Advertisement
ಶನಿವಾರ ನಡೆದ ಸೆಮಿಫೈನಲ್ ಕಳೆದ ಬಾರಿಯ ಚಾಂಪಿ ಯನ್ ಕುಪ್ಪಂಡ ತಂಡ ನೆಲ್ಲಮಕ್ಕಡ ತಂಡದ ವಿರುದ್ಧ ಹಾಗೂ ಕುಲ್ಲೇಟಿರ ತಂಡ ಚೇಂದಂಡ ವಿರುದ್ಧ ಸೋಲನುಭವಿಸಿತು. ಮೊದಲ ಸೆಮಿಫೈನಲ್ಸ್‌ನಲ್ಲಿ ಕುಲ್ಲೇಟಿರ ತಂಡದ ವಿರುದ್ಧ ಚೇಂದಂಡ ತಂಡ 3-1 ಗೋಲುಗಳಿಂದ ಜಯ ಸಾಧಿಸಿತು.
ವಿಶ್ವದ ಬೃಹತ್ ಫೀಲ್ಡ್ ಹಾಕಿ ಕೂಟ ಎಂಬ ಗಿನ್ನೆಸ್ ದಾಖಲೆಯತ್ತ ಕೊಡವ ಕಪ್ ಹೆಜ್ಜೆಯಿಟ್ಟಿದೆ. ರವಿವಾರ ಗಿನ್ನೆಸ್ ಅಧಿಕಾರಿಗಳು ಫೈನಲ್ ಪಂದ್ಯಕ್ಕೆ ಆಗಮಿಸಲಿದ್ದು, ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ಈ ಬಾರಿ ಕೊಡವ ಹಾಕಿಯಲ್ಲಿ 360 ತಂಡಗಳು ನೋಂದಣಿ ಮಾಡಿಕೊಂಡಿದ್ದವು. ಇದರಲ್ಲಿ 340 ತಂಡಗಳು ಕ್ರೀಡಾಕೂಟದಲ್ಲಿ ಭಾಗಿಯಾಗಿವೆ. ಈ ಹಿನ್ನೆಲೆಯಲ್ಲಿ ಕೂಟ ದಾಖಲೆ ಪುಸ್ತಕ ಸೇರುವತ್ತ ಸಾಗಿದೆ.