ಕೋಲ್ಕತ್ತಾ : ಬಾಲಿವುಡ್ ನ ಖ್ಯಾತ ಸಂಗೀತಗಾರ ಕೆಕೆ ಅವರು ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಅವರಿಗೆ 53 ವರ್ಷ ವಯಸ್ಸಾಗಿತ್ತು. ಕೋಲ್ಕತ್ತಾದ ನಜ್ರುಲ್ ಮಂಜ್‌ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಾಡುತ್ತಿದ್ದ ವೇಳೆ ಹೃದಯಾಘಾತಗೊಂಡು ಕುಸಿದು ಬಿದ್ದಿದ್ದಾರೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಕೆಕೆ ಎಂದೇ ಪ್ರಖ್ಯಾತಿ ಪಡೆದಿರುವ ಬಾಲಿವುಡ್‌ನ ಗಾಯಕ ಕೃಷ್ಣಕುಮಾರ್ ಕುನ್ನತ್ ತನ್ನ ಅದ್ಬುತ ಕಂಠದಿಂದಲೇ ಜನರನ್ನು ಮಂತ್ರಮುಗ್ದರನ್ನಾಗಿಸುತ್ತಿದ್ದರು.
1999 ರ ಮೊದಲ ಆಲ್ಬಂ ‘ಪಾಲ್’ ಭಾರಿ ಮೆಚ್ಚುಗೆಯನ್ನು ಗಳಿಸಿತ್ತು. ಬಳಿಕ 2000 ರ ದಶಕದ ಆರಂಭದಲ್ಲಿ ಹಿನ್ನೆಲೆ ಗಾಯನದಲ್ಲಿ ವೃತ್ತಿಜೀವನವನ್ನು ಆರಂಭಿಸಿದ ಕೆಕೆ ಹಲವಾರು ಜನಪ್ರಿಯ ಹಾಡುಗಳಿಂದ ಚಿತ್ರ ಪ್ರೀಯರ ಮನಗೆದ್ದಿದ್ದರು.
Related Articles
ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದು.
ಕನ್ನಡದಲ್ಲಿ ಸಂಚಾರಿ, ಮಳೆ ಬರಲಿ ಮಂಜು ಇರಲಿ, ಲವ್, ಮನಸಾರೆ, ಪರಿಚಯ, ಬಹುಪರಾಕ್, ಯೋಗಿ, ಮದನ, ರೌಡಿ ಅಳಿಯ ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ.
ಕೆಕೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ಚಿತ್ರರಂಗ, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ : ತುಸು ಹೆಚ್ಚೇ ಸುರಿಯಲಿದೆ ಮುಂಗಾರು ಮಳೆ: ಭಾರತೀಯ ಹವಾಮಾನ ಇಲಾಖೆ