Advertisement
ಈ ವೇಳೆ ಮಾತನಾಡಿದ ಅವರು, ಪ್ರತಿ ವರ್ಷ ಸರ್ಕಾರ ವಿಜಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿತ್ತು. ಈ ಬಾರಿ ಕಾರಣಾಂತರಗಳಿಂದ ಸರಳವಾಗಿ ಆಚರಿಸಲಾಗಿದೆ. ಕಿತ್ತೂರು ರಾಣಿ ಚನ್ನಮ್ಮ ಧೈರ್ಯದ ಪ್ರತಿರೂಪ. ಇಂದಿನ ಮಹಿಳೆಯರು ಚನ್ನಮ್ಮಳ ಆತ್ಮಸ್ಥೈರ್ಯ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಎಲ್ಲವನ್ನು ಎದುರಿಸಿ ಬಾಳುವ ಛಲ ತಂದುಕೊಳ್ಳಬೇಕು ಎಂದರು.
Related Articles
Advertisement
ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಹೋರಾಡಿದವರಲ್ಲಿ ಕಿತ್ತೂರು ರಾಣಿ ಚನ್ನಮ್ಮ ಒಬ್ಬಳು. ಚನ್ನಮ್ಮಳ ತತ್ವಾದರ್ಶ, ಸಿದ್ಧಾಂತ ಎಲ್ಲರೂ ಪಾಲಿಸುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಕಿತ್ತೂರು ಚನ್ನಮ್ಮ ರಣರಂಗದಲ್ಲಿ ಪ್ರಾಣ ಲೆಕ್ಕಿಸದೇ ವೀರಭೂಮಿಗಾಗಿ ಹೋರಾಡಿದಳು ಎಂದು ಸ್ಮರಿಸಿದರು. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿ, ಕೇವಲ ವಿಜಯೋತ್ಸವದಂದು ಕಿತ್ತೂರು ಚನ್ನಮ್ಮನನ್ನು ನೆನಪಿಸಿಕೊಳ್ಳುವುದು ಸರಿಯಲ್ಲ. ಅದರ ಬದಲು ಅವರ ತ್ಯಾಗ-ಬಲಿದಾನ ದಿನವೂ ಸ್ಮರಿಸಬೇಕು ಎಂದರು. ಈ ವೇಳೆ ಜಿಪಂ ಸದಸ್ಯ ಎನ್. ಶಿವನಗೌಡ ಗೊರೇಬಾಳ, ಟಿ. ಪಂಪನಗೌಡ, ಎಸ್.ಬಸವರಾಜ, ಸಿದ್ರಾಮೇಶ ಮನ್ನಾಪುರ, ವೀರಭದ್ರಪ್ಪ ಗಸ್ತಿ, ಶಿವಕುಮಾರಗೌಡ ಕುರಕುಂದಿ ಇತರರಿದ್ದರು.