Advertisement

ಗ್ರಾಮೀಣರಲ್ಲಿ ಆರ್ಥಿಕ ವ್ಯವಹಾರದ ಅರಿವು ಬ್ಯಾಂಕ್‌ಗಳ ಜವಾಬ್ದಾರಿ

12:52 PM Feb 22, 2018 | |

ಕಾಪು: ಗ್ರಾಮೀಣ ಪ್ರದೇಶದಲ್ಲಿರುವ ಮಾನವ ಸಂಪನ್ಮೂಲ, ಆರ್ಥಿಕ ಸಂಪನ್ಮೂಲ, ಪ್ರಾಕೃತಿಕ ಸಂಪನ್ಮೂಲದ ಸದ್ಬಳಕೆಯಾಗಬೇಕಾದಲ್ಲಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ದೊರಕಬೇಕಿವೆ. ಗ್ರಾಮೀಣ ಜನರಲ್ಲಿ ಆರ್ಥಿಕ ವ್ಯವಹಾರದ ಬಗ್ಗೆ ಅರಿವು ಮೂಡಿಸುವುದರ ಜತೆಗೆ, ಬ್ಯಾಂಕ್‌ಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆಯೂ ಜಾಗೃತಿ ಮೂಡಿಸುವುದು ಇಂದಿನ ಆವಶ್ಯಕ ಕಾರ್ಯವಾಗಿದೆ ಎಂದು ಕಾಪು ಶಾಸಕ ವಿನಯಕುಮಾರ್‌ ಸೊರಕೆ ಹೇಳಿದರು.
ಫೆ. 2ರಂದು ಕಾಪು ಮಹಾಬಲ್‌ ಮಾಲ್‌ನಲ್ಲಿ ನೂತನವಾಗಿ ಪ್ರಾರಂಭ ಗೊಂಡ ಶ್ರೀ ಗೋಕರ್ಣನಾಥ ಕೋ-
ಆಪರೇಟಿವ್‌ ಬ್ಯಾಂಕ್‌ ಲಿ. ಮಂಗಳೂರು ಇದರ 14ನೇ ನೂತನ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕಾಪು ತಾಲೂಕು ಕೇಂದ್ರ ವಾಗಿದೆ. ಪುರಸಭೆಯಾಗಿ ಪರಿವರ್ತನೆ ಗೊಂಡಿದೆ. ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಆರ್ಥಿಕ ವ್ಯವಸ್ಥೆಯಲ್ಲೂ ಬೆಳವಣಿಗೆ ಕಾಣಬೇಕಿದ್ದು, ಪೈಪೋಟಿಯ ಯುಗದಲ್ಲಿ ಕಾಪುವಿ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಶಾಖೆಯು ಇತರೆಲ್ಲ ಶಾಖೆಗಳಿಗಿಂತಲೂ ಮಾದರಿಯಾಗಿ ಮೂಡಿಬರಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಗೋಕರ್ಣನಾಥ ಕೋ-ಆಪರೇಟಿವ್‌ ಬ್ಯಾಂಕಿನ ಅಧ್ಯಕ್ಷ ಕೆ. ಗೋಪಾಲಕೃಷ್ಣ ಮಾತ ನಾಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಮಾದರಿಯಲ್ಲೇ ಗೋಕರ್ಣನಾಥ ಬ್ಯಾಂಕ್‌ನ ವ್ಯವಸ್ಥೆಯನ್ನೂ ಅಭಿವೃದ್ಧಿ ಗೊಳಿಸಲಾಗುತ್ತಿದೆ. ಕೋರ್‌ ಬ್ಯಾಂಕಿಂಗ್‌ ಸಿಸ್ಟಮ್‌, ಅಂತರ್‌ ಶಾಖಾ ನಗದೀಕರಣ, ನೆಟ್‌ವರ್ಕ್‌ ಬ್ಯಾಂಕಿಂಗ್‌, ಸೇಫ್‌ ಲಾಕರ್‌, ಮೊಬೈಲ್‌ ಬ್ಯಾಂಕಿಂಗ್‌, ಎಟಿಎಂ ಸೌಲಭ್ಯ ಸಹಿತ ಹಲವಾರು ವ್ಯವಸ್ಥೆಗಳನ್ನು ಅಳವಡಿಸಲಾಗುವುದು. ಬ್ಯಾಂಕ್‌ನ 15ನೇ ಶಾಖೆ ಅತೀ ಶೀಘ್ರದಲ್ಲಿ ಮಂಗಳೂರಿನ ದೇರಳಕಟ್ಟೆಯಲ್ಲಿ ಶುಭಾರಂಭಗೊಳ್ಳಲಿದೆ ಎಂದರು.

ಉಡುಪಿ ಸಾಯಿರಾಧಾ ಗ್ರೂಪ್ಸ್‌ನ ನಿರ್ದೇಶಕ ಮನೋಹರ್‌ ಶೆಟ್ಟಿ ಗಣಕ ಯಂತ್ರಕ್ಕೆ ಚಾಲನೆ ನೀಡಿದರು. ಜೆಡಿಎಸ್‌ನ ಜಿಲ್ಲಾಧ್ಯಕ್ಷ ಮತ್ತು ಮಹಾಬಲ್‌ ಮಾಲ್‌ನ ಪಾಲುದಾರ ಯೋಗೀಶ್‌ ಶೆಟ್ಟಿ ಬಾಲಾಜಿ ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.

ಕಾಪು ಪುರಸಭೆ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಎಚ್‌. ಉಸ್ಮಾನ್‌, ಸಹಕಾರಿ ಸಂಘಗಳ ಉಡುಪಿ ಜಿಲ್ಲಾ ಉಪನಿಬಂಧಕ ಪ್ರವೀಣ್‌ ನಾಯ್ಕ, ಕಾಪು ಬಿಲ್ಲವರ ಸಹಾಯಕ ಸಂಘದ ಅಧ್ಯಕ್ಷ ಮಾಧವ ಆರ್‌. ಪಾಲನ್‌, ಬೆಂಗಳೂರು ಸ್ಟೀಲ್‌ ಪ್ರೊಡಕ್ಟ್ ನಿರ್ದೇಶಕ ಶಭಿ ಅಹಮ್ಮದ್‌ ಖಾಜಿ, ಮೂಳೂರು ಬಿಲ್ಲವ ಸಂಘದ ಅಧ್ಯಕ್ಷ ಸುಭಾಶ್‌ಚಂದ್ರ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗೋಕರ್ಣನಾಥ ಕೋ-ಆಪ್‌. ಬ್ಯಾಂಕಿನ ಉಪಾಧ್ಯಕ್ಷ ರಾಜೇಶ್‌ ಕುಮಾರ್‌ ಜಿ. ಸುವರ್ಣ ಸ್ವಾಗತಿಸಿದರು. ಪ್ರ. ವ್ಯವಸ್ಥಾಪಕ ಭರತ್‌ ಭೂಷಣ್‌ ಸುವರ್ಣ ಪ್ರಸ್ತಾವನೆಗೈದರು. ನಿರ್ದೇ ಶಕ ಜಯರಾಮ ಕಾರಂದೂರು ವಂದಿಸಿದರು.  ಬೆಳ್ತಂಗಡಿ ಶಾಖಾಧಿಕಾರಿ ರಮೇಶ್ಚಂದ್ರ ಪಾಂಗಳ ಕಾರ್ಯಕ್ರಮ ನಿರೂಪಿಸಿದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next