ಹರಿದು ಅಕ್ಕ-ಪಕ್ಕದ ಫ್ಲಾಟ್, ಮನೆಗಳಿಗೆ ನುಗ್ಗುತ್ತಿದೆ. ಕಳೆದ ವರ್ಷ ಕೂಡ ಇದೇ ರೀತಿಯ ಸಮಸ್ಯೆ ಉಂಟಾಗಿ ರಸ್ತೆ ಅಗೆದು ಕಾಮಗಾರಿ ನಡೆಸಲಾಗಿತ್ತು. ಇದೀಗ ಶನಿವಾರದಿಂದ ಮತ್ತೂಮ್ಮೆ ರಸ್ತೆ ಅಗೆಯುವ ಕೆಲಸದಲ್ಲಿ ಪಾಲಿಕೆ ತೊಡಗಿಸಿಕೊಂಡಿದೆ. ಹಲವು ಬಾರಿ ಕೆಲಸ
ಈ ರಸ್ತೆಯಲ್ಲಿ ಹಾದು ಹೋಗುವ ನೀರಿನ ಪೈಪ್‌ಲೈನ್ ಕೆಲ ತಿಂಗಳ ಹಿಂದೆ ಕೆಟ್ಟಿತ್ತು. ಇದೇ ಕಾಮಗಾರಿಗೆ ಡ್ರಿಲ್ಲಿಂಗ್ ಮಷೀನ್ ಮುಖೇನ ರಸ್ತೆ ಅಗೆಯಲಾಗಿತ್ತು. ಈ ಕಾಮಗಾರಿ ನಡೆಯುತ್ತಿರುವ ಕೂಗಳತೆ ದೂರದಲ್ಲಿ ಒಳಚರಂಡಿ ಕಾಮಗಾರಿಗೆಂದು ಸುಮಾರು 5 ಅಡಿಯಷ್ಟು ಆಳ ರಸ್ತೆ ಅಗೆಯಲಾಗಿತ್ತು. ಭಾರೀ ಮಳೆಯಿಂದಾಗಿ ಈ ಭಾಗದ ಒಳಚರಂಡಿ ಪೈಪ್‌ಲೈನ್‌ನ ಹತ್ತು ಅಡಿ ಆಳದಲ್ಲಿ ದೊಡ್ಡ ಗಾತ್ರದ ಕಲ್ಲು ಸಿಲುಕಿ ಹಾಕಿಕೊಂಡಿದ್ದರಿಂದ ನೀರು ಹರಿಯುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸುಮಾರು ಎರಡು ವಾರಗಳ ಬಳಿಕ ಕಾಮಗಾರಿ ಪೂರ್ಣಗೊಂಡಿತ್ತು.
Related Articles
ಬಳಿಕ ಪಕ್ಕದ ಮ್ಯಾನ್‌ಹೋಲ್‌ಗೆ ಪೈಪ್‌ಲೈನ್ ಸಂಪರ್ಕ ನೀಡಲಾಯಿತು. ಈವರೆಗೆ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
Advertisement
ಪರಿಹಾರಕಳೆದ ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ಹರಿಯದೆ ಸುತ್ತಮುತ್ತಲಿನ ಮನೆಗಳಿಗೆ ನುಗ್ಗಿತ್ತು. ಅದೇ ಕಾರಣಕ್ಕೆ ಚರಂಡಿ ಕಾಮಗಾರಿ ಶನಿವಾರ ಆರಂಭಗೊಂಡಿದ್ದು, ಎರಡು ವಾರದಲ್ಲಿ ಪೂರ್ಣಗೊಳ್ಳಲಿದೆ. ಕಳೆದ ಬಾರಿ ಮಾಡಿದ್ದ ಕಾಮಗಾರಿ ಸಮರ್ಪಕವಾಗಿಲ್ಲ. ಇದೇ ಕಾರಣಕ್ಕೆ ಆ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿಲ್ಲ. ಈ ಬಾರಿ ಖಂಡಿತವಾಗಿಯೂ ಸಮಸ್ಯೆಗೆ ಪರಿಹಾರ ಸಿಗುತ್ತದೆ.
-ಯಶವಂತ್, ಸ್ಥಳೀಯ ಕಾರ್ಪೊರೇಟರ್. ದೂರಿನ ಹಿನ್ನೆಲೆ
ಕೊಡಿಯಾಲ್‌ಗುತ್ತು ಕ್ರಾಸ್ ಬಳಿ ನೀರು ಹರಿಯುವ ತೋಡಿಗೆ ಚರಂಡಿ ಸಂಪರ್ಕ ಕಲ್ಪಿಸಲಾಗುತ್ತಿದೆ. ವಿವಿಧ ಕಡೆಗಳಿಂದ ಹರಿದು ಬಂದ ಮಳೆ ನೀರು ಚರಂಡಿ ಸೇರದೆ ಕೃತಕ ನೆರೆ ಬರುತ್ತಿತ್ತು. ಮನೆ ಮಂದಿ ಈ ಬಗ್ಗೆ ದೂರು ನೀಡಿದ್ದು, ಕಾಮಗಾರಿ ಆರಂಭಿಸಲಾಗಿದೆ. ಈ ಹಿಂದೆ ನಡೆದ ಕಾಮಗಾರಿ ಬಗ್ಗೆ ಇಂಜಿನಿಯರ್ ಅವರೇ ಉತ್ತರಿಸಬೇಕು.
-ಸುಧೀರ್ ಶೆಟ್ಟಿ ಕಣ್ಣೂರು ಸ್ಥಳೀಯ ಕಾರ್ಪೊರೇಟರ್.