Advertisement

ಕಾರ್ಮಿಕರ ಕಿಟ್‌ ವಿತರಣೆ ವೇಳೆ ಗೊಂದಲ

08:23 PM Jul 04, 2021 | Team Udayavani |

ಗೌರಿಬಿದನೂರು: ನಗರದ ಎಪಿಎಂಸಿಮಾರುಕಟ್ಟೆ ಪ್ರಾಂಗಣದಲ್ಲಿ ಶುಕ್ರವಾರ ಕಟ್ಟಡಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್‌ವಿತರಣೆ ಮಾಡಲಾಯಿತು.

Advertisement

ಈ ವೇಳೆ ಕಟ್ಟಡಕಾರ್ಮಿಕರ ಜತೆಗೆ ಇತರರೂ ಕಿಟ್‌ಪಡೆಯಲು ಮುಂದಾಗಿದ್ದು, ಹಲವುಗೊಂದಲಗಳಿಗೆಕಾರಣವಾಗಿತ್ತು.ಆಹಾರದ ಕಿಟ್‌ ವಿತರಣೆಗೂ ಮುನ್ನಕಾರ್ಮಿಕ ಇಲಾಖೆ ಅಧಿಕಾರಿಗಳು,ಪೊಲೀಸರು ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು.

ಆದರೆ, ಕಿಟ್‌ ವಿತರಣೆಆರಂಭವಾಗುತ್ತಿದ್ದಂತೆ ಚೀಟಿ ಪಡೆಯುವವಿಚಾರದಲ್ಲಿ ಕಾರ್ಮಿಕರು ಹಾಗೂ ಕೆಲಮುಖಂಡರ ನಡುವೆ ತೀವ್ರ ವಾಗ್ವಾದಉಂಟಾಗಿ ಅಸಮಾಧಾನ ಮೂಡಿತು.ಸರ್ಕಾರದಿಂದ ಕಾರ್ಮಿಕ ಇಲಾಖೆಗೆಪೂರೈಕೆ ಆಗಿದ್ದ ಆಹಾರ ಕಿಟ್‌ಗಳನ್ನು ಕಟ್ಟಡಕಾರ್ಮಿಕರಿಗೆ ವಿತರಣೆ ಮಾಡಲು ಸ್ಥಳೀಯರಾಜಕಾರಣ ಅಡ್ಡಿಯಾಗಿದ್ದು, ಇದರಿಂದಪಕ್ಷದ ಮುಖಂಡರು ಹಾಗೂ ಕಾರ್ಮಿಕಸಂಘಟನೆಯ ನಾಯಕರೊಂದಿಗೆ ವಾಗ್ವಾದ ನಡೆಯಿತು.

ಕಿಟ್ವಿತರಣೆಯಲ್ಲಿ ತೃಪ್ತಿ ತಂದಿದೆ: ಈವಿಚಾರವಾಗಿ ಕಾರ್ಮಿಕ ಇಲಾಖೆಯ ನಿರೀಕ್ಷಕರಾಮಾಂಜಿನಪ್ಪ ಅವರನ್ನು ಕೇಳಿದರೆ,ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ವಿತರಿಸಲು 4 ಸಾವಿರ ಆಹಾರದ ಕಿಟ್‌ ಬಂದಿದೆ.ಮೊದಲ ಹಂತವಾಗಿ ಶಾಸಕರ ನೇತೃñದಲ್ಲಿ ‌Ì1500 ಮಂದಿಗೆ ವಿತರಣೆ ಮಾಡಲಾಗಿದೆ.

ಆರಂಭದ ದಿನ ಹೆಚ್ಚಿನ ಕಾರ್ಮಿಕರು ಬಂದಿದ್ದಕಾರಣ, ಕಿಟ್‌ ವಿತರಣೆಯಲ್ಲಿ Óಲ್ಪ ‌Ì ಗೊಂದಲವಾಗಿದೆ. ಆದರೂ, ನಿರೀಕ್ಷೆಯಂತೆ ಎಲ್ಲರಿಗೂಆಹಾರದ ಕಿಟ್‌ ಲಭ್ಯವಾಗಿದೆ. ಕಿಟ್‌ ವಿತರಣೆಯಲ್ಲಿ ತೃಪ್ತಿ ತಂದಿದೆ ಎಂದು ವಿವರಿಸಿದರು.ಬಿಜೆಪಿ ಕಾರ್ಮಿಕ ಪ್ರಕೋಷ್ಟದ ಅಧ್ಯಕ್ಷರಮೇಶ್‌ ಪ್ರತಿಕ್ರಿಯೆ ನೀಡಿ, ಸರ್ಕಾರದಿಂದಕಟ್ಟಡಕಾರ್ಮಿಕರಿಗೆ ನೀಡಬೇಕಾದಆಹಾರದಕಿಟ್‌ಗಳನ್ನು ಸ್ಥಳೀಯ ಮುಖಂಡರು ತಮ್ಮಅಧಿಕಾರ ದಾಹಕ್ಕಾಗಿ ದುರುಪಯೋಗಮಾಡಿಕೊಳ್ಳುವುದು ಸರಿಯಲ್ಲ.

Advertisement

ಅರ್ಹರಿಗೆಕಿಟ್‌ ತಲುಪಿಸುವ ಮೂಲಕ ಅಧಿಕಾರಿಗಳು ತಮ್ಮ ಕಾರ್ಯಕ್ಷಮತೆ ಹಾಗೂ ಬದ್ಧತೆಮೆರೆಯಬೇಕು ಎಂದು ಹೇಳಿದರು.ನಗರಸಭೆ ಅಧ್ಯಕ್ಷರಾದ ಕೆ.ಎಂ.ಗಾಯತ್ರಿಬಸವರಾಜ್‌, ಸದಸ್ಯರಾದ ವಿ.ಅಮರನಾಥ್‌,ಎಪಿಎಂಸಿ ಅಧ್ಯಕ್ಷರಾದ ಅಶ್ವತ್ಥರೆಡ್ಡಿ, ಕಾರ್ಮಿಕಸಂಘದ ತಾಲೂಕು ಅಧ್ಯಕ್ಷ ಜಿ.ಎನ್‌.ವೆಂಕಟಾದ್ರಿ, ಸರ್‌ ಎಂ.ವಿ.ಕಾರ್ಮಿಕರ ಸೇವಾಸಂಘದ ತಾಲೂಕು ಅಧ್ಯಕ್ಷ ಕೆ.ಎನ್‌.ನರಸಿಂಹಮೂರ್ತಿ, ಮುಖಂಡರಾದ ವೆಂಕಟರವಣ,ಕಿರಣ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next