Advertisement
ಗ್ರಾ.ಪಂನ ಮೂವರು ಸದಸ್ಯರು ಹಾಗೂ ಒಬ್ಬ ಯುವ ಕಾರ್ಯಕರ್ತನ ಮೇಲೆ ಕಲಘಟಗಿಯಲ್ಲಿ ಹಲ್ಲೆ ನಡೆಸಿರುವ ಘಟನೆ ಬಗೆಗೆ ಗೌಳಿ ಸಮುದಾಯದವರಿಂದ ಸೋಮವಾರ ವ್ಯಾಪಕ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗಿದೆ. ಮದನೂರು ಗ್ರಾ.ಪಂನ ಎಲ್ಲ 13 ಸದಸ್ಯರೂ ಬಿಜೆಪಿ ಬೆಂಬಲಿತರಾಗಿದ್ದು, ಅವರಲ್ಲಿ 6 ಜನರು ದನಗರ್ ಗೌಳಿ ಸಮುದಾಯದವರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಅ ವರ್ಗದ ಮಹಿಳೆ ಮೀಸಲಾತಿ ಬಂದಿರುವುದರಿಂದ ತಮ್ಮ ಸಮುದಾಯದವರೇ ಅಧ್ಯಕ್ಷರಾಗಲಿ ಎಂಬ ಯೋಜನೆ ಅವರದಾಗಿತ್ತು. ಅದಕ್ಕಾಗಿ ಮರಾಠಿ ಸಮುದಾಯದ ಇನ್ನೊಬ್ಬ ಸದಸ್ಯನ ನೆರವಿನಿಂದ ಗೌಳಿ ಸಮುದಾಯದವರನ್ನೇ ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯಕ್ಕೂ ಸಮುದಾಯದವರು ಒಗ್ಗಟ್ಟಾಗಿದ್ದರು.
Related Articles
Advertisement
ಕಿರವತ್ತಿಯಲ್ಲಿ ಸೋಮವಾರ ಪ್ರತಿಭಟನೆ: ಈ ಹಲ್ಲೆ ಖಂಡಿಸಿ ಕಿರವತ್ತಿಯಲ್ಲಿ ಗೌಳಿ ಸಮುದಾಯದವರು ಸೊಮವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು. ಮಾರುತಿ ದೇವಸ್ಥಾನದ ಬಳಿಯಿಂದ ಗ್ರಾ.ಪಂವರೆಗೆ ಪ್ರತಿಭಟನೆ ನಡೆಸಿ, ಮದನೂರು ಗ್ರಾಪಂ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡುವಂತೆ ಆಗ್ರಹಿಸಿದರು. ಅಲ್ಲದೇ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಸಮುದಾಯದ ಮುಖಂಡರಾದ ದೋಂಡು ಪಾಟೀಲ, ವಿಠuಲ ಪಾಂಡ್ರಮೀಸೆ ಸೇರಿದಂತೆ 400ಕ್ಕೂ ಹೆಚ್ಚು ಜನ ಜಮಾಯಿಸಿದ್ದರು. ಗೌಳಿ ಸಮುದಾಯದವರ ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ಪ್ರಧಾನ ಕಾರ್ಯದರ್ಶಿ ಪ್ರಸಾದ ಹೆಗಡೆ, ಉಪಾಧ್ಯಕ್ಷ ವೆಂಕಟ್ರಮಣ ಬೆಳ್ಳಿ, ಯುವ ಮೋರ್ಚಾ ಅಧ್ಯಕ್ಷ ಪ್ರದೀಪ ಯಲ್ಲಾಪುರಕರ್, ಪ.ಪಂ ಸದಸ್ಯ ಸೋಮು ನಾಯ್ಕ, ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಇತರರು ಭಾಗವಹಿಸಿ ಬೆಂಬಲ ನೀಡಿದರು.
ಎಂಎಲ್‌ಸಿ ಶಾಂತಾರಾಮ ಸಿದ್ದಿ ಖಂಡನೆ: ಗ್ರಾಪಂ ಸದಸ್ಯರ ಮೇಲಿನ ಹಲ್ಲೆಯನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಖಂಡಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಅವರು, ದನಗರ ಗೌಳಿ ಸಮುದಾಯದವರ ಮೇಲೆ ಈ ಹಲ್ಲೆ ನಡೆಸಿದ್ದು ಖಂಡನೀಯ. ತಪ್ಪಿತಸ್ಥರು ಯಾರೇ ಆದರೂ ಅವರ ವಿರುದ್ಧ ಕಾನೂನು ಕ್ರಮ ಆಗಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ :ಕೊರೊನಾದಿಂದ ಶಿಕ್ಷಣದಲ್ಲಿ ಏರುಪೇರು: ಕಾಗೇರಿ
ಹಲ್ಲೆ ಘಟನೆಯಲ್ಲಿ ಯಾರಿದ್ದಾರೆ ಎಂಬ ಹೆಸರು ಸೋಷಿಯಲ್ ಮೀಡಿಯದಲ್ಲಿ ಹರಿದಾಡುತ್ತಿದೆ. ಸದಾ ಅಲ್ಲಿ ಇಲ್ಲಿ ಓಡಾಡುತ್ತಿರುವ ಈ ವ್ಯಕ್ತಿ ಹಾಗೂ ಅವರ ಗುಂಪು ಸೋಮವಾರ ಎಲ್ಲೂ ಕಾಣುತ್ತಿಲ್ಲ. ತಲೆಮರೆಸಿಕೊಂಡು ಓಡಾಡುತ್ತಿದ್ದು ಮಂಗಳವಾರ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಅವರು ಕಾಣಿಸಿಕೊಳ್ಳುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.