Advertisement

ಮಹಿಳೆಯರಿಗೆ ಕಿತ್ತೂರು ಚನ್ನಮ್ಮ ಸ್ಪೂರ್ತಿ

03:24 PM Nov 01, 2021 | Shwetha M |

ವಿಜಯಪುರ: ಕಿತ್ತೂರು ಚನ್ನಮ್ಮ ಕರ್ನಾಟಕದ ಹೆಮ್ಮೆ ಹಾಗೂ ಕನ್ನಡದ ಅಸ್ಮಿತೆಯ ಪ್ರತೀಕ. ಭಾರತದ ಸ್ವಾತಂತ್ರ್ಯ ಹೋರಾಟದ ಮೊದಲ ಮಹಿಳಾ ಹೋರಾಟಗಾರ್ತಿ ಎಂಬ ಅಭಿದಾನ ಪಡೆದಿದ್ದು, ಆಧುನಿಕ ಭಾರತೀಯ ಮಹಿಳೆಯರ ಪಾಲಿಗೂ ಸ್ಪೂರ್ತಿಯ ಸೆಲೆ ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ ಡೋಣೂರ ಅಭಿಪ್ರಾಯಪಟ್ಟರು.

Advertisement

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಇತಿಹಾಸ ಮತ್ತು ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿನಿಯರು ಕಿತ್ತೂರಿನ ಸಣ್ಣ ಸಂಸ್ಥಾನದ ರಾಣಿಯಾದರೂ ಚನ್ನಮ್ಮ ಅವರು ಸಂಸ್ಥಾನದ ಸಂರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ನೀಡಿದ ಹೋರಾಟದ ಕಿಚ್ಚು ಎಂದಿಗೂ ಸ್ಮರಣೀಯ. ಅವರ ಜೀವನ ಮೌಲ್ಯಗಳ ಬಗ್ಗೆ ಇಂದಿನ ವಿದ್ಯಾರ್ಥಿ ಯುವ ಜನಾಂಗ ತಿಳಿಯುವುದು ಅಗತ್ಯ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಯಾವುದೇ ಸಮಸ್ಯೆ ವಿರುದ್ಧ ಹೋರಾಡಲು ಸಾಧ್ಯ ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಮ್ಮನ ಮಡಿಲು ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಮನೆಗೊಬ್ಬಳು ಚನ್ನಮ್ಮ ಹುಟ್ಟಬೇಕು. ಅಂದಾಗ ಮಾತ್ರ ಚನ್ನಮ್ಮಳ ಧೈರ್ಯ, ಆದರ್ಶಗಳು ಎಲ್ಲರ ಅಂತರಾಳದಲ್ಲಿ ಪ್ರಜ್ವಲಿಸುತ್ತವೆ. ಆಗ ಎಂತಹ ಕಷ್ಟ ಎದುರಾದರೂ ನಾವು ಹೋರಾಡಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಬಿ.ಕೆ. ತುಳಸಿಮಾಲ ಮಾತನಾಡಿ, ಚನ್ನಮ್ಮ ರಾಣಿ ತನ್ನ ಸಂಸ್ಥಾನದ ರಾಜ್ಯದ ಪಾಲಿನ ಪ್ರಜೆಗಳ ಪಾಲಿಗೆ ಮಹಾತಾಯಿಯಾಗಿ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡವರು. ಕಿತ್ತೂರು ಸಂಸ್ಥಾನದ ಉಳಿಯುವಿನ ಜೊತೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಪ್ರಾಣಾರ್ಪಣೆ ಮಾಡಿದ ಧೀರ ಹಾಗೂ ಮಾದರಿ ರಾಣಿ ಎಂದು ಬಣ್ಣಿಸಿದರು.

Advertisement

ಡಿ.ಎಂ.ಮದರಿ, ಕಣ್ಣನ್‌, ಮಹೇಶ ಚಿಂತಾಮಣಿ, ನಾಮದೇವಗೌಡ, ರೇಣುಕಾ ಮೇಟಿ, ಆರ್‌.ವಿ. ಗಂಗಶಟ್ಟಿ, ಜ್ಯೋತಿ ಉಪಾಧ್ಯ, ಬಾಬು ಲಮಾಣಿ, ಶ್ರೀನಿವಾಸ, ವಿಷ್ಣು ಶಿಂಧೆ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ರಾಜಕುಮಾರ ಮಾಲಿಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಇತಿಹಾಸ ವಿಭಾಗದ ಡಾ| ನಂದ ಕುಲಕರ್ಣಿ ಪರಿಚಯಿಸಿದರು. ಕ್ರೀಡಾ ವಿಭಾಗದ ಪ್ರಾಧ್ಯಾಪಕಿ ಕೆ.ಎನ್‌. ಅಶ್ವಿ‌ನಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next