ಕಿನ್ನಿಗೋಳಿ: ವಿಶ್ವ ತುಳುವೆರೆ ಆಯನೊ ಕೂಟ ಹಾಗೂ ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗ ಧಾಮದಲ್ಲಿ ಡಿ. 23 ಮತ್ತು 24ರಂದು ನಡೆಯುವ ‘ತುಳು ನಾಡೋಚ್ಚಯ-2017’ರ ಪೂರ್ವ ಭಾವಿಯಾಗಿ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಆಗ್ರಹಿಸಿ ಲಕ್ಷ ಸಹಿ ಸಂಗ್ರಹ ಅಭಿಯಾನವು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಗುರುವಾರ ನಡೆಯಿತು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು 50,000ನೇ ಸಹಿ ಹಾಕುವ ಮೂಲಕ ಚಾಲನೆ ನೀಡಿದರು.
ಮುದ್ರಾಡಿ ನಾಟ್ಕದೂರಿನ ನಮ ತುಳುವೆರ್ ಕಲಾ ಸಂಘಟನೆ, ತುಳುನಾಡ ರಕ್ಷಣಾ ವೇದಿಕೆ ಮತ್ತು ಸುಮನಸಾ ಕೊಡವೂರು ಉಡುಪಿ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೊಡೆತ್ತೂರು ಭುವನಾಭಿರಾಮ ಉಡುಪ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು, ಕರುಣಾಕರ
ಶೆಟ್ಟಿ, ಅನುಗ್ರಹ ಜುವೆಲರ್ನ ಪೃಥ್ವೀರಾಜ್ ಆಚಾರ್ಯ, ನಾರಾಯಣಗುರು ವಿದ್ಯಾ ಸಂಸ್ಥೆಯ ಪ್ರಾಂಶುಪಾಲೆ ಉಷಾ, ನಮ ತುಳುವೆರ್ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ ಮೋಹನ್, ಸುಗಂಮೇಶ್, ಉಮೇಶ್ ಕಲ್ಮಾಡಿ, ವಾಣಿ ಸುಕುಮಾರ್, ಚಂದನ ಮತ್ತಿತರರು ಉಪಸ್ಥಿತರಿದ್ದರು.