Advertisement

ನಿಮ್ಮನ್ನು ನೀವು ತಿಳಿದುಕೊಳ್ಳಿ 

01:25 PM Sep 24, 2018 | Team Udayavani |

ಜಗತ್ತಿನಲ್ಲಿ ಎಲ್ಲರೂ ಒಂದೇ ತೆರನಾಗಿ ಇರುವುದಿಲ್ಲ. ಕೆಲವರು ತಮಗನಿಸಿದ್ದನ್ನು ಮುಕ್ತವಾಗಿ ಹಂಚಿಕೊಂಡರೆ, ಇನ್ನು ಕೆಲವರು ಅಂತರ್ಮುಖಿಗಳಾಗಿರುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ಅಂತರ್ಮುಖಿಗಳಾಗಿರುವವರು ಹೆಚ್ಚು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

Advertisement

ಅಂತರ್ಮುಖಿಗಳು ಹೆಚ್ಚು ಅನುಭವ, ಜ್ಞಾನವಿದ್ದರೂ ಅದನ್ನು ತೋರ್ಪಡಿಸದೆ ತಮ್ಮ ಕೆಲಸಗಳನ್ನು ತಮ್ಮಷ್ಟಕ್ಕೆ ಮಾಡಿಕೊಂಡು ಹೋಗುತ್ತಾರೆ. ತುಂಬಾ ತಿಳಿದುಕೊಂಡಿರುತ್ತಾರೆ. ಆದರೆ ಅವರು ಅದನ್ನು ವ್ಯಕ್ತಪಡಿಸಲು ಹಿಂಜರಿಯುತ್ತಾರೆ. ಯಾರ ವಿಷಯಕ್ಕೂ ಅವರು ಭಾಗಿಯಾಗುವುದಿಲ್ಲ, ವಿಷಯಗಳ ಬಗ್ಗೆ ತಿಳಿದಿದ್ದರೂ ಅದನ್ನು ಸ್ಪಷ್ಟಿಕರಿಸುವುದಿಲ್ಲ. ಹೀಗಾಗಿ ವೃತ್ತಿ ಕ್ಷೇತ್ರದಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಹಿಂದೆಯೇ ಉಳಿದುಬಿಡುತ್ತಾರೆ.

ಅಂತರ್ಮುಖವಾಗಿರುವುದು ನಮ್ಮ ದೌರ್ಬಲ್ಯವಲ್ಲ ಎಂದು ಭಾವಿಸಿ ಅದನ್ನೇ ತಮ್ಮ ಶಕ್ತಿಯನ್ನಾಗಿ ಮಾಡಲು ಬದುಕಿನಲ್ಲಿ ಕೆಲವೊಂದಷ್ಟು ಅಂಶಗಳನ್ನು ಸೇರಿಸಿಕೊಳ್ಳುವುದು ಬಹುಮುಖ್ಯ.

· ನೀವು ತುಂಬಾ ನಾಚಿಕೆ ಸ್ವಭಾವದವರು, ಸಮಾಜದೊಂದಿಗೆ ಬೆರೆಯುವುದು ಕಷ್ಟವಾದಾಗ ನೀವು ನಿಮ್ಮನ್ನು ಜಗತ್ತಿಗೆ ತೋರ್ಪಡಿಸಲು ಸಿಗುವ ಹೊಸ ಏಣಿಯನ್ನು ಏರಬೇಕು. ನಿಮ್ಮಲ್ಲಿರುವ ಸೃಜನಶೀಲ ವ್ಯಕ್ತಿತ್ವವನ್ನು ಜಗತ್ತಿಗೆ ಪರಿಚಯಿಸಬೇಕು.

· ನಮ್ಮ ಕೆಲಸಗಳನ್ನು ನಾವೇ ಮಾಡಬೇಕು. ಸಂದರ್ಭಕ್ಕನುಗುಣವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಅದು ಅತಿಯಾಗಿ ಇರದೆ ನಮ್ಮತನವನ್ನು ಪ್ರಸ್ತುತಪಡಿಸುವಂತಿರಬೇಕು. ನಿಮ್ಮ ಪ್ರತಿಭೆ ಕೆಲಸದಲ್ಲಿ ಕಾಣುವಂತಿರಬೇಕು. ಇದಕ್ಕೆ ಮೊದಲೇ ಯೋಜನೆ ರೂಪಿಸಿಕೊಳ್ಳಿ ಮತ್ತು ಅದನ್ನು ಪಾಲಿಸಿ.

