ಕುಂಬಳೆ: ಆಳವಾಗಿ ಅರಿಯದ ಜ್ಞಾನಕ್ಕೆ ಬೆಲೆ ಇಲ್ಲ.ಯಾವುದೇ ಆಚರಣೆಯಲ್ಲಿ ಅನುಕರಣೆಯನ್ನು ಮಾಡದೆ ಪೂರ್ಣ ಜ್ಞಾನವನ್ನು ಪಡೆದು ಆಚಾರ ವಿಚಾರಗಳನ್ನು ಮಾಡುವುದರಿಂದ ಸುಲಭವಲ್ಲದ ಬಂಧನ ಬಿಡುಗಡೆಯಿಂದ ಮುಕ್ತರಾಗಲು ಸಾಧ್ಯ. ಸಮಾಜದಲ್ಲಿ ಅರಾಜಕತೆ ಹೆಚ್ಚಿದಾಗ, ಲೌಕಿಕ ಸುಖಭೋಗಳಿಗೆ ಮನುಷ್ಯ ಅತಿಯಾಗಿ ವಾಲಿದಾಗ ಆಧ್ಯಾತ್ಮಿಕತೆಯೆಡೆಗೆ ಮುಖ ಮಾಡುತ್ತಿರುವುದು ಇಂದು ಕಾಣಬಹುದೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.
ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಜರಗುತ್ತಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪ್ರಯುಕ್ತ ಶುಕ್ರವಾರ ಸಂಜೆ ಜರಗಿದ ಧಾರ್ಮಿಕ ಸಭೆಯಪೂಜ್ಯರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದಲ್ಲಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಕೊಂಡೆವೂರು ಶ್ರೀ ಕ್ಷೇತ್ರದ ವತಿಯಿಂದ ಧರ್ಮಚಕ್ರವರ್ತಿ ಬಿರುದು ನೀಡಿ ಗೌರವಿಸಲಾಯಿತು. ವಿವಿಧ ಸಮಾಜಗಳ ನಾಯಕರು ಮತ್ತು ಸಂಘಸಂಸ್ಥೆಗಳ ಮುಂದಾಳುಗಳು ಹಾರಾರ್ಪಣೆಗೈದರು.
ವೇದಿಕೆಯಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರುಶ್ರೀ ಯೋಗಾನಂದ ಸ್ವಾಮೀಜಿ, ಬಾಕೂìರು ಸಂಸ್ಥಾನ ಮಠದ ಶ್ರೀ ವಿಶ್ವ ಸಂತೋಷಿ ಭಾರತೀ ಗುರೂಜಿ, ಗುರುವಾಯೂರು ತಂತ್ರಿ ಬ್ರಹ್ಮಶ್ರೀ ಚೇನಾಸ್ ದಿನೇಶನ್ ನಂಬೂದಿರಿಪ್ಪಾಡ್, ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ, ರವೀಶ ತಂತ್ರಿ ಕುಂಟಾರು ದಿವ್ಯ ಉಪಸ್ಥಿತರಿದ್ದರು. ಅತಿಥಿಗಳಾಗಿ ರಾ.ಸ್ವ.ಸಂಘದ ದ.ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಜಯದೇವ ಖಂಡಿಗೆ ಕಾಸರಗೋಡು, ಇ.ಎಸ್.ಮಹಾಬಲೇಶ್ವರ ಭಟ್ ರ‚ಷ್ಯಾ, ಯಾಗ ಸಮಿತಿ ಕಾರ್ಯಾಧ್ಯಕ್ಷ ಡಾ.ನಾರಾಯಣ್ ಬೆಂಗಳೂರು, ಸಂಜೀವ ಶೆಟ್ಟಿ ತಿಂಬರ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ , ಯಾಗ ಸಮಿತಿ ಕಾರ್ಯಾಧ್ಯಕ್ಷ ಡಾ.ಶ್ರೀಧರ ಭಟ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಮಾಜಸೇವಕ, ಬೆಂಗಳೂರು ಆಕ್ಸ್‌ಫರ್ಡ್ ವಿದ್ಯಾಸಂಸ್ಥೆಯ ವಿಶ್ವಸ್ತ ಡಿ.ಎಸ್.ಸೂರ್ಯನಾರಾಯಣ ಮತ್ತು ಬೆಂಗಳೂರು ಸುಮಂಗಲ ಸೇವಾಶ್ರಮ ಸಂಸ್ಥಾಪಕಿ ಸಮಾಜಸೇವಕಿ ಎಸ್.ಜಿ.ಸುಶೀಲಮ್ಮ ಅವರನ್ನು ಸನ್ಮಾನಿಸಲಾಯಿತು.
