Advertisement

Ladakh; ಭಾರೀ ಹಿಮ ವರ್ಷ: 80 ಮಂದಿಯ ರಕ್ಷಣೆ

01:14 AM Apr 08, 2024 | Team Udayavani |

ಲೇಹ್‌: ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಭಾರೀ ಹಿಮ ವರ್ಷದಲ್ಲಿ ಸಿಲುಕಿದ್ದ ಮಹಿಳೆಯರು, ಮಕ್ಕಳು ಸೇರಿದಂತೆ 80 ಮಂದಿಯನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ. ಇಲ್ಲಿನ ಲೇಹ್‌ ಮತ್ತು ಶೋಕ್‌ ನದಿಗಳ ನಡುವಿನ ಕಣಿವೆಯಲ್ಲಿರುವ ಸುಮಾರು 17,688 ಅಡಿ ಎತ್ತರದ ಚಾಂಗ್‌ ಲಾ ಪಾಸ್‌ನಲ್ಲಿ ಶನಿವಾರ ಮಧ್ಯರಾತ್ರಿ ಭಾರೀ ಹಿಮ ಮಳೆಯಾಗಿದ್ದು, ಸೈನಿಕರು ತತ್‌ಕ್ಷಣವೇ ಕಾರ್ಯಾಚರಣೆ ಗಿಳಿದು ಅಪಾಯದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ್ದಾರೆ. ಸೇನೆಯ ತ್ರಿಶೂಲ್‌ ವಿಭಾಗದ ಸೈನಿಕರು 2 ಗಂಟೆಗೂ ಅಧಿಕ ಅವಧಿಯ ರಕ್ಷಣ ಕಾರ್ಯಾಚರಣೆ ಕೈಗೊಂಡು ಇವರೆಲ್ಲರನ್ನೂ ರಕ್ಷಿಸಿದ್ದಾರೆ ಎಂದು ಸೇನೆ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next