Advertisement

· ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡುವುದು, ಸ್ನೇಹಿತರೊಂದಿಗೆ ಬೇರೆಯುವುದು, ಸಾಮಾಜಿಕ ಸಂವಹನ ಇವು ಯಾವುದೂ ನಿಮ್ಮ ಕ್ಷೇತ್ರವಲ್ಲ. ಆದರೆ ನಿಮ್ಮ ಪ್ರತಿಭೆಯನ್ನು ತೋರ್ಪಡಿಸಲು ಇವೆಲ್ಲವೂ ವೇದಿಕೆ. ನಿಮ್ಮ ಆಸಕ್ತಿಯನ್ನು ನೀವೇ ಗುರುತಿಸಿಕೊಳ್ಳಿ. ನಿಮ್ಮ ಕೌಶಲಗಳನ್ನು ಪ್ರದರ್ಶನಕ್ಕೆ ಇಟ್ಟಾಗ ಮಾತ್ರ ಅದು ಇನ್ಮೊಬ್ಬರಿಗೆ ತಿಳಿಯಲು ಸಾಧ್ಯ. ಹೀಗಾಗಿ ಪ್ರತಿಯೊಂದು  ಕೆಲಸವನ್ನೂ ಕ್ರಿಯಾಶೀಲತೆಯಿಂದ ಕೆಲಸ ಮಾಡಿ.

· ಜನ ಏನಾಂತಾರೋ ಎಂದುಕೊಂಡು ಹೆಚ್ಚಿನವರು ಅಂತರ್ಮುಖಿಯಾಗಿ ಬಿಡುತ್ತಾರೆ. ಯಾರೊಂದಿಗೂ ಸರಿಯಾಗಿ ಮಾತನಾಡುವುದಿಲ್ಲ. ಇದರ ಪ್ರಯೋಜನ ನಿಮ್ಮ ಸಹೋದ್ಯೋಗಿಗಳು ಪಡೆಯಬಹುದು. ಹೀಗಾಗಿ ನಿಧಾನವಾಗಿಯಾದರೂ ನಿಮಗೆ ಸರಿ ಎಣಿಸಿದ್ದನ್ನು ಹಂಚಿಕೊಳ್ಳಿ. ಸಂವಾದ, ಸಭೆಯಲ್ಲಿ ಎಲ್ಲರ ಮುಂದೆ ಮಾತನಾಡಲು ಹಿಂಜರಿಕೆಯಾದರೆ ಕನ್ನಡಿ ಮುಂದೆ ನಿಂತು ಮಾತನಾಡಿ ಅಭ್ಯಾಸ ಮಾಡಿಕೊಳ್ಳಿ.

· ಸಹೋದ್ಯೋಗಿಗಳೊಂದಿಗೆ ಆದಷ್ಟು ಬೇರೆಯಬೇಕು, ನೀವು ಅವರೊಂದಿಗೆ ಪಾರ್ಟಿಗೆ ಹೋಗಬೇಕಾಗಿಲ್ಲ. ಆದರೆ ಬಿಡುವಿನ ವೇಳೆ ಕಾಫಿಗೆ ಹೋಗಿ ಅವರೊಂದಿಗೆ ಮಾತನಾಡಿ. ಆಗ ನಿಮಗೆ ಅವರ ವ್ಯಕ್ತಿತ್ವ ತಿಳಿಯುತ್ತದೆ ಮಾತ್ರ ವಲ್ಲ ನಿಮ್ಮನ್ನು ಅವರು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

· ದಿನದ 24 ಗಂಟೆಯಲ್ಲಿ ನಿಮಗಾಗಿ ಕೆಲವು ಹೊತ್ತು ಮೀಸಲಿಡಿ. ಆ ಸಂದರ್ಭದಲ್ಲಿ ನೀವು ನಿಮ್ಮ ಆಗು ಹೋಗುಗಳ ಬಗ್ಗೆ ವಿಶ್ಲೇಷಿಸಿ. ಇದು ನಿಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. 

ಪ್ರೀತಿ ಆರ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next