ಯಲಹಂಕ: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನ ಹೊಂದಿರಬೇಕೆಂದು ವಿಶ್ವವಾಣಿ ಫೌಂಡೇಷನ್ ಅಧ್ಯಕ್ಷೆ ವಾಣಿ ಶ್ರೀ ಹೇಳಿದರು. ಕಾರ್ಲಾಪುರ ಅರುಣೋದಯ ಪ್ರೌಢಶಾಲೆಯಲ್ಲಿ ವಿಶ್ವವಾಣಿ ಫೌಂಡೇಷನ್ ನಿಂದ ಉಚಿತವಾಗಿ ಉದಯವಾಣಿ ವಿದ್ಯಾರ್ಥಿ ಮಾರ್ಗದರ್ಶಿ ವಿತರಿಸಿ ಮಾತನಾಡಿದರು
ಶಿಕ್ಷಣದ ಜೊತೆಗೆ ಆಟೋಟಗಳಿಗೂ ವಿದ್ಯಾರ್ಥಿಗಳು ಸಮಯ ಮೀಸಲಿಟ್ಟು ಆರೋಗ್ಯ ಕಾಪಾಡಿಕೊಂಡು ಸದೃಢರಾಗಿರಬೇಕೆಂದು ಸಲಹೆ ನೀಡಿದರು. ಪತ್ರಿಕೆಗಳನ್ನು ಓದುವುದರಿಂದ ಹೆಚ್ಚಿನ ಜ್ಞಾನ ಸಂಪಾದಿಸುವುದರ ಜೊತೆಗೆ ದೇಶದ ಆಗು-ಹೋಗುಗಳನ್ನು ತಿಳಿಯಲು ಸಾಧ್ಯ ಎಂದರು.ಸೊಣ್ಣೇನಹಳ್ಳಿ ಗ್ರಾಪಂ ಅಧ್ಯಕ್ಷ ಸುರೇಶ್ ಇದ್ದರು.
ಉಚಿತ ನೋಟ್ ಪುಸ್ತಕ ವಿತರಣೆ: ಮಾತೃಪೂರ್ಣ ಯೋಜನೆ ಉತ್ತಮವಾಗಿದ್ದರೂ, ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಕ್ಕೆ ಹೋಗಿ ಆಹಾರ ಸೇವಿಸಲು ತೊಂದರೆಯಾಗಲಿದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ವಾಣಿಶ್ರೀ ಹೇಳಿದರು.
ಸಮೀಪದ ಕಾಕೋಳು ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವವಾಣಿ ಫೌಂಡೇಷನ್‌ನಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿ, ಮಾತೃಪೂರ್ಣ ಯೋಜನೆಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೂ ಹೊರೆ ಹೆಚ್ಚಾಗಲಿದೆ. ಜೊತೆಗೆ ಗರ್ಭಿಣಿ ಮತ್ತು ಬಾಣಂತಿ ವೈದ್ಯರ ಸಲಹೆ ಮೇಲೆ ಆಹಾರ ತಿನ್ನಬೇಕಾಗುತ್ತದೆ ಎಂದರು.
ಪ್ರತಿದಿನ ಕೇಂದ್ರಕ್ಕೆ ಬಂದು ಆಹಾರ ಸೇವಿಸಲು ಆರೋಗ್ಯದಲ್ಲಿ ಏರುಪೇರಾದರೆ ತೊಂದರೆಯಾಗಲಿದೆ. ಆದ್ದರಿಂದ ಸರ್ಕಾರ ಬೇಳೆ, ಸೇರಿದಂತೆ ಪೋಷಕಾಂ ಶವಿರುವ ಧಾನ್ಯಗಳನ್ನು ಅವರ ಮನೆಗೆ ನೀಡಿದರೆ ಅವರೇ ಆಹಾರ ತಯಾರಿಸಿ ತೆಗೆದುಕೊಳ್ಳುವುದು ಉತ್ತಮ, ಆದ್ದರಿಂದ ಮಾತೃಪೂರ್ಣ ಯೋಜನೆ ಬದಲಾವಣೆಗೆ ಸರ್ಕಾರ ಮುಂದಾಗಬೇಕು ಎಂದು ಸಲಹೆ ನೀಡಿದರು.
ಸೊಣ್ಣೇನಹಳ್ಳಿ ಗ್ರಾಪಂ ಅಧ್ಯಕ್ಷ ಸುರೇಶ್, ಕಾಕೋಳು ಪ್ರೌಢಶಾಲೆಯ ಮುಖೋಪಾಧ್ಯಾಯ ಓಂಕಾರ್ ನಾಯಕ್ ಇತರರು ಇದ್ದರು.