Advertisement
ಹೌದು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೊಡಗಿನ ಅಂತರ್ಜಲಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಭೂಮಿಯ ಒಡಲು ಸಂಪೂರ್ಣವಾಗಿ ತೇವಗೊಂಡಿದ್ದು, ಅದರ ಮೇಲೆ ಎಡಬಿಡದೆ ಮಳೆಯಾಗುತ್ತಿದೆ. ಹೀಗೆ ನಿರಂತರವಾಗಿ ನೆನೆದ ಮಣ್ಣು ಸಡಿಲಗೊಂಡು ಗುಡ್ಡಗಳ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ಭೂವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಬೇರೆ ಪ್ರದೇಶಗಳಂತೆ ಕೊಡಗು ಮೇಲ್ನೋಟಕ್ಕೆ ಭೂಮಿಯ ಮೇಲೆ ನಿಂತಂತೆ ಕಾಣುತ್ತಿದೆ. ಆದರೆ, ತಾಂತ್ರಿಕವಾಗಿ ಸಮುದ್ರದ ಮೇಲಿನ ಹಡಗಿನಂತೆ ತೇಲುತ್ತಿದೆ. ಆ ಹಡಗಿನ ಮೇಲೆ ಮಳೆಯ ರುದ್ರನರ್ತನ ಆಗುತ್ತಿದೆ ಎಂದು ವಿಶ್ಲೇಷಿಸುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಉಸ್ತುವಾರಿ ಕೇಂದ್ರದ ನಿರ್ದೇಶಕ ಹಾಗೂ ಭೂವಿಜ್ಞಾನಿ ಡಾ.ಶ್ರೀನಿವಾಸ ರೆಡ್ಡಿ.
Related Articles
Advertisement
ಫÅಯಾಟಿಕ್ ಝೋನ್‌ನಲ್ಲಿ ನೀರುಅಂತರ್ಜಲದಲ್ಲಿ “ಫÅಯಾಟಿಕ್ ಝೋನ್’ (ಮಣ್ಣಿನ ಪದರದಲ್ಲಿರುವ ನೀರು) ಇರುತ್ತದೆ. ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಣೆಯಾಗಿ, ಮಣ್ಣು ಸಡಿಲಗೊಂಡು ಜಾರುತ್ತದೆ. ಆಗ, ಇಳಿಜಾರು ಯಾವ ಕಡೆ ಇರುತ್ತದೆಯೋ ಅತ್ತ ಗುಡ್ಡ ವಾಲುತ್ತದೆ. ಇನ್ನು ಗುಡ್ಡಗಳು ಸಂಪೂರ್ಣ ಶಿಲೆಗಳಿಂದ ಕೂಡಿರುವುದಿಲ್ಲ. ಮಣ್ಣಿನಿಂದಲೂ ಆವೃತವಾಗಿರುತ್ತದೆ ಎಂದು ಕೊಡಗು ಜಿಲ್ಲೆಯ ಅಂತರ್ಜಲ ಕಚೇರಿ ಹಿರಿಯ ಭೂವಿಜ್ಞಾನಿ ಕೆ.ಜಿ. ಸೌಮ್ಯ ಅಭಿಪ್ರಾಯಪಡುತ್ತಾರೆ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯೊಂದಿಗೆ ಹಸಿರಿನ ಪದರು ಕೂಡ ಕಿತ್ತುಹೋಗಿದೆ. ಕೊನೆಪಕ್ಷ ಮರಗಳು ಇದ್ದರೆ, ನೀರನ್ನು ಸಾಧ್ಯವಾದಷ್ಟು ಹಿಡಿದಿಡುತ್ತಿದ್ದವು. ಈಗ ಒಂದು ಮರ ಧರೆಗುರುಳುತ್ತಿದ್ದಂತೆ, ಆ ಜಾಗದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಇದು ಅನಾಹುತದ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಸಾಮಾನ್ಯವಾಗಿ ಮಳೆ ಬಿದ್ದಾಗ, ಶೇ. 5ರಷ್ಟು ಭೂಮಿಗಿಳಿದರೆ, ಉಳಿದದ್ದು ಹರಿದುಹೋಗುತ್ತದೆ. ಆದರೆ, ಕೊಡಗು ಸಂಪೂರ್ಣ ನೀರಿನಿಂದ ಆವೃತವಾಗಿರುವುದರಿಂದ ನೀರಿನ ಹರಿವು ಅಧಕ್ಕರ್ಧ ಕುಸಿದಿದೆ ಎಂದೂ ಸೌಮ್ಯ ಹೇಳಿದ್ದಾರೆ. ಹಲವು ಕಾರಣ ಇರಬಹುದು; ಜಿಎಸ್‌ಐ ಗುಡ್ಡಗಳ ಕುಸಿತಕ್ಕೆ ಹಲವು ಕಾರಣಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ನೀರು ಒಳಗೆ ನುಸುಳುವುದು, ಆ ಭಾಗದ ಭೂಮಿಯಲ್ಲಿನ ಶಿಲೆಗಳ ಗುಣಲಕ್ಷಣಗಳು, ಪ್ರಕೃತಿಯಲ್ಲಿ ಮನುಷ್ಯನ ಹಸ್ತಕ್ಷೇಪ ಅಂದರೆ ಇಳಿಜಾರುಗಳಲ್ಲಿ ಮನೆಗಳನ್ನು ನಿರ್ಮಿಸುವುದು, ರಸ್ತೆಗಳನ್ನು ನಿರ್ಮಿಸಿದ ಕೆಳಭಾಗದಲ್ಲಿ ನದಿ ಹರಿಯುತ್ತಿರಬಹುದು. ಹಾಗಾಗಿ, ಇಂತಹದ್ದೇ ಕಾರಣವೆಂದು ಈಗಲೇ ನಿರ್ಧಾರಕ್ಕೆ ಬರುವುದು ಕಷ್ಟ ಎಂದು ಭಾರತೀಯ ಭೂಸರ್ವೇಕ್ಷಣೆ (ಜಿಎಸ್‌ಐ) ನಿರ್ದೇಶಕ ಕೆ.ವಿ. ಮಾರುತಿ ಸ್ಪಷ್ಟಪಡಿಸುತ್ತಾರೆ. – ವಿಜಯಕುಮಾರ್ ಚಂದರಗಿ