Advertisement

ಕಿಷ್ಕಿಂದಾ ಅಂಜನಾದ್ರಿ ಪುನೀತ್ ರಾಜ್ ಕುಮಾರ್ ನೆಚ್ಚಿನ ಶ್ರದ್ಧಾಕೇಂದ್ರ

06:20 PM Oct 29, 2021 | Team Udayavani |

ಗಂಗಾವತಿ: ಕನ್ನಡದ ಪವರ್ ಪುನೀತ್ ರಾಜ್ ಕುಮಾರ್ ಅವರಿಗೆ ತಾಲ್ಲೂಕಿನ ಕಿಷ್ಕಿಂದಾ ಅಂಜನಾದ್ರಿ ಅತ್ಯಂತ ಇಷ್ಟವಾದ ಶ್ರದ್ಧಾಕೇಂದ್ರವಾಗಿತ್ತು. ಈ ಭಾಗದಲ್ಲಿ ’ರಣವಿಕ್ರಮ’, ‘ದೊಡ್ಮನೆ ಹುಡುಗ’, ‘ಜೇಮ್ಸ್’ ಸೇರಿದಂತೆ ಹಲವು ಚಿತ್ರಗಳನ್ನು ಚಿತ್ರೀಕರಣ ಮಾಡಿದ ಸಂದರ್ಭದಲ್ಲಿ ನಿತ್ಯವೂ ಅಂಜನಾದ್ರಿ ಬೆಟ್ಟವನ್ನು ಹತ್ತಿ ಆಂಜನೇಯನ ದರ್ಶನ ಪಡೆಯುತ್ತಿದ್ದರು.

Advertisement

ಕಳೆದ ಇಪ್ಪತ್ತೈದು ದಿನಗಳ ಹಿಂದೆ ಜೇಮ್ಸ್ ಚಿತ್ರದ ಅಂತಿಮ ಚಿತ್ರೀಕರಣಕ್ಕಾಗಿ ಪೇಟೆ ಭಾಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಂಜನಾದ್ರಿಗೆ ಬಂದು ಆಂಜನೇಯನ ದರ್ಶನ ಪಡೆದು ಈ ಭಾಗದ ಸೇತುವೆ ಮಣಿಭದ್ರೇಶ್ವರ ತಳವಾರಘಟ್ಟ ಆನೆಗೊಂದಿ ಭಾಗವನ್ನು ವೀಕ್ಷಿಸಿ ತೆರಳಿದ್ದರು.

ಜೇಮ್ಸ್ ಚಿತ್ರ ಚಿತ್ರೀಕರಣ ತಾಲ್ಲೂಕಿನ ವಾಣಿ ಭದ್ರೇಶ್ವರ ಬೆಟ್ಟದಲ್ಲಿ ಸುಮಾರು 25 ದಿನಗಳವರೆಗೂ ಜರಗಿತ್ತು.

ರಣವಿಕ್ರಮ ಚಿತ್ರೀಕರಣ ಸಂದರ್ಭದಲ್ಲಿ ಗಂಗಾವತಿಯ ಹಿರೇಜಂತಕಲ್ ಪ್ರೌಢಶಾಲೆಗೆ ಸುಮಾರು 3ಲಕ್ಷ ರೂಗಳನ್ನು ಹಾಗೂ ಜೇಮ್ಸ್ ಚಿತ್ರೀಕರಣ ಸಂದರ್ಭದಲ್ಲಿ ಮಲ್ಲಾಪುರ ಶಾಲೆಗೆ ಸುಮಾರು 2ಲಕ್ಷ ರೂ ಗಳನ್ನು ಶಾಲೆಯಲ್ಲಿ ಕಂಪ್ಯೂಟರ್ ಎಜುಕೇಷನ್ ನೀಡಲು ವಿತರಿಸಿದ್ದರು.

ತಾಲ್ಲೂಕಿನ ಮಲ್ಲಾಪುರದ 3ಜನ ಸಹೋದರಿಯರು ಅಪ್ಪಟ ಡಾ ರಾಜ್ ಕುಟುಂಬದ ಅಭಿಮಾನಿಗಳು ಎಂಬ ಸುದ್ದಿ ಉದಯವಾಣಿಯಲ್ಲಿ ಪ್ರಕಟವಾದ ಬಳಿಕ ರಾಜ್ ಕುಟುಂಬದ 3ಜನ ಸಹೋದರರು ತಮ್ಮ ವಾಹನದಲ್ಲಿ ಚಿತ್ರೀಕರಣ ಸ್ಥಳಕ್ಕೆ ಕರೆಸಿ ಅವರಿಗೆ ಗೌರವ ಸಮರ್ಪಣೆ ಮಾಡಿದರು.

Advertisement

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಅಂಜನಾದ್ರಿ ರಾಣಾಪುರ್ ಲೇಕ್ ವಾಣಿ ಭದ್ರೇಶ್ವರ ಮಲ್ಲಾಪುರ ಏಳು ಗುಡ್ಡ ಪ್ರದೇಶ ಹೀಗೆ ಹಲವಾರು ಸ್ಥಳಗಳನ್ನು ಪುನೀತ್ ರಾಜ್ ಕುಮಾರ್ ಸುತ್ತಾಡಿದ್ದರು.

ಇದನ್ನೂ ಓದಿ:ಕರಾಳ ದಿನ : ಪುನೀತ್ ಅಗಲಿಕೆಗೆ ಪ್ರಧಾನಿ ಮೋದಿ, ರಾಹುಲ್ ಸೇರಿ ಗಣ್ಯರ ಕಂಬನಿ 

ಗಂಗಾವತಿ ನಗರದಲ್ಲಿ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕನ್ನಡ ಪರ ಸಂಘಟನೆಗಳು ಸೇರಿದಂತೆ ಹಲವಾರು ಕನ್ನಡ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಗಾಂಧಿಚೌಕ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪುನೀತ್ ಅವರ ಭಾವಚಿತ್ರಕ್ಕೆ ಹೂಗಳನ್ನು ಸುರಿದು ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಸಮರ್ಪಣೆ ಮಾಡಿದರು.

ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ್ ಕನ್ನಡಪರ ಸಂಘಟನೆಗಳ ಅನೇಕ ಮುಖಂಡರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next