Advertisement
ಅರಳಿನ ರಾಯತ ಬೇಕಾಗುವ ಸಾಮಗ್ರಿ: ಅರಳು-‰ ಅರ್ಧ ಕಪ್, ತೆಂಗಿನತುರಿ- ಒಂದು ಕಪ್, ಜೀರಿಗೆ- ಕಾಲು ಚಮಚ, ಸಕ್ಕರೆ- ಒಂದು ಚಮಚ, ಕೆಂಪುಮೆಣಸಿನ ಪುಡಿ- ಅರ್ಧ ಚಮಚ, ಹೆಚ್ಚಿದ ಸೇಬು ಮತ್ತು ಈರುಳ್ಳಿ – ಒಂದು, ಕ್ಯಾರೆಟ್‌ತುರಿ- ನಾಲ್ಕು ಚಮಚ, ಮೊಸರು- ಎರಡು ಕಪ್, ಉಪ್ಪು$ ರುಚಿಗೆ.
ಬೇಕಾಗುವ ಸಾಮಗ್ರಿ: ಕಡಲೆಹಿಟ್ಟು – ಎರಡು ಕಪ್, ಅರಳು- ಒಂದೂವರೆ ಕಪ್, ನೆಲಕಡ್ಲೆ ತರಿ- ಅರ್ಧ ಕಪ್, ಗೋಡಂಬಿ ತರಿ – ಕಾಲು ಕಪ್, ಬೆಲ್ಲ – ಕಾಲು ಕೆ.ಜಿ., ಏಲಕ್ಕಿ ಸುವಾಸನೆಗೆ.
Related Articles
Advertisement
ಅರಳಿನ ಪಾನಕ ಬೇಕಾಗುವ ಸಾಮಗ್ರಿ: ಅರಳು- ಆರು ಚಮಚ, ನೆನೆಸಿದ ಖರ್ಜೂರ- ಎರಡು, ನೆನೆಸಿದ ಒಣದ್ರಾಕ್ಷಿ- ಹತ್ತು, ಜೇನುತುಪ್ಪ- ರುಚಿಗೆ ಬೇಕಷ್ಟು. ತಯಾರಿಸುವ ವಿಧಾನ : ಮಿಕ್ಸಿಜಾರಿಗೆ ಅರಳು, ಒಣದ್ರಾಕ್ಷಿ ಮತ್ತು ಖರ್ಜೂರ ಹಾಕಿ, ಇದಕ್ಕೆ ಸ್ವಲ್ಪ$ ನೀರು ಸೇರಿಸಿ, ನುಣ್ಣಗೆ ರುಬ್ಬಿ, ಮಿಕ್ಸಿಂಗ್ ಬೌಲ್‌ಗೆ ಹಾಕಿ ಬೇಕಷ್ಟು ನೀರು ಹಾಗೂ ಜೇನುತುಪ್ಪ ಸೇರಿಸಿ ಹದಮಾಡಿಕೊಂಡು ಸರ್ವ್ ಮಾಡಬಹುದು. ಅರಳಿನ ಸಂಡಿಗೆ
ಬೇಕಾಗುವ ಸಾಮಗ್ರಿ: ಅರಳು- ಎರಡು ಕಪ್, ಸಬ್ಬಕ್ಕಿ- ಎರಡು ಕಪ್, ಹಸಿಮೆಣಸು- ನಾಲ್ಕು, ಇಂಗು- ಸುವಾಸನೆಗಾಗಿ, ಉಪ್ಪು ರುಚಿಗೆ ಬೇಕಷ್ಟು. ತಯಾರಿಸುವ ವಿಧಾನ: ಸಬ್ಬಕ್ಕಿಯನ್ನು ತೊಳೆದು ಹಿಂದಿನ ದಿನ ರಾತ್ರಿ ನನೆಯಲು ಹಾಕಿ. ಮರುದಿನ ಇದಕ್ಕೆ ಬೇಕಷ್ಟು ನೀರು ಸೇರಿಸಿ ಚೆನ್ನಾಗಿ ಬೇಯಿಸಬೇಕು. ನಂತರ ಹತ್ತು ನಿಮಿಷ ನನೆಸಿದ ಅರಳಿಂದ ನೀರು ಚೆನ್ನಾಗಿ ತೆಗೆದು, ಬೆಂದ ಸಬ್ಬಕ್ಕಿಗೆ ಸೇರಿಸಿ. ನಂತರ ಹಸಿಮೆಣಸು, ಉಪ್ಪು$ ಮತ್ತು ಇಂಗನ್ನು ರುಬ್ಬಿಕೊಂಡು ಇದಕ್ಕೆ ಸೇರಿಸಿ. ಚೆನ್ನಾಗಿಮಿಶ್ರಮಾಡಿ. ದಪ್ಪಪ್ಲಾಸ್ಟಿಕ್ ಹಾಳೆಯಲ್ಲಿ ಸಂಡಿಗೆ ಬಿಟ್ಟು ನಾಲ್ಕು ಬಿಸಿಲು ಒಣಗಿಸಿದರೆ ಸಂಡಿಗೆ ಸಿದ್ಧ.