Advertisement

South Africa vs Pakistan 2nd Test: ಬಾಶ್‌ ದಾಖಲೆ: ದ. ಆಫ್ರಿಕಾ ಮುನ್ನಡೆ

10:24 PM Dec 27, 2024 | Team Udayavani |

ಸೆಂಚುರಿಯನ್‌: ಪಾಕಿಸ್ಥಾನ ವಿರುದ್ಧದ ಸೆಂಚುರಿಯನ್‌ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 80 ರನ್ನುಗಳ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ.

Advertisement

ಪಾಕಿಸ್ಥಾನದ 211 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬಾಗಿ ಬವುಮ ಪಡೆ 301 ರನ್‌ ಗಳಿಸಿತು. ಆರಂಭಕಾರ ಐಡನ್‌ ಮಾರ್ಕ್‌ರಮ್‌ 89 ಹಾಗೂ ಮೊದಲ ಟೆಸ್ಟ್‌ ಆಡುತ್ತಿರುವ ಕಾರ್ಬಿನ್‌ ಬಾಶ್‌ ಔಟಾಗದೆ 81 ರನ್‌ ಮಾಡಿದರು (93 ಎಸೆತ, 15 ಬೌಂಡರಿ). ಇದು ಪದಾರ್ಪಣ ಟೆಸ್ಟ್‌ನಲ್ಲಿ 9ನೇ ಕ್ರಮಾಂಕದ ಆಟಗಾರನೊಬ್ಬನ ಸರ್ವಾಧಿಕ ಗಳಿಕೆ ಆಗಿದೆ. ಇದೇ ವರ್ಷ ಇಂಗ್ಲೆಂಡ್‌ ಎದುರಿನ ಓಲ್ಡ್‌ ಟ್ರಾಫ‌ರ್ಡ್‌ ಟೆಸ್ಟ್‌ನಲ್ಲಿ ಶ್ರೀಲಂಕಾದ ಮಿಲನ್‌ ರತ್ನಾಯಕೆ 72 ರನ್‌ ಮಾಡಿದ ದಾಖಲೆ ಪತನಗೊಂಡಿತು.

ಮಾರ್ಕ್‌ರಮ್‌ 8ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿದಾಗ ದಕ್ಷಿಣ ಆಫ್ರಿಕಾದ ಮೊತ್ತ 213 ರನ್‌ ಆಗಿತ್ತು; ಕೇವಲ 2 ರನ್‌ ಮುನ್ನಡೆಯಲ್ಲಿತ್ತು. ಆದರೆ ಬಾಶ್‌ ಸಾಹಸದಿಂದ ಸ್ಕೋರ್‌ ಮುನ್ನೂರರ ಗಡಿ ದಾಟಿತು. ವೇಗದ ಬೌಲರ್‌ ಆಗಿರುವ ಬಾಶ್‌ 4 ವಿಕೆಟ್‌ ಉರುಳಿಸಿ ಮಿಂಚಿದ್ದರು.

ಪಾಕಿಸ್ಥಾನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 3 ವಿಕೆಟಿಗೆ 88 ರನ್‌ ಮಾಡಿ ದಿನದಾಟ ಮುಗಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next