Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಪ್ರಥಮ ರಾಘವೇಂದ್ರ ಮಠ ಇದಾಗಿದ್ದು, ಪಯಸ್ವಿನಿ ನದಿ ತೀರದ ಶ್ರೀ ಚೆನ್ನಕೇಶವ ದೇವರ ಜಳಕದ ಕಟ್ಟೆಯ ಸಮೀಪ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಶಿಲಾಮಯ ಗರ್ಭಗುಡಿ, ವಿಶಾಲ ಅಂಗಣ, ಪ್ರತ್ಯೇಕ ಯಾಗ ಶಾಲೆ, ಕಚೇರಿ, ಸಭಾಭವನ, ಪಾಕ ಶಾಲೆ ಇತ್ಯಾದಿಗಳನ್ನೊಳಗೊಂಡ ಯೋಜನೆಯ ಮೊದಲ ಹಂತ ಕಾರ್ಯಗತಗೊಂಡಿದೆ ಎಂದು ವಿವರಿಸಿದರು.
Related Articles
Advertisement
ಧಾರ್ಮಿಕ ಸಭೆಎ. 20ರಂದು ಪೂರ್ವಾಹ್ನ ವೈದಿಕ ಕಾರ್ಯಕ್ರಮ, ಸಂಜೆ ಭಜನೆ, ಭಕ್ತಿ ಸಂಗೀತ, ವೇದಘೋಷ ನಡೆಯಲಿದೆ. ರಾತ್ರಿ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ರಾಘವೇಂದ್ರ ಮಠ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮುರಳಿಕೃಷ್ಣ ಡಿ.ಆರ್. ವಹಿಸಲಿದ್ದಾರೆ. ಶ್ರೀ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಆಶೀರ್ವಚನ ನೀಡಲಿದ್ದಾರೆ. ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ನಿಟ್ಟೆ ವಿಶ್ವ ವಿದ್ಯಾನಿಲಯದ ಉಪ ಕುಲಪತಿ
ಡಾ| ಎಂ.ಎಸ್. ಮೂಡಿತ್ತಾಯ, ಸುಳ್ಯ ಚೆನ್ನಕೇಶವ ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಡಾ| ಹರಪ್ರಸಾದ್ ತುದಿಯಡ್ಕ, ಸುಳ್ಯ ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ ಡಾ| ವಿದ್ಯಾಶಾಂಭವ ಪಾರೆ ಭಾಗವಹಿಸಲಿದ್ದಾರೆ. ರಾತ್ರಿ ಯಕ್ಷಗಾನ ಪ್ರದರ್ಶನವಿದೆ. ಎ. 21ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ
ಎ. 21ರಂದು ವೈದಿಕ ಕಾರ್ಯಕ್ರಮ, ಸಂಜೆ ಯಕ್ಷಗಾನ ತಾಳಮದ್ದಳೆ, ನೃತ್ಯ ಭಜನೆ, ವೇದಘೋಷ ನಡೆಯಲಿದೆ.
