Advertisement

ಕಿಸಾನ್‌ ಸಮ್ಮಾನ್‌ ನಿಧಿಗೆ ನರೇಗಾ ಹಣ: ಸಿಎಂ ಆರೋಪ

06:37 AM Mar 07, 2019 | |

ಬೆಂಗಳೂರು: ಕೇಂದ್ರ ಸರ್ಕಾರವು ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರಾಜ್ಯದ 47 ಲಕ್ಷ ರೈತರಿಗೆ 2098 ಕೋಟಿ ರೂ. ಹಣ ನೀಡಲಿದೆ. ಆದರೆ, ರಾಜ್ಯ ಸರ್ಕಾರ ಹಾಲು ಉತ್ಪಾದಕರಿಗೆ ಪ್ರೋತ್ಸಾಹದ ರೂಪದಲ್ಲೇ 2,500 ಕೋಟಿ ರೂ. ಹಾಗೂ ಉಚಿತ ವಿದ್ಯುತ್‌ಗೆ 11,500 ಕೋಟಿ ರೂ. ಸಬ್ಸಿಡಿ ನೀಡುತ್ತಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಕೃಷಿ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬುಧವಾರ ಹಮ್ಮಿ ಕೊಂಡಿದ್ದ “ಕೃಷಿ ಪಂಡಿತ’ ಹಾಗೂ “ಕೃಷಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಕಳೆದ ನಾಲ್ಕೂವರೆ ವರ್ಷ ರೈತರನ್ನು ಮರೆತಿದ್ದ ಪ್ರಧಾನಿಯವರಿಗೆ ಚುನಾವಣೆ ಕಾರಣಕ್ಕಾಗಿ ಹಠಾತ್ತನೆ ರೈತರ ನೆನಪು ಬಂದಿದೆ. “ಕಿಸಾನ್‌ ಸಮ್ಮಾನ್‌ ನಿಧಿ’ಗೆ ನರೇಗಾ ಯೋಜನೆಯ ಕೂಲಿ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕೃಷಿ ಪಂಡಿತ ಪ್ರಶಸ್ತಿ: ದಯಾನಂದ ಜಗದೀಶ ಅಪ್ಪಯ್ಯನವರ ಮಠ (ಬೈಲ ಹೊಂಗಲ, ಬೆಳಗಾವಿ), ಮಹಮ್ಮದ್‌ ಗುಲಾಮ… ಅಹ್ಮದ್‌ ಖಾದ್ರಿ (ಬೀದರ್‌), ಸಣ್ಣಯಮನಪ್ಪ ಭೀಮಪ್ಪರಾಜಾಪುರೆ (ಗೋಕಾಕ್‌, ಬೆಳಗಾವಿ), ಎಂ. ರಾಮಯ್ಯ (ಶಿಡ್ಲಘಟ್ಟ, ಚಿಕ್ಕಬಳ್ಳಾಪುರ). ಮಂಜನಾಯ್ಕ (ಚನ್ನಗಿರಿ, ದಾವಣಗೆರೆ), ಶ್ರೀಕಾಂತ ಕುಂಬಾರ(ಮುಧೋಳ, ಬಾಗಲಕೋಟೆ), ಲಕ್ಷ್ಮಣ ಈಶ್ವರ ಪಸಾರೆ (ಚಿಕ್ಕೋಡಿ, ಬೆಳಗಾವಿ).

ಕೃಷಿ ಪ್ರಶಸ್ತಿ: ಕೆ.ರಾಂಬಾಬು (ಬಳ್ಳಾರಿ), ಹನುಮಂತಯ್ಯ (ಕುಣಿಗಲ…, ತುಮಕೂರು), ಕಲ್ಮೇಶ್‌ ರಾಯಗೊಂಡಪ್ಪ (ಅಥಣಿ, ಬೆಳಗಾವಿ), ಈರಯ್ಯ ಸಂಗಯ್ಯ ಪೂಜಾರಿ (ಅಥಣಿ, ಬೆಳಗಾವಿ), ಶ್ರೀಮಂತ ತಿಪ್ಪಣ್ಣ ಅಕ್ಕೋಳೆ (ರಾಯ ಭಾಗ, ಬೆಳಗಾವಿ), ಶರಣಪ್ಪ ಮಲಕಪ್ಪ ಯಂಕಂಚಿ (ಸಿಂದಗಿ, ವಿಜಯಪುರ), ಮಹದೇವಪ್ಪ ಬಸಪ್ಪ ಬಾಳಿಕಾಯಿ (ಕಲಘಟಗಿ, ಧಾರವಾಡ), ಟಿ.ಶಶಿಧರ್‌ (ಕೆ.ಆರ್‌.ನಗರ, ಮೈಸೂರು), ಶೋಭ (ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ), ವೀರಪ್ಪ ಶ್ರೀಶೈಲ ಗದಗ (ಬೈಲಹೊಂಗಲ, ಬೆಳಗಾವಿ), ಟಿ.ನಾಗರಾಜಪ್ಪ (ಹೊನ್ನಾಳಿ, ದಾವಣ ಗೆರೆ), ಜಯಶ್ರೀ (ಜಮಖಂಡಿ, ಬಾಗಲ ಕೋಟೆ), ಗಂಗಾಧರಪ್ಪ (ಗೌರಿ  ಬಿದ ನೂರು, ಚಿಕ್ಕಬಳ್ಳಾಪುರ), ಬಾವು ರಾಜ ರಾಯಗೊಂಡಪ್ಪ ಬಸರಗಿ (ಅಥಣಿ, ಬೆಳಗಾವಿ).

Advertisement

Udayavani is now on Telegram. Click here to join our channel and stay updated with the latest news.

Next