Advertisement
ಪ್ರಾರಂಭಿಕ ಹಂತದಲ್ಲಿ ಕೋಡಿಬೆಂಗ್ರೆ ಗ್ರಾ.ಪಂ.ಅನ್ನು ಆಯ್ಕೆ ಮಾಡಲಾಗಿದ್ದು, ಸರ್ವೇ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಗ್ರಾಮದಲ್ಲಿ 2 ಸಾವಿರ ಜನಸಂಖ್ಯೆಯಿದ್ದು, ಕೆಲವು ಮಂದಿಯಷ್ಟೇ ತಂಬಾಕು ಸೇವನೆಮಾಡುತ್ತಿದ್ದಾರೆ. ಈ ಬಗ್ಗೆ ಎಲ್ಲೆಡೆ ಜಾಗೃತಿ ಕಾರ್ಯಕ್ರಮಹಮ್ಮಿಕೊಳ್ಳಲಾಗಿದ್ದು, ತಂಬಾಕು ಮುಕ್ತ ಹಳ್ಳಿಯತ್ತ ಕೋಡಿಬೆಂಗ್ರೆ ಗ್ರಾಮ ಮೊದಲ ಹೆಜ್ಜೆಯನ್ನಿರಿಸಿದೆ.
ಸರ್ವೇ ಕಾರ್ಯದ ಸಂದರ್ಭ ನಿರಂತರ ಆರೋಗ್ಯತಪಾಸಣೆ ಮಾಡಲಾಗುತ್ತದೆ. ಆರೋಗ್ಯ ಕಾರ್ಯಕ್ರಮಗಳು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಷಯರೋಗ ಗಳನ್ನು ತಪಾಸಣೆ ಮಾಡಲಾಗುತ್ತದೆ. ಈ ಬಗ್ಗೆ ಗ್ರಾಮದಲ್ಲಿ ಧನಾತ್ಮಕ ಪ್ರತಿಕ್ರಿಯೆ ಕಂಡುಬರುತ್ತಿದೆ. ಇದರಜತೆಗೆ ಜಾಗೃತಿ ಮೂಡಿಸುವ ಹಲವು ಕಾರ್ಯಕ್ರಮ ನಡೆಸಲಾಗುತ್ತಿದೆ. ಶಾಲಾ-ಕಾಲೇಜು ವ್ಯಾಪ್ತಿ ಸಹಿತ ಯಾವುದೇ ಅಂಗಡಿಗಳಲ್ಲಿ ತಂಬಾಕು ವಸ್ತುಗಳನ್ನು ಮಾರಾಟ ಮಾಡದಂತೆ ಈಗಾಗಲೇ ಎಚ್ಚರಿಕೆಯನ್ನೂ ನೀಡಲಾಗಿದೆ. ನಿರಂತರ ದಾಳಿ
ಹಳ್ಳಿಗಳನ್ನು ತಂಬಾಕು ಮುಕ್ತಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ತಂಬಾಕು ಮಾರಾಟ ಮಾಡುತ್ತಿರುವ ಹಲವಾರು ಅಂಗಡಿಗಳಿಗೆ ದಾಳಿ ನಡೆಸಿ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಲಾಗಿದೆ.ಆಯಾ ಕಟ್ಟಿನ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನೂ ಅಳವಡಿಕೆ ಮಾಡಲಾಗಿದೆ. ಉಡುಪಿ-ಮಣಿಪಾಲದಂತಹ ನಗರ ಭಾಗಗಳಲ್ಲಿಯೂ ದಾಳಿ ಮಾಡಿ ಎಚ್ಚರಿಕೆ ನೀಡಲಾಗಿದೆ. ಇಂತಹ ಘಟನೆಗಳು ಮರುಕಳಿಸಿದರೆ ಪರವಾನಿಗೆ ರದ್ದುಮಾಡುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನುತ್ತಾರೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರಾದ ಮಂಜುಳಾ ಶೆಟ್ಟಿ.
Related Articles
ಜಿಲ್ಲೆಯನ್ನು ತಂಬಾಕು ಮುಕ್ತಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ವಿವಿಧ ಹಳ್ಳಿಗಳನ್ನು ಗುರುತಿಸ
ಲಾಗಿದೆ. ಮುಂದಿನ ಹಂತದಲ್ಲಿ ಬಿಜೂರಿನಲ್ಲಿ ಸರ್ವೇ ಕಾರ್ಯ ಆರಂಭಗೊಳ್ಳಲಿದೆ. ಅನಂತರ ಕುಂದಾಪುರದ ಕೊರ್ಗಿ ಸಹಿತ ವಿವಿಧ ತಾಲೂಕುಗಳಲ್ಲಿರುವ ಹಳ್ಳಿಗಳನ್ನು ಗುರುತಿಸಿ ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಸರ್ವೇಕ್ಷಣ ಘಟಕದ ಮೂಲಗಳು ತಿಳಿಸಿವೆ.
Advertisement
ಪ್ರಕ್ರಿಯೆ ನಿರಂತರ ಮುಂದುವರಿಕೆಜಿಲ್ಲೆಯಾದ್ಯಂತ ವಿವಿಧ ಹಳ್ಳಿಗಳನ್ನು ತಂಬಾಕು ಮುಕ್ತವನ್ನಾಗಿಸಲು ಸರ್ವೇ ಕಾರ್ಯ ನಡೆಯುತ್ತಿದೆ. ಪ್ರಾರಂಭಿಕ ಹಂತದಲ್ಲಿ ಕೋಡಿಬೆಂಗ್ರೆಯನ್ನು ಸಂಪೂರ್ಣ ತಂಬಾಕುಮುಕ್ತ ಹಳ್ಳಿಯನ್ನಾಗಿ ಮಾಡಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಲಿದೆ.
–ಡಾ| ನಾಗರತ್ನಾ,
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ – ಪುನೀತ್ ಸಾಲ್ಯಾನ್