Advertisement

Kinnigoli: ಪಕ್ಷಿಕೆರೆ-ಕೊಯಿಕುಡೆ ರಸ್ತೆಯುದ್ದಕ್ಕೂ ಹೊಂಡ ಗುಂಡಿ

02:28 PM Oct 21, 2024 | Team Udayavani |

ಕಿನ್ನಿಗೋಳಿ: ಎಸ್‌. ಕೋಡಿಯಿಂದ ಪಕ್ಷಿಕೆರೆ ಹಳೆಯಂಗಡಿಯ ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಹೊಂಡ ಗುಂಡಿಗಳೇ ಕೂಡಿವೆ. ದ್ವಿಚಕ್ರ ವಾಹನ ಚಾಲಕರಿಗಂತೂ ಇಲ್ಲಿ ಅಪಾಯ ತಪ್ಪಿದ್ದಲ್ಲ. ರಸ್ತೆ ಹೊಂಡಗಳಲ್ಲಿ ಮಳೆ ನೀರು ತುಂಬಿಕೊಂಡಿವೆ. ಸರಿಯಾದ ಚರಂಡಿ ವ್ಯವಸ್ಯೆ ಇಲ್ಲದಿರುವುದು ಈ ಸಮಸ್ಯೆ ಕಾರಣ.

Advertisement

ಪಕ್ಷಿಕೆರೆ ಪೇಟೆ ಸಹಿತ ಹಲವು ಕಡೆಗಳಲ್ಲಿ ದೊಡ್ಡ ಹೊಂಡಗಳಿಗೆ ಐಸಿವೈಮ್‌ ಸಂಘಟನೆಯ ಮೂಲಕ ಆಗಸ್ಟ್‌ ನಲ್ಲಿ ಶ್ರಮದಾನ ಮಾಡಿ ಜಲ್ಲಿ ಹಾಕಿ ಮುಚ್ಚಲಾಗಿತ್ತು. ಈಗ ಹೊಂಡ ಗಳು ಮತ್ತೆ ಕಾಣಿಸಿಕೊಂಡು ಸಮಸ್ಯೆಯಾಗಿದೆ.

ಅಪಾಯಕಾರಿ ತಿರುವು
ಕೊಯಿಕುಡೆ ಪರಿಸರದಲ್ಲಿ ಅಪಾಯಕಾರಿ ತಿರುವು ಇರುವಲ್ಲಿ ದೊಡ್ಡ ಹೊಂಡ ಗುಂಡಿಗಳು ಇದ್ದು ಅಪಾಯಕಾರಿಯಾಗಿದೆ.

ಇಲ್ಲಿನ ರಸ್ತೆಗೆ ಪಕ್ಷಿಕೆರೆ ಪೇಟೆ, ಪರಿಸರ ಚರ್ಚ್‌ ಎದುರು, ಕೊಯಿಕುಡೆ ಪರಿಸರ ದಲ್ಲಿ ಮಳೆಗಾಲದ ಸಂದರ್ಭ ರಸ್ತೆಯಲ್ಲಿ ಹೆಚ್ಚಿನ ನೀರಿನ ಒರೆತ ಇರುವುದರಿಂದ ಮಳೆಗಾಲಕ್ಕೂ ಮುನ್ನಾ ರಸ್ತೆ ಹೊಂಡ ಗುಂಡಿಗಳನ್ನು ಮುಚ್ಚಿ ಚರಂಡಿ ಕೆಲಸ ಮಾಡಬೇಕಾಗಿದೆ. ರಸ್ತೆ ಬದಿಯ ಹುಲ್ಲು ಗಿಡಿ ಕಂಟಿಗಳಿಂದ ಎದುರಿನಿಂದ ಬರುವ ವಾಹನಗಳು ಕಾಣಿಸದೇ ಅಪಘಾತ ಉಂಟಾಗುವ ಸಾಧ್ಯತೆ ಇವೆ. ಆದ್ದರಿಂದ ಅದಷ್ಟು ಬೇಗ ಇವುಗಳನ್ನು ತೆರವು ಮಾಡಬೇಕಾಗಿದೆ ಎನ್ನುತ್ತಾರೆ ಸ್ಥಳೀಯರಾದ ಭಾಸ್ಕರ ಅಮೀನ್‌, ನವೀನ್‌ ಚಂದ್ರ ತೋಕೂರು ಲೈಟ್‌ ಹೌಸ್‌.

ಅನುದಾನದ ಕೊರತೆ
ಮುಖ್ಯ ರಸ್ತೆ ಹೆದ್ದಾರಿಯ ದುರಸ್ತಿಯ ಬಗ್ಗೆ ಇಲಾಖೆಯ ವರಿಷ್ಟರಿಗೆ ಈಗಾಗಲೇ ಮನವಿ ನೀಡಲಾಗಿದೆ. ಗ್ರಾಮೀಣ ಮಟ್ಟದ ರಸ್ತೆ ದುರಸ್ತಿಗೆ ಅನುದಾನದ ಕೊರತೆ ಇದೆ. ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸಿದರೇ ಸಮಸ್ಯೆ ಪರಿಹಾರ ಆಗಬಹುದು.
-ಮಯ್ಯದಿ ಪಕ್ಷಿಕೆರೆ, ಅಧ್ಯಕ್ಷರು, ಕೆಮ್ರಾಲ್‌ ಗ್ರಾ.ಪಂ.

Advertisement

10ಕ್ಕೂ ಮಿಕ್ಕಿ ಜನರು ಹೊಂಡಕ್ಕೆ
ಪಕ್ಷಿಕೆರೆ ಚರ್ಚ್‌ ಮುಂಭಾಗ ಹಾಗೂ ಕೆಳಭಾಗದ ರಸ್ತೆಯಲ್ಲಿ ದೊಡ್ಡ ಹೊಂಡಗಳನ್ನು ತಪ್ಪಿಸಲು ದ್ವಿಚಕ್ರ ಚಾಲಕರು ಹೋದರೆ ಮತ್ತೂಂದು ಹೊಂಡಕ್ಕೆ ಬೀಳುವುದು ಗ್ಯಾರಂಟಿ. ಕಳೆದ ಒಂದು ವಾರದಲ್ಲಿ 10 ಕ್ಕೂ ಮಿಕ್ಕಿ ಹೆಚ್ಚು ಜನರು ಹೊಂಡಕ್ಕೆ ಬಿದ್ದಿದ್ದಾರೆ.
-ಪೀಟರ್‌ ಕೊಯಿಕುಡೆ, ಗ್ರಾಮಸ್ಥರು

-ರಘನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next