Advertisement

ಮಲೇಷ್ಯಾ ಮಹಿಳೆ ದಾಳಿ? ಅಯೋಧ್ಯೆ, ಬುದ್ಧ ಗಯಾ ಮೇಲೆ ಕಣ್ಣು

01:39 AM Dec 14, 2020 | sudhir |

ಹೊಸದಿಲ್ಲಿ : ಅಯೋಧ್ಯೆ, ಹೊಸದಿಲ್ಲಿ ಸಹಿತ ದೇಶದ ಪ್ರಮುಖ ನಗರಗಳನ್ನು ಗುರಿಯಾಗಿ ಇರಿಸಿಕೊಂಡು ದಾಳಿ ನಡೆಸುವ ಸಂಚನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಬಯಲಿಗೆ ಎಳೆದಿವೆ. ಅದರ ನೇತೃತ್ವವನ್ನು ಮಹಿಳೆಯೇ ವಹಿಸಲಿದ್ದಾಳೆ, ಆಕೆಗೆ ಮ್ಯಾನ್ಮಾರ್‌ನಲ್ಲಿ ತರಬೇತಿ ನೀಡಲಾಗಿದೆ ಎಂದು ಗುಪ್ತಚರ ವರದಿಯಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ ಎಲ್ಲ ರಾಜ್ಯಗಳಿಗೆ, ವಿಶೇಷವಾಗಿ ಉತ್ತರ ಪ್ರದೇಶ, ಬಿಹಾರ, ಪಂಜಾಬ್‌ ಸರಕಾರಗಳಿಗೆ ಶನಿವಾರ ರಾತ್ರಿಯೇ ಈ ಬಗ್ಗೆ ಸೂಚನೆ ನೀಡಲಾಗಿತ್ತು.

Advertisement

ಅಯೋಧ್ಯೆ, ಬುದ್ಧ ಗಯಾ ಕೂಡ ಉಗ್ರರ ಗುರಿ ಆಗಿತ್ತು ಎನ್ನಲಾಗಿದೆ. ಪಶ್ಚಿಮ ಬಂಗಾಲದ ಪ್ರಮುಖ ನಗರಗಳು, ಶ್ರೀನಗರಗಳಲ್ಲಿ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳನ್ನು ಉಲ್ಲೇಖೀಸಿ ಹಲವು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ದಾಳಿ ನಡೆಸುವ ಬಗ್ಗೆ ಕುಮ್ಮಕ್ಕು ಮತ್ತು ವಿತ್ತೀಯ ನೆರವು ನೀಡುವ ನಿಟ್ಟಿನಲ್ಲಿ ಮಲೇಷ್ಯಾ ಮೂಲದ ಸಂಸ್ಥೆಯಿಂದ 2 ಲಕ್ಷ ಡಾಲರ್‌ ಮೊತ್ತ ವರ್ಗಾವಣೆಯಾಗಿದೆ. ಕೌಲಾಲಂಪುರದಲ್ಲಿರುವ ರೊಹಿಂಗ್ಯಾ ಮುಸ್ಲಿಮರ ನಾಯಕ ಮೊಹಮ್ಮದ್‌ ನಾಸಿರ್‌ ಮತ್ತು ವಿವಾದಿತ ಧಾರ್ಮಿಕ ವಿದ್ವಾಂಸ ಡಾ| ಜಕೀರ್‌ ನಾಯ್ಕಗೆ ಮೊತ್ತ ಸಂದಾಯವಾಗಿದೆ. ಇಷ್ಟು ಮಾತ್ರ ವಲ್ಲದೆ, ಚೆನ್ನೈಯಲ್ಲಿರುವ ಹವಾಲಾ ಜಾಲ ನಿರ್ವಹಿಸುವ ವ್ಯಕ್ತಿಯೊಬ್ಬನಿಗೂ ಆಂಶಿಕ ಮೊತ್ತ ಪಾವತಿಯಾಗಿದೆ ಎಂದು ವರದಿಯಲ್ಲಿ ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next