ಮುಂಬಯಿ: ಈ ಬಾರಿ ಐಪಿಎಲ್ ಗೆ ಕೋಲ್ಕತಾ ನೈಟ್ ರೈಡರ್ಸ್ (KKR) ಸೋಮವಾರ ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ಬದಲಿಗೆ ಶ್ರೀಲಂಕಾದ ದುಷ್ಮಂತ ಚಮೀರಾ ಅವರನ್ನು ಹೆಸರಿಸಿದೆ. 50 ಲಕ್ಷ ಮೀಸಲು ಬೆಲೆಯಲ್ಲಿ ಚಮೀರಾ ಕೆಕೆಆರ್ ಸೇರಲಿದ್ದಾರೆ ಎಂದು ಐಪಿಎಲ್ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀಲಂಕಾದ ವೇಗಿ ಚಮೀರಾ ಕ್ರಮವಾಗಿ 2018 ಮತ್ತು 2021 ಸೀಸನ್‌ಗಳಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ಅವರು 2022 ರ ಋತುವಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಅನ್ನು ಪ್ರತಿನಿಧಿಸಿದ್ದರು, ಅಲ್ಲಿ ಅವರು 12 ಪಂದ್ಯಗಳಿಂದ ಒಂಬತ್ತು ವಿಕೆಟ್ ಗಳನ್ನು ಪಡೆದಿದ್ದಾರೆ.
WPL ನಲ್ಲಿ ಬದಲಾವಣೆ
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಭಾರತೀಯ ಆಟಗಾರ್ತಿ ರೈಸಿಂಗ್ ಸ್ಟಾರ್ ಕಾಶ್ವೀ ಗೌತಮ್ ಗಾಯದ ಕಾರಣ ಎರಡನೇ ಆವೃತ್ತಿಯಿಂದ ಹೊರಗುಳಿದಿದ್ದಾರೆ.
2 ಕೋಟಿ ರೂ ಪಡೆದುಕೊಂಡಿದ್ದ ಕಶ್ವೀ ಗುಜರಾತ್ ಜೈಂಟ್ಸ್, ಮುಂಬೈನ ಸಯಾಲಿ ಸತ್ಗರೆ ಅವರನ್ನು 10 ಲಕ್ಷ ರೂ.ಗಳ ಮೀಸಲು ಬೆಲೆಗೆ ಬದಲಿಯಾಗಿ ಹೆಸರಿಸಿದೆ. ಭಾರತದ ಆಲ್‌ರೌಂಡರ್ ಕನಿಕಾ ಅಹುಜಾ ಕೂಡ ಗಾಯದ ಕಾರಣ WPL ನಿಂದ ಹೊರಗುಳಿದಿದ್ದಾರೆ.
ಆರ್ ಸಿಬಿ ಕೂಡ ಮಹಾರಾಷ್ಟ್ರದ ಎಡಗೈ ವೇಗಿ ಶ್ರದ್ಧಾ ಪೋಖರ್ ಕರ್ ಅವರನ್ನು 10 ಲಕ್ಷ ರೂ. ಮೂಲ ಬೆಲೆಯಲ್ಲಿ ತಂಡಕ್ಕೆ ಸೇರಿಸಿ ಕೊಂಡಿದೆ.