ಸಿಡ್ನಿ: ಹತ್ತು ವರ್ಷಗಳ ಹಿಂದೆ ಕೊಚ್ಚಿ ಟಸ್ಕರ್ಸ್ ತಂಡದ ಪರವಾಗಿ ಐಪಿಎಲ್ ನಲ್ಲಿ ಆಡಿದ ಆಟಗಾರರಿಗೆ ಇನ್ನೂ ಪೂರ್ಣ ಹಣ ಪಾವತಿಯಾಗಿಲ್ಲ ಎಂದು ಮಾಜಿ ಆಸೀಸ್ ಆಟಗಾರ ಬ್ರಾಡ್ ಹಾಗ್ ಆರೋಪಿಸಿದ್ದಾರೆ. ಹಾಗ್ 2011ರಲ್ಲಿ ಕೊಚ್ಚಿ ತಂಡದ ಪರ ಆಡಿದ್ದರು.
2011ರಲ್ಲಿ ಐಪಿಎಲ್ ಗೆ ಬಿಸಿಸಿಐ ಎರಡು ಹೆಚ್ಚುವರಿ ತಂಡಗಳನ್ನು ಸೇರಿಸಿತ್ತು. ಇದರಲ್ಲಿ ಒಂದು ಕೊಚ್ಚಿ ಟಸ್ಕರ್ಸ್ ಕೇರಳ ತಂಡ. ಆದರೆ ಆಡಳಿತಾತ್ಮಕ ಅಡಚಣೆಗಳ ಕಾರಣದಿಂದ ಮುಂದಿನ ಆವೃತ್ತಿಗೆ ತಂಡವನ್ನು ಕೈಬಿಡಲಾಗಿತ್ತು.
ಇದನ್ನೂ ಓದಿ:ಟೂಲ್ ಕಿಟ್ ವಿವಾದದ ವಿಚಾರಣೆ; ಇಬ್ಬರು ಕಾಂಗ್ರೆಸ್ ಮುಖಂಡರಿಗೆ ದೆಹಲಿ ಪೊಲೀಸರಿಂದ ನೋಟಿಸ್
ಬ್ರಾಡ್ ಹಾಗ್ ಕೊಚ್ಚಿ ಟಸ್ಕರ್ಸ್ ತಂಡದ ಪರವಾಗಿ 14 ಪಂದ್ಯಗಳನ್ನಾಡಿದ್ದರು. ಆದರೆ ಫ್ರಾಂಚೈಸಿ ಇನ್ನೂ ಶೇ.35ರಷ್ಟು ಹಣವನ್ನು ಆಟಗಾರರಿಗೆ ನೀಡಬೇಕಿದೆ ಎಂದಿದ್ದಾರೆ. ಇನ್ನು ಈ ಹಣ ಪಡೆಯಲು ಏನಾದರೂ ಸಾಧ್ಯವಿದೆಯೇ ಎಂದು ಕೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಬಿಸಿಸಿಐ ಗೆ ಟ್ಯಾಗ್ ಮಾಡಿದ್ದಾರೆ.
ಕಳೆದ ವರ್ಷ ನಡೆದ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಭಾಗಿಯಾದ ಭಾರತೀಯ ಆಟಗಾರರ ಹಣ ಇನ್ನೂ ಸಂದಾಯವಾಗದ ಬಗ್ಗೆ ಸುದ್ದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಬಿಸಿಸಿಐ ಒಂದು ವಾರದೊಳಗೆ ಬಾಕಿ ಹಣ ಪಾವತಿ ಮಾಡುವುದಾಗಿ ತಿಳಿಸಿತ್ತು. ಇದರ ಬೆನ್ನಲ್ಲೆ ಬ್ರಾಡ್ ಹಾಗ್ ಟ್ವೀಟ್ ಮಾಡಿದ್ದಾರೆ