Advertisement

ಯುವ ಬ್ರಿಗೇಡ್ನಿಂದ ಶಿಕ್ಷಕರಿಗೆ ಕಿಟ್ ವಿತರಣೆ

05:28 PM Jun 10, 2021 | Team Udayavani |

ನೆಲಮಂಗಲ: ತಾಲೂಕಿನ ಖಾಸಗಿ ಶಾಲಾ ಶಿಕ್ಷಕರಿಗೆ ಯುವಾ ಬ್ರಿಗೇಡ್ ವತಿಯಿಂದ ಗುರು ಗೌರವ ಎಂಬ ದಿನಸಿ ಕಿಟ್ ವಿತರಣೆ ಮಾಡಲಾಯಿತು. ಬಸವಣ್ಣ ದೇವರ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕೊರೊನಾ ಸಂಕಷ್ಟದಿಂದ ಶಾಲೆಗಳು ಮುಚ್ಚಿದ ಪರಿಣಾಮ ಖಾಸಗಿ ಶಿಕ್ಷಕರಿಗೆ ಸಂಬಳದ ಜತೆ ಕೆಲಸವೂ ಇಲ್ಲದೆ ಮನೆಯಲ್ಲಿ ಉಳಿಯುವಂತಾಗಿದೆ.

Advertisement

ಜೀವನ ನಡೆಸಲು ಬಹಳಷ್ಟು ಕಷ್ಟ ಅನುಭವಿಸುವಂತಾಗಿದೆ. ಖಾಸಗಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಯುವಾ ಬ್ರಿಗೇಡ್ ಗುರು ಗೌರವ ಅಭಿಯಾನದ ಮೂಲಕ ಸಂಕಷ್ಟದಲ್ಲಿರುವ ಖಾಸಗಿ ಶಿಕ್ಷಕರ ಮನೆಗಳಿಗೆ ದಿನಸಿ ಕಿಟ್ ವಿತರಣೆ ಮಾಡಿ ದ್ದಾರೆ. ಕಿಟ್ ನೀಡಿದ ಪೋಟೋಗಳನ್ನು ಪ್ರಚಾರಕ್ಕೆ ಬಳಸ ದಂತೆ ತೀರ್ಮಾನಿಸಿದ್ದು, ಕಿಟ್ ನೀಡಿ ಧೈರ್ಯವಾಗಿರುವಂತೆ ಆತ್ಮವಿಶ್ವಾಸ ತುಂಬುವಂತಹ ಕೆಲಸವನ್ನು ಕಾರ್ಯಕರ್ತರು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆ: ಯುವ ಬ್ರಿಗೇಡ್ ಕಾರ್ಯಕರ್ತ ಸಿದ್ದು ಮಾತನಾಡಿ, ತಾಲೂಕಿನ 40ಕ್ಕೂ ಹೆಚ್ಚು ಸಂಕಷ್ಟದಲ್ಲಿದ್ದ ಖಾಸಗಿ ಶಾಲಾ ಶಿಕ್ಷಕರಿಗೆ ಮೊದಲ ಹಂತದಲ್ಲಿ ಗುರುಗೌರವ ದಿನಸಿ ಕಿಟ್ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತೂಷ್ಟು ಶಿಕ್ಷಕರಿಗೆ ದಿನಸಿ ಕಿಟ್ ನೀಡಲಾಗುತ್ತದೆ. ಮುಂದಿನ ದಿನದಲ್ಲಿ ಹೆಚ್ಚಿನ ಸೇವೆ ಮಾಡಲಿದ್ದೇವೆ ಎಂದರು. ಕಾರ್ಯಕರ್ತರಾದ ಚಂದ್ರು, ಅರುಣ್ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next