Advertisement

ಮಣಿಪಾಲ ಕೆಎಂಸಿ ಆಸ್ಪತ್ರೆ: ನಾಳೆಯಿಂದ ಕೆಲವು ಹೊರರೋಗಿ ವಿಭಾಗ ಆರಂಭ

11:36 AM Apr 14, 2020 | sudhir |

ಉಡುಪಿ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಕೆಲವೊಂದು ಹೊರರೋಗಿ ವಿಭಾಗಗಳು ಎ. 15ರಿಂದ ಬೆಳಗ್ಗೆ 8.30ರಿಂದ ಅಪರಾಹ್ನ 1 ಗಂಟೆವರೆಗೆ ಸೇವೆಗೆ ಲಭ್ಯವಾಗಲಿವೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ತಿಳಿಸಿದ್ದಾರೆ.
ಸಾಮಾನ್ಯ ವೈದ್ಯಕೀಯ, ಸಾಮಾನ್ಯ ಶಸ್ತ್ರಚಿಕಿತ್ಸಾ, ಹೆರಿಗೆ ಮತ್ತು ಸ್ತ್ರೀ ರೋಗ, ಮಕ್ಕಳ, ಅಲರ್ಜಿ ಮತ್ತು ಶ್ವಾಸಕೋಶ, ಮೂಳೆ, ವೈದ್ಯಕೀಯ ಕ್ಯಾನ್ಸರ್‌, ಶಸ್ತ್ರಚಿಕಿತ್ಸಾ ಕ್ಯಾನ್ಸರ್‌, ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್‌ ಶಾಸ್ತ್ರ, ಪ್ರಶಾಮಕ ಆರೈಕೆ, ರೇಡಿಯೋಥೆರಪಿ, ಆಂಕಾಲಜಿ, ಹೃದಯ ಶಾಸ್ತ್ರ, ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಶಾಸ್ತ್ರ ವಿಭಾಗಗಳ ಸೇವಾ ಸೌಲಭ್ಯವನ್ನು ರೋಗಿಗಳು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬಹುದು.

Advertisement

ರೋಗಿ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು. ಅನಂತರ ಸಂಬಂಧಪಟ್ಟ ವಿಭಾಗಗಳಿಗೆ ಕಳುಹಿಸ‌ಲಾಗುವುದು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು. ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಎಂದು ತಿಳಿಸಿದ್ದಾರೆ.

ಮಾಹೆ ಮಣಿಪಾಲವು ಉಡುಪಿಯ ಡಾ| ಟಿ. ಎಂ. ಎ. ಪೈ ಆಸ್ಪತ್ರೆ ಕೊರೋನಾ ಕೋವಿಡ್‌-19 ರೋಗಿಗಳ ಚಿಕಿತ್ಸೆಗೆ ಮೀಸಲಿಟ್ಟಿದೆ ಎಂದು ಕೆಎಂಸಿ ಡೀನ್‌ ಡಾ| ಶರತ್‌ ರಾವ್‌ ತಿಳಿಸಿ¨ªಾರೆ. ಟೆಲಿಮೆಡಿಸಿನ್‌ ಮೂಲಕ ವೈದ್ಯರ ಸಮಾಲೋಚನ ಸೇವೆ ಬೆಳಗ್ಗೆ 9ರಿಂದ ಮಧ್ಯಾಹ್ನ 4ರವರೆಗೆ ಲಭ್ಯವಿದೆ. ದೂ. 080-47192235ಗೆ ಕರೆ ಮಾಡಹುದು ಎಂದು ತಿಳಿಸಿದ್ದಾರೆ.

ಡ್ರೋನ್‌ ಮುಟ್ಟುಗೋಲು: ಡಿಸಿ
ಉಡುಪಿ: ಅನುಮತಿ ಇಲ್ಲದೆ ಡ್ರೋನ್‌ ಕೆಮರಾಗಳನ್ನು ಬಳಸಿದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು, ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸರಕಾರ ಲಾಕ್‌ಡೌನ್‌ ಘೋಷಿಸಿದೆ. ಈ ನಡುವೆ ಕೆಲವು ವ್ಯಕ್ತಿ, ಸಂಸ್ಥೆಗಳು ಜಿಲ್ಲಾ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಡ್ರೋನ್‌ ಕೆಮರಾಗಳು ಬಳಸುತ್ತಿರುವ ಕುರಿತು ದೂರುಗಳು ಬಂದಿವೆ. ಡ್ರೋನ್‌ ಬಳಸಲು ಎಸ್ಪಿ ಕಚೇರಿಯಲ್ಲಿ ನೋಂದಣಿ ಮಾಡಿ, ಜಿಲ್ಲಾಡಳಿತದಿಂದ ಅನುಮತಿ ಪಡೆಯಬೇಕು. ಅನುಮತಿಯಿಲ್ಲದೆ ಡ್ರೋನ್‌ ಬಳಸಿದರೆ ಕ್ರಮ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next