Advertisement
ರಾಜ್ಯದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಬಿಪಿಎಲ್ ಕುಟುಂಬ, ಯಶಸ್ವಿನಿ ಕಾರ್ಡ್ ಹೊಂದಿರುವರಿಗೆ ಶಸ್ತ್ರ ಚಿಕಿತ್ಸೆ ಉಚಿತ. ಈಗಾಗಲೇ ಆಸ್ಪತ್ರೆಯ ವತಿಯಿಂದಾಗಿ ಮೊದಲ ಹಂತವಾಗಿ 50 ಮಂದಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇನ್ನು 90 ಮಂದಿಗೆ ಮುಂದಿನ ದಿನಗಳಲ್ಲಿ ಚಿಕಿತ್ಸೆ ನಡೆಯಲಿದೆ.
Related Articles
Advertisement
ಆಯ್ಕೆ ಹೇಗೆ?ರೋಗಿಯ ಆರ್ಥೋ ಸಮಸ್ಯೆ ಯಾವ ಹಂತದಲ್ಲಿದೆ ಎಂಬುದನ್ನು ವೈದ್ಯರು ಮೊದಲಿಗೆ ಪತ್ತೆ ಮಾಡಲಿದ್ದಾರೆ. ಒಂದೊಮ್ಮೆ ಮೊದಲ ಹಂತದಲ್ಲಿದ್ದರೆ ಔಷಧಿ ನೀಡಲಾಗುತ್ತದೆ. ಉಳಿದಂತೆ ಎರಡನೇ ಹಂತ ಕೊನೆ ಭಾಗ ಹಾಗೂ ಮೂರನೇ ಹಂತದಲ್ಲಿದ್ದರೆ ಮಾತ್ರ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ಆಯ್ಕೆಯಾದವರು 15-20 ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಆನಂತರದಲ್ಲಿ ಅವರಿಗೆ ಫಿಸಿಯೋ ಥೆರಪಿ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಯಾರಿಗೆ ಉಚಿತ ಚಿಕಿತ್ಸೆ
ಬಿಪಿಎಲ್ ಕಾರ್ಡ್, ಯಶಸ್ವಿನಿ ಕಾರ್ಡ್, ಆರೋಗ್ಯ ಶ್ರೀ ಸೇರಿದಂತೆ ನಾನಾ ಆರೋಗ್ಯ ಸೇವೆಗಳನ್ನು ಹೊಂದಿರುವವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ದಾನಿಗಳಿಂದ ಸಂಗ್ರಹಿಸಿದ ಹಣದಿಂದ ಆರ್ಥಿಕವಾಗಿ ಹಿಂದುಳಿದವರಿಗೂ ಚಿಕಿತ್ಸೆ ನೀಡಲಗುತ್ತದೆ. ಶ್ರೀ ಶಿವಶಕ್ತಿ ಚಾರಿಟಬಲ್ ಟ್ರಸ್ಟ್, ಇನ್ಫೋಸಿಸ್ ಮೊದಲಾದ ಸಂಸ್ಥೆಗಳು ಸೇರಿದಂತೆ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಹಲವರು ದಾನಿಗಳು ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಚಂದ್ರಶೇಖರ್ ಹೇಳಿದರು.