Advertisement
ತಲಕಾವೇರಿ ಹಾಗೂ ಭಾಗ ಮಂಡಲ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ದಕ್ಷಿಣ ಕೊಡಗು ಪೊನ್ನಂಪೇಟೆ ತಾಲೂಕಿನ ಬಿರುನಾಣಿ ವ್ಯಾಪ್ತಿಯಲ್ಲಿ 5 ದಿನಗಳಿಂದ ಧಾರಾಕಾರ ಮಳೆಯಾ ಗುತ್ತಿದೆ. ಚೊಟ್ಟಂಗಡ ಬೋಸ್ ಅವರ ಮನೆಯ ಸಮೀಪದ ಕಾಫಿ ತೋಟ ದಲ್ಲಿ ಜಲಸ್ಫೋಟವಾಗಿದ್ದು, ಕಲ್ಲು, ಕೆಸರು ನೀರಿನ ರಭಸದಿಂದ ಕಾಫಿ ತೋಟ ಸಂಪೂರ್ಣ ನಾಶವಾಗಿದೆ.
Related Articles
Advertisement
ಸಂಚಾರ ಅಸ್ತವ್ಯಸ್ತಚೆಟ್ಟಳ್ಳಿ-ಮಡಿಕೇರಿ ಮುಖ್ಯ ರಸ್ತೆಯ ದೊಡ್ಡ ಅಬ್ಯಾಲದ ರಸ್ತೆಗೆ ಬರೆ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ. ನಾಪೋಕ್ಲು-ಬೆಟ್ಟಗೇರಿ ಸಂಪರ್ಕಿಸುವ ಕೊಟ್ಟಮುಡಿಯಲ್ಲಿ ರಸ್ತೆ ಕುಸಿದು
ಅಪಾಯದಂಚಿನಲ್ಲಿದೆ. ನಾಪೋಕ್ಲು- ಮೂರ್ನಾಡು ಸಂಪರ್ಕ ಕಲ್ಪಿಸುವ ರಸ್ತೆಯ ಬೊಳಿಬಾಣೆ ಹಾಗೂ ಚೆರಿಯಪರಂಬು-ಕಲ್ಲು ಮೊಟ್ಟೆಯಲ್ಲಿ ನದಿ ನೀರು ರಸ್ತೆಯನ್ನು ಆವರಿಸಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ನೀರಿನ ಮಟ್ಟ ಏರುತ್ತಲೇ ಇರುವುದರಿಂದ ಅಪಾಯದಂಚಿನಲ್ಲಿದ್ದ ಕುಟುಂಬಗಳು ತೆಪ್ಪವನ್ನು ಬಳಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡವು. ತೋಟಗಳಲ್ಲಿ ನದಿ ಪ್ರವಾಹ
ಸಂಪಾಜೆ ಗ್ರಾಮದ ಪಯಸ್ವಿನಿ ನದಿಯ ಸಮೀಪ ಇರುವ ತೋಟಗಳಿಗೆ ಪ್ರವಾಹದ ನೀರು ನುಗ್ಗಿ ಹಾನಿಯಾಗಿದೆ. ಶಾಲೆಗಳಿಗೆ ರಜೆ
ಕೊಡಗಿನಲ್ಲಿ ಮಳೆ ಮುಂದುವರಿ ದಿದ್ದು, ಜು. 8ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೊಡಗು ಜಿಲ್ಲೆಯ ಎಲ್ಲ ಶಾಲೆ ಮತ್ತು ಅಂಗನವಾಡಿಗಳಿಗೆ ಆ. 8ರಂದು ರಜೆ ಘೋಷಿಸಲಾಗಿದೆ.