Advertisement

ಆ್ಯಂಟಿ ಬಯಾಟಿಕ್‌ ಬಳಕೆ ಬೇಡ:  ಹೆಚ್ಚುತ್ತಿರುವ ಜ್ವರ ಬಾಧೆ; ಐಸಿಎಂಆರ್‌ನಿಂದ  ಸಲಹೆ

09:22 AM Mar 05, 2023 | Team Udayavani |

ಹೊಸದಿಲ್ಲಿ:  ಎರಡ್ಮೂರು ತಿಂಗಳುಗಳಲ್ಲಿ ಜ್ವರ, ಶೀತ, ಕೆಮ್ಮು, ಗಂಟಲು ನೋವು ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕೆ ಎಚ್‌3ಎನ್‌2 ವೈರಸ್‌ ಕಾರಣ ಎಂಬುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ಆದರೆ ಇವುಗಳ ನಿಯಂತ್ರಣಕ್ಕೆ ಮಿತಿ ಮೀರಿ ಆ್ಯಂಟಿಬಯಾಟಿಕ್‌ ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌) ವೈದ್ಯರಿಗೆ ಸಲಹೆ ನೀಡಿದೆ.

Advertisement

ಮೇಲಿನ ಲಕ್ಷಣಗಳಿಂದಾಗಿ ಕೆಲವರು ಆಸ್ಪತ್ರೆ ಸೇರುತ್ತಿದ್ದು, ರೋಗದ ಹರಡುವಿಕೆಯೂ ಜೋರಾಗಿದೆ ಎಂದು ಐಸಿಎಂಆರ್‌ ತಿಳಿಸಿದೆ. ಆದರೂ 7 ದಿನಗಳಲ್ಲಿ ಜ್ವರ ಹೋಗಲಿದ್ದು, ಕೆಮ್ಮು ಮಾತ್ರ 3 ವಾರಗಳ ವರೆಗೆ ಇರಬಹುದು. ಇದಕ್ಕೆ ಆ್ಯಂಟಿಬಯಾಟಿಕ್ಸ್‌ ಬೇಕಿಲ್ಲ ಎಂದಿದೆ.

ಸದ್ಯ ಜನರು ಆಜಿಥ್ರೋಮೈಸಿನ್‌ ಮತ್ತು ಆಮೋಕ್ಸಿಕ್ಲೇವ್‌ ಸಹಿತ ಇತರ ಆ್ಯಂಟಿಬಯಾಟಿಕ್‌ಗಳನ್ನು ಬಳಸುತ್ತಿದ್ದಾರೆ.  ಸುಖಾಸುಮ್ಮನೆ ಆ್ಯಂಟಿಬಯಾಟಿಕ್ಸ್‌ ನೀಡಿದರೆ, ನಿಜವಾಗಿಯೂ ಅಗತ್ಯವಿದ್ದಾಗ ಅದು ಕೆಲಸ ಮಾಡದೇ ಇರಬಹುದು ಎಂದು ಎಚ್ಚರಿಕೆ ನೀಡಿದೆ.

ಜ್ವರದ ಲಕ್ಷಣಗಳು ಎಚ್‌1ಎನ್‌1 ಉಪತಳಿ
ಎಚ್‌3ಎನ್‌2 ಹಂದಿಜ್ವರಕ್ಕೆ ಕಾರಣವಾಗಿದ್ದ ಎಚ್‌1ಎನ್‌1 ವೈರಸ್‌ನ ರೂಪಾಂತರಿಯಾಗಿದೆ. ಈ ವೈರಸ್‌ನಿಂದ ಜ್ವರ ಹಾಗೂ ಗಂಟಲು ನೋವು ಪ್ರಕರಣಗಳು ವರದಿಯಾಗುತ್ತಿವೆ.

ರೋಗ ಲಕ್ಷಣಗಳೇನು?
ಎಚ್‌3ಎನ್‌2 ಸೋಂಕು ದೃಢಪಟ್ಟವರಲ್ಲಿ ಶೇ.92 ಮಂದಿಗೆ ಜ್ವರ, ಶೇ. 86 ಮಂದಿಗೆ ಕೆಮ್ಮು, ಶೇ. 27 ಮಂದಿಗೆ ಉಸಿರಾಟ ಸಮಸ್ಯೆ, ಶೇ. 16 ಮಂದಿಗೆ ಅಸ್ತಮಾ, ಶೇ. 16 ಮಂದಿಗೆ ನ್ಯುಮೋನಿಯಾ ಲಕ್ಷಣಗಳು ಕಾಣಿಸಿ ಕೊಂಡಿವೆ. 7 ದಿನಗಳವರೆಗೆ ಜ್ವರ ಇರುತ್ತದೆ. ಆದರೆ ಕೆಮ್ಮು ಕನಿಷ್ಠ 3 ವಾರಗಳವರೆಗೆ ಮುಂದುವರಿಯುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next