ಲಕ್ನೋ: ಐಪಿಎಲ್ ನಲ್ಲಿ ಕೆಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದರೂ, ಅವರು ಹೃದಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿಶೇಷ ಸ್ಥಾನವಿದೆ. ಹಲವು ಸಂದರ್ಭಗಳಲ್ಲಿ ಅವರು ಇದನ್ನು ಸಾಬೀತು ಪಡಿಸಿದ್ದಾರೆ ಕೂಡಾ. ಇದೀಗ 2013ರಲ್ಲಿ ಆರ್ ಸಿಬಿ ಫ್ರಾಂಚೈಸಿಯೊಂದಿಗೆ ತನ್ನ ಬದುಕು ಬದಲಾದ ಕ್ಷಣವನ್ನು ಅವರು ಹೇಳಿಕೊಂಡಿದ್ದಾರೆ.
ಆರ್.ಅಶ್ವಿನ್ ಜೊತೆಗಿನ ಕುಟ್ಟಿ ಸ್ಟೋರೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಎಲ್ ರಾಹುಲ್, 2013ರಲ್ಲಿ ವಿರಾಟ್ ಕೊಹ್ಲಿ ಅವರು ಹೇಗೆ ತನ್ನನ್ನು ಆರ್ ಸಿಬಿ ತಂಡಕ್ಕೆ ಸೇರಿಸಿಕೊಂಡರು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ಹೋಟೆಲ್ ನಲ್ಲಿ ವಿರಾಟ್ ಕೊಹ್ಲಿ, ಕೋಚ್ ರೇ ಜೆನ್ನಿಂಗ್ಸ್ ಮತ್ತು ಇತರ ಸಹಾಯಕ ಸಿಬ್ಬಂದಿ ಇದ್ದರು. ‘ನೀವು ಈ ಒಪ್ಪಂದಕ್ಕೆ ಸಹಿ ಹಾಕಲು ಮತ್ತು ಆರ್ ಸಿಬಿಗಾಗಿ ಆಡಲು ಬಯಸುವಿರಾ?’ ಎಂದು ವಿರಾಟ್ ಕೊಹ್ಲಿ ಕೇಳಿದರು. ಅದಕ್ಕೆ ನಾನು, ‘ನೀವು ತಮಾಷೆ ಮಾಡುತ್ತಿದ್ದೀರಾ? ಇದು ಯಾವಾಗಲೂ ನನ್ನ ಕನಸಾಗಿತ್ತು’ಎಂದೆ. ಅದಕ್ಕೆ ಅವರು “ನಾನು ತಮಾಷೆ ಮಾಡುತ್ತಿದ್ದೇನೆ. ನಿಮಗೆ ಯಾವುದೇ ಆಯ್ಕೆಯಿಲ್ಲ, ಈ ಒಪ್ಪಂದಕ್ಕೆ ಸಹಿ ಮಾಡಿ.” ಎಂದರು. ನಾನು ಸಹಿ ಮಾಡಿದೆ. ಇದು ಕ್ರೇಜಿ ರೈಡ್ ಆಗಿರಲಿದೆ. ಮುಂದಿನ ಎರಡು ತಿಂಗಳುಗಳಲ್ಲಿ ನೀವು ಬಹಳಷ್ಟು ಆನಂದಿಸಲಿದ್ದೀರಿ ಎಂದು ವಿರಾಟ್ ಹೇಳಿದರು ಎಂದು ರಾಹುಲ್ ಹೇಳಿದ್ದಾರೆ.
ಬಹುಶಃ ನಾನು 7-8 ರಣಜಿ ಸೀಸನ್ ಆಡಿದ್ದರೂ ಗಳಿಸಲಾಗದಷ್ಟು ಅನುಭವ, ಮತ್ತು ಮಾಹಿತಿಯನ್ನು ನಾನು ಎರಡು ತಿಂಗಳಲ್ಲಿ ಕಲಿತೆ. ಆರ್ ಸಿಬಿ ತಂಡದೊಂದಿಗೆ ಬಹಳಷ್ಟು ಕಲಿತಿದ್ದೇನೆ ಎಂದು ರಾಹುಲ್ ಹೇಳಿದರು.
ರಾಹುಲ್ ಆರ್‌ಸಿಬಿ ತಂಡದಲ್ಲಿ ತನ್ನ ಸ್ಥಾನವನ್ನು ಎಂದಿಗೂ ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 2016 ರ ಋತುವಿನ ನಂತರ ಬಿಡುಗಡೆಯಾದರು.
ನಾನು ಬೆಂಗಳೂರು ತಂಡದಲ್ಲಿ ಆಡಲು ಇಷ್ಟಪಡುತ್ತೇನೆ. ನಾನು ಅಲ್ಲಿದಂದಲೇ ಈ ಪಯಣ ಆರಂಭಿಸಿದೆ. ಅಲ್ಲಿಯೇ ಇದನ್ನು ಅಂತ್ಯಗೊಳಿಸಲು ಬಯುಸುತ್ತೇನೆ. ಅದು ತನ್ನ ತಲೆಯಲ್ಲಿದೆ” ಎಂದು ಕೆಎಲ್ ರಾಹುಲ್ ಹೇಳಿದರು.