Advertisement
ಮೂರುಸಾವಿರಮಠದ ಪ್ರಭು ನೀಲಕಂಠ ಮಹಾಸ್ವಾಮೀಜಿ ಮಾತನಾಡಿ, ಸ್ವಾತಂತ್ರ ಸಂಗ್ರಾಮದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರ್ ಚೆನ್ನಮ್ಮಳ ಶೌರ್ಯಸಾಹಸ ಇಂದಿನ ಯುವಪೀಳಿಗೆ ಮೈಗೂಡಿಸಿಕೊಳ್ಳುವದು ಅತ್ಯಗತ್ಯವಾಗಿದೆ. ಸರಕಾರ ಈ ಬಾರಿ ಕಿತ್ತೂರ ಉತ್ಸವವನ್ನು ರಜತ ಮಹೋತ್ಸವವನ್ನು ಅ.23, 24 ರಂದು ಆಯೋಜಿಸಿರುವದು ಶ್ಲಾಘನೀಯವಾದುದು ಎಂದರು.
Related Articles
Advertisement
ಆದರೆ ಇನ್ನು ಸಹ ಕೋರೋಣದ ಭಯ ಇರುವುದರಿಂದ ಉತ್ಸವದಲ್ಲಿ ಭಾಗವಹಿಸುವ ಸಾರ್ವಜನಿಕರು ಮಾಸ್ಕ್,ಧರಿಸಿ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕೆಂದು ತಿಳಿಸಿದರು.
ಚನ್ನಮ್ಮಾ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಜ್ಯೋತಿಗೆ ಚಾಲನೆ ನೀಡಲಾಯಿತು. ನಂತರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಚೆನ್ನಮ್ಮ ವೃತ್ತದ ಮೂಲಕ ಅನಿಗೋಳಮಾರ್ಗವಾಗಿ ಜ್ಯೋತಿಯು ಮುಂದೆ ಸಾಗಿತು.
ಜ್ಯೋತಿ ಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶಶಿಧರ್ ಬಗಲಿ,ತಹಸೀಲ್ದಾರ್ ಬಸವರಾಜ್ ನಾಗರಾಳ, ಮಾಜಿ ಶಾಸಕ ಜಗದೀಶ್ ಮೆಟಗುಡ್ಡ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ್ ಸಂಪಗಾವಿ,ಪುರಸಭೆ ಅಧ್ಯಕ್ಷ ಬಾಬು ಕೂಡಸೋಮನ್ನವರ, ಪುರಸಭೆ ಮುಖ್ಯಾಧಿಕಾರಿ ಕವಿರಾಜ್ ನಾಗನೂರ, ಪುರಸಭೆ ಸದಸ್ಯ ರಾಜು ಜನ್ಮಟ್ಟಿ,ಗುರು ಮೆಟಗುಡ್ಡ,ಅರ್ಜುನ್ ಕಲಕುಟ್ಕರ್,ಕಂದಾಯ ನೀರಿಕ್ಷಕ ಸುರೇಶ ಮಾಳಗಿ , ಮಲ್ಲೇಶ ಹೊಸಮನಿ, ಡಾ.ಮಹಾಂತೇಶ ಕಳ್ಳಿಬಡ್ಡಿ, ಬಸವರಾಜ ಶಿಂತ್ರಿ, ಅಂಜನಾ ಬೊಂಗಾಳೆ, ಲೋಕೊಪಯೋಗಿ ಇಲಾಖೆ ಎಇ ಇ ವಿ.ಎಸ್.ಆನಿಕಿವಿ, ವಿವಿಧ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು ಇದ್ದರು.