ಯಾಗ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ಕೆ.ಮೋನಪ್ಪ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಮೂರ್ತಿ ವೇಣು ಗೋಪಾಲ್ ಆಚಾರ್ ಪ್ರಾರ್ಥನೆ ಗೆ„ದರು. ಸ್ವಾಗತ ಎಂ.ಬಿ.ಪುರಾಣಿಕ್ ಸ್ವಾಗತಿಸಿದರು. ಡಾ| ಜಯಪ್ರಕಾಶ್ ನಾರಾಯಣ ತೊಟ್ಟೆತೋ¤ಡಿ ವಂದಿಸಿದರು.ಪುರುಷೋತ್ತಮ ಭಂಡಾರಿ ಅಡ್ಯಾರ್ ಅವರು ನಿರೂಪಿಸಿದರು.
ದೇಶ ಅಪಾಯದಲ್ಲಿದೆ
ದೇಶದ ಕಾಶ್ಮೀರ ಗಡಿಯಲ್ಲಿ ಅಶಾಂತಿಯಿಂದ ದೇಶ ಅಪಾಯದಲ್ಲಿದೆ. ದೇಶನ್ನಾಳುವ ನಾಯಕರಿಗೆ ಹಾಗೂ ಸೆ„ನಿಕರಿಗೆ ಶಕ್ತಿ ತುಂಬುವ ಕೆಲಸ ನಮ್ಮಿಂದ ಆಗಬೇಜಕಾಗಿದೆ. ಕಾಸರಗೋಡು ಕನ್ನಡ ನಾಡಾಗಿದ್ದು ಇದು ಕರ್ನಾಟಕಕ್ಕೆ ಸೇರಬೇಕೆನ್ನುವ ಬೇಡಿಕೆಯೊಂದಿಗೆ ಭರವಸೆ ಯಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಕಾಸರಗೋಡು ಮತ್ತು ಕರ್ನಾಟಕಕ್ಕೆ ವಿಸ್ತರಿಸಲಾಗಿದೆ.
-ಡಾ. ವೀರೇಂದ್ರ ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ
ಯಾಗಶಾಲೆಯಲ್ಲಿ
ಸೂಯೊìàದಯಕ್ಕೆ ಪ್ರವಗ್ಯì, ಉಪಸತ್, ಸುಬ್ರಹ್ಮಣ್ಯಾಹ್ವಾನ, ಅರುಣ ಕೇತುಕ ಚಯನ, ಉಪಸ್ಥಾನ, ಪ್ರವಗ್ಯì ಉದ್ವಾಸನೆ,ಅಗ್ನಿಪ್ರಣಯನ, ಹವಿರ್ಧಾನ-ಪ್ರಣಯನ, ಸದೋಮಂಟಪ ನಿರ್ಮಾಣ, ಅಗ್ನಿಷೋಮೀಯ ಪ್ರಣಯನ, ಅಗ್ನಿಷೋಮೀಯ ಯಾಗ, ವಸತೀವರೀ ಹರಣ, ಪಂಚಗೋದೋಹನ, ನಾಮಸುಬ್ರಹ್ಮಣ್ಯಾಹ್ವಾನ, ಸತ್ಯುಪಕ್ರಮ ನೆರವೇರಿದವು. ಬೆಳಿಗ್ಗೆ ವೈಶ್ರವಣ ಯಜ್ಞ ನೆರವೇರಿತು.