ಉಡುಪಿ: ಮಣಿಪಾಲ ಕೆಎಂಸಿ ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ| ಟಾಮ್ ದೇವಾಸಿಯ ನೇತೃತ್ವದ ತಜ್ಞ ವೈದ್ಯರ ತಂಡವು ಕ್ಯಾಥ್ ಲ್ಯಾಬ್‌ನಿಂದ ದೇಶದ ಇತರ ಭಾಗಗಳಿಗೆ ಚಿಕಿತ್ಸಾ ಕಾರ್ಯವಿಧಾನದ ನೇರ ಪ್ರಸಾರವನ್ನು ನಡೆಸಿತು.
ಇದು ಅತ್ಯಾಧುನಿಕ ಕ್ಯಾಥ್ ಲ್ಯಾಬ್‌ನಲ್ಲಿ ಇಂಟರ್ವೆನ್ಸ್ ನಲ್ ಕಾರ್ಡಿಯಾಲಜಿ ತಜ್ಞರು ಸಂಕೀರ್ಣ ಪರಿಧಮ ನಿಯ ಬ್ಲಾಕ್ ಅನ್ನು ಯಶಸ್ವಿಯಾಗಿ ನಿರ್ವ ಹಿಸಿದ ಮೊದಲ ನೇರ ಪ್ರಸರಣವಾಗಿದೆ. ಕ್ಯಾಥ್ ಲ್ಯಾಬ್‌ನಲ್ಲಿ ಹೃದ್ರೋಗ ತಜ್ಞರು ಸುಧಾರಿತ ಇಮೇಜಿಂಗ್ ತಂತ್ರಜ್ಞಾನ ಒಸಿಟಿ (ಆಪ್ಟಿಕಲ್ ಕೊಹೆರೆನ್ಸ್ ಟೊಮೊಗ್ರಫಿ) 3ಡಿ ಅಪ್ಲಿಕೇಶನ್ ಸಹಾಯದಿಂದ ಚಿಕಿತ್ಸೆ ನಡೆಸಿದರು. ಮಣಿಪಾಲ ಸಂಸ್ಥೆ ರಾಷ್ಟ್ರೀಯ ಮಟ್ಟದಲ್ಲಿ ನೇರ ಚಿಕಿತ್ಸಾ ಕಾರ್ಯವಿಧಾನ ಪ್ರಸರಣದಲ್ಲಿ ಭಾಗ
ವಹಿಸಿರುವುದು ಇದೇ ಮೊದಲ ಬಾರಿಯಾಗಿದೆ.
ಹೃದ್ರೋಗ ತಂಡವು ಮಾಡಿದ ಈ ಕಾರ್ಯವನ್ನು ಕೆಎಂಸಿ ಡೀನ್ ಡಾ| ಶರತ್ ಕೆ. ರಾವ್ ಶ್ಲಾ ಸಿದ್ದಾರೆ. ಆಸ್ಪತ್ರೆ ಮುಖ್ಯ ನಿರ್ವಹಣಾಧಿಕಾರಿ ಸಿ. ಜಿ. ಮುತ್ತಣ್ಣ ಅವರು, ನಮ್ಮಲ್ಲಿನ ಸುಧಾರಿತ ತಂತ್ರಜ್ಞಾನ ಮತ್ತು ಸಂವಹನ ಸೌಲಭ್ಯದ ಸಹಾಯದಿಂದ, ನಮ್ಮ ವೈದ್ಯರು ದೇಶದ ಇತರ ಭಾಗಗಳಲ್ಲಿ ಮತ್ತು ವಿಶ್ವದ ವೈದ್ಯರೊಂದಿಗೆ ಸಂವಹನ ನಡೆಸುವುದು ತುಂಬಾ ಸುಲಭವಾಗಿದೆ ಮತ್ತು ಪ್ರಸ್ತುತ ಪರಿಸ್ಥಿತಿಗೆ ಇದು ಆವಶ್ಯಕವಾಗಿದೆ ಎಂದರು.
ಇದು ವೈದ್ಯರ ಉನ್ನತ ಮಟ್ಟದ ಕೌಶಲ್ಯ ಮತ್ತು ಅನುಭವವನ್ನು ಪ್ರತಿ ಬಿಂಬಿಸುತ್ತದೆ ಮತ್ತು ನಾವು ಬಳಸುವ ಸುಧಾರಿತ ನವೀಕೃತ ತಂತ್ರಜ್ಞಾನ ಸಾಧನಗಳು ವಿಶ್ವದ ಇತರ ಭಾಗಗಳಿಗೆ ಸಮಾನವಾಗಿವೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಹೇಳಿದರು.