Advertisement

ಜಿಲ್ಲೆಯಲ್ಲಿ ಗುರಿಮುಟ್ಟದ ಕಿಸಾನ್‌ ಸಮ್ಮಾನ್‌ ಇ-ಕೆವೈಸಿ

03:49 PM Aug 29, 2022 | Team Udayavani |

ದೇವನಹಳ್ಳಿ: ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಕೇಂದ್ರದ ಆರ್ಥಿಕ ನೆರವುಪಡೆಯುತ್ತಿರುವ ರೈತರ ಇ-ಕೆವೈಸಿ ನೋಂದಣಿಗೆ ಕೃಷಿಇಲಾಖೆಯಿಂದ ಅರಿವು ಮೂಡಿಸಿದರೂ, ನೋಂದಣಿ ಕಾರ್ಯ ಅರ್ಧ ಗುರಿ ಸಹ ತಲುಪಿಲ್ಲ.

Advertisement

ಹೌದು. ಕೇಂದ್ರ ಸರ್ಕಾರ ಕಿಸಾನ್‌ ಸಮ್ಮಾನ್‌ಯೋಜನೆಯಡಿ ವಾರ್ಷಿಕ 6 ಸಾವಿರ ರೂ. ನೆರವುನೀಡುತ್ತಿದೆ. ಅದೇ ರೀತಿ ರಾಜ್ಯ 4 ಸಾವಿರ ನೆರವುಕೊಡುತ್ತಿದೆ. ಮುಂದಿನ ದಿನಗಳಲ್ಲಿ ಈ ನೆರವು ಪಡೆಯ ಬೇಕಾದರೆ ರೈತರು ಕಡ್ಡಾಯವಾಗಿ ಬ್ಯಾಂಕುಗಳಿಗೆ ತೆರಳಿ ಇ-ಕೆವೈಸಿ ಮಾಡಿಸಬೇಕಿದೆ.

ಈಗಾಗಲೇ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಫ‌ಲಾನುಭವಿಯಾಗಿರುವ ಪ್ರತಿಯೊಬ್ಬ ರೈತ ಕೂಡ ತಮ್ಮ ಆಧಾರ ಸಂಖ್ಯೆ ಮತ್ತು ಆಧಾರ್‌ಸಂಖ್ಯೆಯೊಂದಿಗೆ ನೋಂದಣಿಯಾಗಿರುವ ಮೊಬೈಲ್‌ ಸಂಖ್ಯೆಯನ್ನು ದಾಖಲಿಸಬೇಕು. ಯಾವ ಫ‌ಲಾನುಭವಿಯ ಮೊಬೈಲ್‌ ಸಂಖ್ಯೆ, ಆಧಾರ್‌ ಸಂಖ್ಯೆಗೆಜೋಡಣೆಯಾಗಿಲ್ಲವೋ ಅಥವಾ ಯಾರ ಮೊಬೈಲ್‌ ಸಂಖ್ಯೆಗೆ ಒಟಿಪಿ ಸ್ವೀಕೃತವಾಗುವುದಿಲ್ಲವೋ ಅವರುಗ್ರಾಹಕ ಸೇವಾ ಕೇಂದ್ರಗಳಿಗೆ ಹೋಗಿ ಇ-ಕೆವೈಸಿ ಮಾಡಬಹುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ನೆರವು ಸ್ಥಗಿತ: ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಆರ್ಥಿಕ ನೆರವು ಪಡೆಯುತ್ತಿರುವ ರೈತರು ತಮ್ಮ ಬ್ಯಾಂಕ್‌ಗಳಲ್ಲಿಇ-ಕೆವೈಸಿ ಮಾಡಿಸಲು ಈಗಾಗಲೇ ಹಲವಾರು ಬಾರಿ ಅಂತಿಮ ಗಡುವು ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಕೊನೆಯದಾಗಿ ಆ. 31ರೊಳಗಾಗಿ ಎಲ್ಲಾ ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸುವಂತೆ ಸೂಚಿಸಿದೆ. ಇ-ಕೆವೈಸಿ ಮಾಡಿಸದೇ ಹೋದರೆ ಕೇಂದ್ರ ಸರ್ಕಾರ ಕೊಡುತ್ತಿರುವ ಆರ್ಥಿಕ ನೆರವು ನಿಲ್ಲಿಸಲಾಗುತ್ತದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.

ಮಂದಗತಿಯ ಪ್ರಗತಿ: ಜಿಲ್ಲೆಯಲ್ಲಿ ಒಟ್ಟು 88,078 ಫ‌ಲಾನುಭವಿಗಳಿದ್ದು, ಇದರಲ್ಲಿ 38,334 ಜನ ಮಾತ್ರ ಇ-ಕೆವೈಸಿ ನೋಂದಾಯಿಸಿದ್ದಾರೆ. ಶೇ.43.5 ರಷ್ಟು ಮಾತ್ರ ಪ್ರಗತಿಯಾಗಿದೆ. ಬೆಂಗಳೂರುಗ್ರಾಮಾಂತರ ಜಿಲ್ಲೆಯಲ್ಲಿ ರೈತರು ಪ್ರಧಾನಮಂತ್ರಿಕಿಸಾನ್‌ ಸಮ್ಮಾನ್‌ ಯೋಜನೆಯ ಇ-ಕೆವೈಸಿ ನೋಂದಾಯಿಸುವಲ್ಲಿ ಮಂದಗತಿಯ ಪ್ರಗತಿ ಕಂಡುಬರುತ್ತಿದೆ. ಗ್ರಾಪಂ ವ್ಯಾಪ್ತಿಯ ಮಟ್ಟದಲ್ಲಿಗ್ರಾಮ ಒನ್‌ ಕೇಂದ್ರಗಳಿದ್ದರೂ, ಕೆಲವೆಡೆ ಈಕೇಂದ್ರಗಳು ಸ್ಥಾಪನೆಯಾಗಿಲ್ಲ. ಜಿಲ್ಲೆಯಲ್ಲಿ ರೈತರು ಇ-ಕೆವೈಸಿ ಮಾಡಿಸಲು ಸಾಕಷ್ಟು ಹಿನ್ನಡೆಯಾಗುತ್ತಿದೆ.

Advertisement

ಕಿಸಾನ್‌ ಸಮ್ಮಾನ್‌ ಯೋಜನೆ ಜಾರಿಗೆ ತಂದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟು 10 ಸಾವಿರ ರೂ. ನೀಡುತ್ತಿದೆ. ಪ್ರತಿ ರೈತರು ಕಿಸಾನ್‌ ಸಮ್ಮಾನ್‌ಯೋಜನೆಗೆ ಸೇವಾ ಕೇಂದ್ರ ಅಥವಾ ತಮ್ಮಮೊಬೈಲ್‌ಗ‌ಳಲ್ಲಿ ಇ-ಕೆವೈಸಿ ಮಾಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು. -ಎಚ್‌.ಎಂ.ರವಿಕುಮಾರ್‌, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ

ಕೇಂದ್ರ ಸರ್ಕಾರದ ಕಿಸಾನ್‌ ಸಮ್ಮಾನ್‌ಯೋಜನೆಗೆ ರೈತರು ಬ್ಯಾಂಕುಗಳಲ್ಲಿ ಎಲ್ಲಾ ರೈತರು ಇ-ಕೆವೈಸಿ ಕಡ್ಡಾಯವಾಗಿಮಾಡಿಸಬೇಕು. ರೈತರು ಇ-ಕೆವೈಸಿನೋಂದಾಯಿಸಲು ಸಾಕಷ್ಟು ಅರಿವುಮೂಡಿಸುವ ಕಾರ್ಯ ಮಾಡಲಾಗಿದೆ.ರೈತರು ತಮ್ಮಲ್ಲಿರುವ ಮೊಬೈಲ್‌ಗ‌ಳಲ್ಲೇಇ-ಕೆವೈಸಿ ನೊಂದಾಯಿಸಿಕೊಳ್ಳಬಹುದುಹಾಗೂ ಗ್ರಾಮ ಒನ್‌ ಮತ್ತು ಸಾಮಾನ್ಯಸೇವಾ ಕೇಂದ್ರಗಳಲ್ಲಿ ಮಾಡಿಸಿಕೊಳ್ಳಬಹುದು. -ಜಯಸ್ವಾಮಿ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next