Advertisement

Kochi: ಕೊಚ್ಚಿ ಸ್ಫೋಟ : 54 ಪ್ರಕರಣ ದಾಖಲು

08:18 PM Nov 05, 2023 | Team Udayavani |

ತಿರುವನಂತಪುರಂ: ಕೇರಳದ ಕೊಚ್ಚಿಯಲ್ಲಿ ಇತ್ತೀಚೆಗೆ ನಡೆದ ಸರಣಿ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮುಸಂಘರ್ಷಕ್ಕೆ ಪ್ರಚೋದನೆ ನೀಡುವಂಥ ಪೋಸ್ಟ್‌ಗಳನ್ನು ಹಾಕಿದ ಆರೋಪದ ಮೇರೆಗೆ ಈವರೆಗೆ 54 ಪ್ರಕರಣಗಳನ್ನು ದಾಖಲಿಸಲಾಗಿದೆ.

Advertisement

ಈ ಕುರಿತಂತೆ ಪೊಲೀಸರು ಮಾಹಿತಿ ನೀಡಿದ್ದು, ಒಟ್ಟಾರೆ ಕೇಸುಗಳ ಪೈಕಿ 26 ಕೇಸುಗಳು ಮಲಪ್ಪುರಂ ಜಿಲ್ಲೆಯಲ್ಲಿ ದಾಖಲಾಗಿದ್ದು, 15 ಎರ್ನಾಕುಲಂನಲ್ಲಿ ಹಾಗೂ 5 ಕೇಸುಗಳು ತಿರುವನಂತಪುರದಲ್ಲಿ ದಾಖಲಾಗಿವೆ. ತನಿಖೆ ವೇಳೆ ಹಲವಾರು ಫೇಕ್‌ ಪ್ರೊಫೈಲ್‌ಗ‌ಳ ಮೂಲಕವೂ ಪೋಸ್ಟ್‌ ಮಾಡಿರುವುದನ್ನು ಪತ್ತೆಹಚ್ಚಲಾಗಿದೆ ಎಂದಿದ್ದಾರೆ. ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಅವರ ವಿರುದ್ಧವೂ ಇದೇ ಆರೋಪ ಸಂಬಂಧಿಸಿದಂತೆ 2 ಕೇಸು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next