Advertisement

ಕೊಡವತಿ ಪುಣ್ಯಾ ನಂಜಪ್ಪ ಫೈಟರ್‌ ಪೈಲಟ್‌

02:49 AM Jul 01, 2020 | Hari Prasad |

ಮಡಿಕೇರಿ: ಕರ್ನಾಟಕದ ಕಾಶ್ಮೀರ ಎಂದೇ ಹೆಸರಾಗಿರುವ ಕೊಡಗು ಜಿಲ್ಲೆ ದೇಶಕ್ಕೆ ವೀರ ಯೋಧರನ್ನು ನೀಡುವ ವಿಚಾರದಲ್ಲೂ ಮುಂಚೂಣಿಯಲ್ಲಿದೆ.

Advertisement

ಇದೀಗ ವೀರ ಯೋಧರ ಭೂಮಿ ಕೊಡಗಿನ ಮಣ್ಣಿಗೆ ಇನ್ನೊಂದು ಗರಿಮೆ ಸೇರ್ಪಡೆಗೊಂಡಿದೆ.

ಭಾರತೀಯ ವಾಯು ಸೇನೆಯ ಯುದ್ಧ ವಿಮಾನ ಪೈಲಟ್‌ ಆಗಿ ಕೊಡಗಿನ ಪುಣ್ಯಾ ನಂಜಪ್ಪ ಆಯ್ಕೆಯಾಗಿದ್ದಾರೆ.

ಅದರಲ್ಲೂ ಫೈಟರ್ ಪೈಲಟ್ ತರಬೇತಿಗೆ ಆಕೆಯಾಗಿರುವ ಈ ಬ್ಯಾಚ್ ನ 40 ಜನರ ಪೈಕಿ ಪುಣ್ಯಾ ಅವರೊಬ್ಬರೇ ಮಹಿಳೆಯಾಗಿರುವುದು ಎಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ.

ಪುಣ್ಯಾ ನಂಜಪ್ಪ ಐಎಎಫ್ ಟ್ರೈನಿಂಗ್‌ ಅಕಾಡೆಮಿಯಲ್ಲಿ ಪ್ರಾಥಮಿಕ ತರಬೇತಿಯ ಬಳಿಕ ಹೆಚ್ಚಿನ ತರಬೇತಿಗಾಗಿ ಹೈದರಾಬಾದ್‌ನ ಕೇಂದ್ರ ಸೇರಿದ್ದಾರೆ.

Advertisement

ಪುಣ್ಯಾ ನಂಜಪ್ಪ ಅವರು ಮೂಲತಃ ಚೆಂಬೆಬೆಳ್ಳೂರಿನವರಾಗಿದ್ದು ದಿ. ನಂಜಪ್ಪ ಹಾಗೂ ಅನು ನಂಜಪ್ಪ ದಂಪತಿಯ ಪುತ್ರಿಯಾಗಿದ್ದಾರೆ.

2018 ರಿಂದ ಸುಮಾರು ಒಂದು ವರ್ಷಗಳ ಕಾಲ ವಿವಿಧ ಹಂತಗಳ ಪರೀಕ್ಷೆಗಳನ್ನು ಎದುರಿಸಿ 2019ರಲ್ಲಿ ಮೆರಿಟ್ ವಿದ್ಯಾರ್ಥಿನಿಯಾಗಿ ಮೂಡಿಬಂದು ಹೈದರಾಬಾದ್ ನ ದುಂಡಿಗಲ್ ನಲ್ಲಿರುವ ಇಂಡಿಯನ್ ಏರ್ ಫೋರ್ಸ್ ಅಕಾಡೆಮಿಗೆ ಸೇರ್ಪಡೆಗೊಂಡರು.

ಸದ್ಯ ಪುಣ್ಯಾ ಅವರು ಹಕ್ಕಿನ ಪೇಟೆ ತರಬೇತಿ ಕೇಂದ್ರದಲ್ಲಿ ಫೈಟರ್ ಪೈಲಟ್ ಆಗಿ ಹೆಚ್ಚಿನ ತರಬೇತಿಯನ್ನು ಪಡೆದುಕೊಳ್ಳಲಿದ್ದಾರೆ ಹಾಗೂ ಇದೇ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ಅವರು ಕಮಿಷನ್ಡ್ ಅಧಿಕಾರಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next