Advertisement

Madikeri ಮೌಂಟ್‌ ಎಲ್‌ಬ್ರಸ್‌ನಲ್ಲಿ ಭಾರತದ ಪತಾಕೆ ಹಾರಿಸಿದ ಕೊಡಗಿನ ಪ್ರೀತ್‌ ಅಪ್ಪಯ್ಯ

12:56 AM Aug 19, 2024 | Team Udayavani |

ಮಡಿಕೇರಿ: ದಕ್ಷಿಣ ಕೊಡಗಿನ ಗೋಣಿಕೊಪ್ಪಲಿನ ಅತ್ತೂರು ಜಮ್ಮಡ ಅಯ್ಯಣ್ಣ ಅವರ ಪತ್ನಿ ಜಮ್ಮಡ ಪ್ರೀತ್‌ ಅಪ್ಪಯ್ಯ ಅವರು ಯೂರೋಪ್‌ ಮತ್ತು ರಷ್ಯಾ ಖಂಡದ ಅತಿ ಎತ್ತರದ ಶಿಖರ ಮೌಂಟ್‌ ಎಲ್‌ಬ್ರಸ್‌ (Mount Elbrus)ನಲ್ಲಿ ಆಗಸ್ಟ್‌ 15ರ ಸ್ವಾತಂತ್ರ್ಯೋತ್ಸವದಂದು ಭಾರತದ ಬಾವುಟವನ್ನು ಎತ್ತಿ ಹಿಡಿಯುವ ಮೂಲಕ ದೇಶಾಭಿಮಾನ ಮೆರೆದಿದ್ದಾರೆ.

Advertisement

ಪ್ರೀತ್‌ ಅಪ್ಪಯ್ಯ ಈವರೆಗೆ ಹಲವು ಪರ್ವತಾರೋಹಣ ಮಾಡಿದ್ದಾರೆ. ಈ ಬಾರಿ ಯೂರೋಪ್‌ನ ಅತೀ ದೊಡ್ಡ ಶಿಖರ (5,642 ಮೀಟರ್‌)ವನ್ನು ಏರುವ ಸಾಧನೆ ಮಾಡಿದ್ದಾರೆ.

2012ರಲ್ಲಿ ನಾಪೋಕ್ಲು ಸಮೀಪದ ಪೇರೂರು ಗ್ರಾಮದ ಪರ್ವತರೋಹಿ ತೆಕ್ಕಡ ಭವಾನಿಮೌಂಟ್‌ ಎಲ್‌ಬ್ರಸ್‌ ಏರಿ ಭಾರತದ ಪತಾಕೆಯನ್ನು ಹಾರಿಸಿದ ಕರ್ನಾಟಕದ ಹಾಗೂ ಕೊಡಗಿನ ಮೊದಲ ಮಹಿಳೆಯಾದರೆ ಜಮ್ಮಡ ಪ್ರೀತ್‌ ಅಪ್ಪಯ್ಯ ದ್ವಿತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next