ರಾತ್ರಿ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಮಹೇಶಕುಮಾರ್ ಮೇನಾಲ
ವಹಿಸಲಿದ್ದಾರೆ. ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಆಶೀರ್ವಚನ ನೀಡಲಿದ್ದಾರೆ. ಅತಿಥಿಗಳಾಗಿ ಶಾಸಕ ಎಸ್. ಅಂಗಾರ, ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಭೀಮೇಶ್ವರ ಜೋಶಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎಂ.ಕೆ. ಜಗನ್ನಿವಾಸ ರಾವ್, ಪುತ್ತೂರು ಕಲ್ಲಾರೆ ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಕಾರ್ಯದರ್ಶಿ ಯು. ಪೂವಪ್ಪ ಭಾಗವಹಿಸಲಿದ್ದಾರೆ. ರಾತ್ರಿ ಭರತನಾಟ್ಯ ‘ಕೃಷ್ಣಾಂತರಂಗ’ ನೃತ್ಯ ರೂಪಕ ಹಾಗೂ ಶಿಲಾಬಾಲಿಕಾ ನರ್ತನ ನಡೆಯಲಿದೆ. ಎ. 22ರಂದು ಅಪರಾಹ್ನ ಸುಳ್ಯ ರಾಘವೇಂದ್ರ ಮಠ ನಿರ್ಮಾಣ ಸಮಿತಿ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ಸುಬುಧೇಂದ್ರ ಅವರು ಆಶೀರ್ವಚನ ನೀಡಲಿದ್ದಾರೆ. ಅತಿಥಿಗಳಾಗಿ ಅರಣ್ಯ ಸಚಿವ ಬಿ. ರಮಾನಾಥ ರೈ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ, ಮಂಗಳೂರು ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ಜಯರಾಮ ಉಡುಪ ಮತ್ತು ಲಕ್ಷ್ಮೀ ಪಾರೆ ಭಾಗವಹಿಸಲಿದ್ದಾರೆ. ಸಂಜೆ 4.30 ಭಜನೆ, ಭಕ್ತಿ ಸಂಗೀತ, ರಾತ್ರಿ ದಶಾವತಾರ ಯಕ್ಷ- ಭರತ-ನಾಟಕ ನಡೆಯಲಿದೆ. ಮಹೋತ್ಸವ ಸಂಚಾಲಕ ಪ್ರಕಾಶ್‌ಮೂಡಿತ್ತಾಯ ಮಠದ ಯೋಜನೆಗಳ ಬಗ್ಗೆ, ಮಹೋತ್ಸವ ಸಮಿತಿ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ ಉತ್ಸವದ ಬಗ್ಗೆ, ಮಠ ನಿರ್ಮಾಣ ಸಮಿತಿ ಕಾರ್ಯದರ್ಶಿ ಪಿ.ಬಿ.ಸುಧಾಕರ ರೈ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಠ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಮುರಳೀಕೃಷ್ಣ ಡಿ.ಆರ್., ಟ್ರಸ್ಟ್ ಕಾರ್ಯದರ್ಶಿ ಪ್ರವೀಣ್ ಎಸ್. ರಾವ್, ಖಜಾಂಚಿ ರಮೇಶ ಸೋಮಯಾಜಿ, ಮಹೋತ್ಸವ ಸಮಿತಿ ಖಜಾಂಚಿ ಕೆ. ಪ್ರಭಾಕರ ನಾಯರ್, ಕಾರ್ಯದರ್ಶಿ ಶಶಿಧರ ಎಂ.ಜೆ., ವೈ.ವಿ. ಫಾಲಚಂದ್ರ, ಗೋಪಾಲ ರಾವ್, ಜಯರಾಮ ಶೆಟ್ಟಿ, ಕೇಶವ ಜಿ.ಪಿ., ಪ್ರಚಾರ ಸಮಿತಿ ಅಧ್ಯಕ್ಷೆ ಚಿತ್ರಾ ಮಟ್ಟಿ, ಸಂಚಾಲಕ ರಾಮಚಂದ್ರ ಯದುಗಿರಿ ಉಪಸ್ಥಿತರಿದ್ದರು. ಎ. 22: ಮೂಲ ರಾಮ ದೇವರು, ಬೃಂದಾವನ ಪ್ರತಿಷ್ಠೆ
ಎ. 22ರಂದು ವೈದಿಕ ಕಾರ್ಯಕ್ರಮ ನಡೆದು, ಮಂತ್ರಾಲಯದ ಶ್ರೀ ಸುಬುಧೇಂದ್ರ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ಮೂಲ ರಾಮ ದೇವರ ಪ್ರತಿಷ್ಠೆ, ಶ್ರೀ ಗುರು ರಾಘವೇಂದ್ರ ಯತಿಗಳ ಬೃಂದಾವನ ಪ್ರತಿಷ್ಠೆ, ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ಅಲಂಕಾರ ಮಹಾಪೂಜೆ, ನಿತ್ಯಾನುಷ್ಠಾನ ಪ್ರಾರ್ಥನೆ, ವೈದಿಕ ಮಂತ್ರಾಕ್ಷತೆ, ಆಶೀರ್ವಚನ ಪ್ರಸಾದ ವಿತರಣೆ, ಅನ್ನಸಂರ್ಪಣೆ ನಡೆಯಲಿದೆ.