Advertisement

ಒಂಟಿ ಮನೆಯಲ್ಲಿ ಶತಾಯುಷಿ ಅಜ್ಜಿಯ ಗೋಳು! ಮನೆಯವರೇ ಕರೆದೊಯ್ಯಲಿಲ್ಲ…

06:16 PM Aug 22, 2018 | Team Udayavani |

ಕೊಡಗು: ವರುಣನ ಅಬ್ಬರಕ್ಕೆ ದಕ್ಷಿಣದ ಕಾಶ್ಮೀರ ಎನಿಸಿಕೊಂಡಿದ್ದ ಕೊಡಗು ನಲುಗಿ ಹೋಗಿದ್ದು, ಇದೀಗ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಮತ್ತೊಂದೆಡೆ ಕುಸಿದು ಬಿದ್ದ ಮನೆಗಳು, ಕೊಚ್ಚಿ ಹೋದ ತೋಟಗಳನ್ನು ಕಂಡು ಕಣ್ಣೀರುಗರೆಯುತ್ತಿದ್ದಾರೆ. ಏತನ್ಮಧ್ಯೆ ಕರೆದೊಯ್ಯಲು ಆಗಲ್ಲ ಎಂದು 103 ವರ್ಷದ ಅಜ್ಜಿಯನ್ನು ಕುಟುಂಬಸ್ಥರು ಮನೆಯಲ್ಲೇ ಬಿಟ್ಟು ಹೋದ ಘಟನೆ ಕೊಡಗಿನ ಮುಕ್ಕೋಡ್ಲು ಗ್ರಾಮದಲ್ಲಿ ನಡೆದಿದೆ.

Advertisement

ಮಳೆ ಹಾಗೂ ಪ್ರವಾಹ, ಭೂಕುಸಿತದ ಸಂದರ್ಭದಲ್ಲಿ ಮುಕ್ಕೋಡ್ಲು ಗ್ರಾಮದಲ್ಲಿ 80 ಜನರನ್ನು ರಕ್ಷಿಸಲಾಗಿತ್ತು. ಈ ವೇಳೆ ಅಜ್ಜಿಯನ್ನು ಜೊತೆಗೆ ಕರೆದೊಯ್ಯಲು ಸಾಧ್ಯವಿಲ್ಲ ಎಂದು ಮನೆಯವರೇ ಬಿಟ್ಟು ಹೋಗಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಇದೀಗ ಅಜ್ಜಿ ಊಟ, ತಿಂಡಿ ಇಲ್ಲದೆ ನರಳಾಡುವಂತಾಗಿದೆ. ಒಂಟಿ ಮನೆಯಲ್ಲಿ ಅಜ್ಜಿಯೊಬ್ಬರೇ ದಿನ ಕಳೆಯುತ್ತಿದ್ದಾರೆ. ಪಕ್ಕದಲ್ಲೇ ಇದ್ದ ಮನೆಯವರು ಊಟ ನೀಡುತ್ತಿದ್ದಾರೆ. ಅಜ್ಜಿಯನ್ನು ಸುರಕ್ಷಿತ ಜಾಗಕ್ಕೆ ಕರೆದೊಯ್ಯಿರಿ ಅಂತ ಹೇಳಿದರೆ ಯಾರೂ ಕರೆದುಕೊಂಡು ಹೋಗಲು ತಯಾರಿಲ್ಲ ಎಂದು ಸ್ಥಳೀಯರೊಬ್ಬರು ದೂರಿದ್ದಾರೆ. ಸದ್ಯ ಅಜ್ಜಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೊಮ್ಮಗನಿಗಾಗಿ ಕಾದು ಕುಳಿತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next