ಹೊಸದಿಲ್ಲಿ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಗ್ರೂಪ್ ಹಂತದ ಸ್ಪರ್ಧೆಗಳು ಈಗಾಗಲೇ ಮುಗಿದಿವೆ. ಮುಂದಿನದು ನಾಕೌಟ್ ಹಣಾಹಣಿ. ಇದು ಕ್ವಾರ್ಟರ್ ಫೈನಲ್ ಹಂತ ದಿಂದ ಮೊದಲ್ಗೊಳ್ಳಲಿದ್ದು, ಐಪಿಎಲ್ ಬಳಿಕ ಜೂನ್‌ನಲ್ಲಿ ನಡೆಯಲಿದೆ. ಫೈನಲ್ ಸೇರಿದಂತೆ ಈ ಹಂತದ 7 ಪಂದ್ಯಗಳ ಆತಿಥ್ಯ ಬೆಂಗಳೂರು ಪಾಲಾಗಲಿದೆ ಎಂದು ವರದಿಯಾಗಿದೆ.
ಆಗಲೇ ಮಳೆಗಾಲ ಆರಂಭವಾಗುವುದರಿಂದ ಐಪಿಎಲ್ ನಾಕೌಟ್ ಪಂದ್ಯಗಳನ್ನು ಆಡಿಸು ವುದೇ ಒಂದು ಸವಾಲು. ಕರ್ನಾಟಕಕ್ಕೆ ಜೂನ್ ಮಧ್ಯ ಭಾಗದಲ್ಲಿ ಮಾನ್ಸೂನ್ ಪ್ರವೇಶವಾಗುವು ದಾದರೂ ಬೆಂಗಳೂರಿಗೆ ಇದು ತಲುಪುವುದು ಜುಲೈಯಲ್ಲಿ. ಹೀಗಾಗಿ ಕೆಎಸ್‌ಸಿಎಗೆ ರಣಜಿ ನಾಕೌಟ್ ಆತಿಥ್ಯ ನೀಡುವುದು ಬಿಸಿಸಿಐ ಯೋಜನೆಯಾಗಿದೆ.
57 ಪಂದ್ಯ ಸಮಾಪ್ತಿ :
ಈ ಬಾರಿಯ ರಣಜಿ ಪಂದ್ಯಾವಳಿಯಲ್ಲಿ 38 ತಂಡಗಳು ಪಾಲ್ಗೊಂಡಿದ್ದು, ಒಟ್ಟು 64 ಪಂದ್ಯಗಳಿವೆ. ಈಗಾಗಲೇ 57 ಪಂದ್ಯಗಳು ಮುಗಿದಿವೆ. ಇವನ್ನು ರಾಜ್‌ಕೋಟ್, ಕಟಕ್, ಚೆನ್ನೈ, ಅಹ್ಮದಾಬಾದ್, ತಿರುವನಂತಪುರ, ಹೊಸದಿಲ್ಲಿ, ರೋಹrಕ್, ಗುವಾಹಟಿ ಮತ್ತು ಕೋಲ್ಕತಾದಲ್ಲಿ ಆಡಲಾಗಿತ್ತು.
ರಣಜಿ ನಾಕೌಟ್ ತಲುಪಿರುವ ತಂಡ ಗಳೆಂದರೆ ಮಧ್ಯಪ್ರದೇಶ, ಬಂಗಾಲ, ಕರ್ನಾಟಕ, ಮುಂಬಯಿ, ಉತ್ತರಾಖಂಡ, ಪಂಜಾಬ್, ಉತ್ತರಪ್ರದೇಶ ಮತ್ತು ಜಾರ್ಖಂಡ್. ಇವುಗಳಲ್ಲಿ ಜಾರ್ಖಂಡ್ ಪ್ರಿ-ಕ್ವಾರ್ಟರ್ ಫೈನಲ್ ಆಡಿ ಕ್ವಾರ್ಟರ್ ಫೈನಲ್‌ಗೆ ಬಂದಿದೆ.