Advertisement

ಕೊಚ್ಚಿ ಅಂ.ರಾ.ವಿಮಾನನಿಲ್ದಾಣ ಇಂದಿನಿಂದ ಪೂರ್ಣ ಪ್ರಮಾಣದ ಕಾರ್ಯಾಚರಣೆ

01:05 AM Aug 29, 2018 | Team Udayavani |

ಕೊಚ್ಚಿ: ಪ್ರವಾಹದಿಂದಾಗಿ ಆ. 14ರಿಂದ ಮುಚ್ಚಲಾಗಿದ್ದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಆ. 29ರಂದು ಪುನರಾರಂಭಗೊಳ್ಳಲಿದೆ. ಪ್ರವಾಹದಿಂದಾಗಿ ವಿಮಾನನಿಲ್ದಾಣಕ್ಕೆ 220 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ದೇಶದ ಅತಿ ನಿಬಿಡ ವಿಮಾನನಿಲ್ದಾಣಗಳಲ್ಲಿ ಒಂದಾದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಆ. 29ರಂದು ಅಪರಾಹ್ನ 2ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಿದೆ ಎಂದು ವಿಮಾನನಿಲ್ದಾಣದ ವಕ್ತಾರರೋರ್ವರು ತಿಳಿಸಿದರು. ವಿಮಾನಸಂಸ್ಥೆಗಳು ತಮ್ಮ ವಿಮಾನಗಳ ಸಂಚಾರಕ್ಕೆ ಪ್ರಸಕ್ತ ವೇಳಾಪಟ್ಟಿಯನ್ನೇ ಅನುಸರಿಸಲಿವೆ ಎಂದವರು ಹೇಳಿದರು. ಇದೇ ವೇಳೆ ಕೊಚ್ಚಿಯ ನೌಕಾಪಡೆ ವಿಮಾನನಿಲ್ದಾಣದಿಂದ ಆ. 20ರಿಂದ ಆರಂಭಿಸಲಾಗಿದ್ದ ಪೌರ ವಾಯುಯಾನ ಸೇವೆಗಳನ್ನು ಬುಧವಾರ ಮಧ್ಯಾಹ್ನದಿಂದ ಅಮಾನತುಗೊಳಿಸಲಾಗುವುದು.

Advertisement

ಕೊಚ್ಚಿ ವಿಮಾನನಿಲ್ದಾಣ ಆ. 26ರಿಂದ ವಿಮಾನಗಳ ಸಂಚಾರವನ್ನು ಪುನರಾರಂಭಿಸಬೇಕಾಗಿತ್ತು. ಆದರೆ ಅಷ್ಟರೊಳಗೆ ಮಾನವಬಲವನ್ನು ಸಂಚಯಿಸುವ ಕುರಿತು ವಿಮಾನಸಂಸ್ಥೆಗಳು ಹಾಗೂ ಭೂನಿರ್ವಹಣಾ ಸಂಸ್ಥೆಗಳ ಸಹಿತ ಸಂಬಂಧಿತ ಹೆಚ್ಚಿನವರು ಕಳವಳ ಸೂಚಿಸಿದ್ದರಿಂದ ವಿಮಾನನಿಲ್ದಾಣವನ್ನು ಮರುತೆರೆಯುವ ದಿನಾಂಕವನ್ನು ಮೂರು ದಿನಗಳ ಕಾಲ ಮುಂದೂಡಲಾಯಿತು. ಪ್ರವಾಹದಿಂದ ಶೇ. 90 ಸಿಬಂದಿ ಬಾಧಿತರಾಗಿದ್ದಾರೆ ಮತ್ತು ಸಮೀಪದ ಹೊಟೇಲ್‌ಗ‌ಳು, ರೆಸ್ಟಾರೆಂಟ್‌ಗಳು ಹಾಗೂ ಅಂಗಡಿಗಳು ಕೂಡ ಮುಚ್ಚಿರುವುದಾಗಿ ಆ. 22ರಂದು ನಡೆಸಲಾದ ಅವಲೋಕನ ಸಭೆಗೆ ಮಾಹಿತಿ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next