Advertisement

Kinnigoli: ಹೊಂಡ ಗುಂಡಿಗಳಿಂದ ತುಂಬಿದೆ ಕಿನ್ನಿಗೋಳಿ – ಮೂಲ್ಕಿ ರಾಜ್ಯ ಹೆದ್ದಾರಿ

01:33 PM Sep 13, 2024 | Team Udayavani |

ಕಿನ್ನಿಗೋಳಿ: ಈ ಬಾರಿಯ ಮಳೆಗೆ ಹಲವೆಡೆ ರಸ್ತೆಗಳು ಕಿತ್ತು ಹೋಗಿದ್ದು ಹೊಂಡ ಗುಂಡಿಗಳಾಗಿವೆ.

Advertisement

ಕಿನ್ನಿಗೋಳಿ – ಮೂಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡಿನಲ್ಲಿ ಡಾಮರು ಕಿತ್ತು ಹೋಗಿ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿದೆ.

ಕಳೆದ ವಾರ ಸುರಿದ ಮಳೆಗೆ ರಸ್ತೆ ಹೊಂಡಗಳ ಗಾತ್ರ ಹಿರಿದಾಗಿದ್ದು, ಗುಂಡಿಯ ಅರಿವು ಇಲ್ಲದೆ ದ್ವಿಚಕ್ರ ವಾಹನ ಬಿದ್ದು ಸವಾರರ ಮೂಳೆ ಮುರಿತ ಉಂಟಾಗಿದೆ. ಒಂದು ವಾರದಲ್ಲಿ ಸುಮಾರು 7 ಮಂದಿ ದ್ವಿಚಕ್ರ ವಾಹನ ಸವಾರರು ರಸ್ತೆ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ.

ಮಳೆಗಾಲಕ್ಕೆ ಮುನ್ನಾ ಸಣ್ಣ ಪುಟ್ಟ ಹೊಂಡಗಳಿಗೆ ತೇಪೆ ಕಾರ್ಯ ಹಾಗೂ ಹೆದ್ದಾರಿಯ ಬದಿಯ ಚರಂಡಿ ನಿರ್ವಹಣೆ ಮಾಡಿದ್ದರೆ ಇಂತಹ ಸಮಸ್ಯೆ ಆಗುತ್ತಿರಲ್ಲಿ.
ಕೆಲವು ಕಡೆಗಳಲ್ಲಿ ಚರಂಡಿಗಳ ಸಮರ್ಪಕ ನಿರ್ವಹಣೆ ಇಲ್ಲದೆ ಚರಂಡಿ ನೀರು ರಸ್ತೆಯಲ್ಲಿ ಹರಿದು ಕೆರೆಕಾಡು, ಕೆಂಚನಕೆರೆ ಶಾಲೆಯ ಮುಂಭಾಗದಲ್ಲಿ ರಸ್ತೆ ಹದಗೆಟ್ಟಿದೆ. ಇನ್ನು ಹಲವೆಡೆ ರಸ್ತೆಗೆ ಹಾಕಿದ ಪೇವರ್‌ ಫಿನಿಶ್‌ ಕಿತ್ತು ಹೋಗಿದೆ.

ಕಳೆದ ವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆ ಉಂಟಾಗಿತ್ತು. ಬಳಿಕ ಸ್ವಲ್ಪ ತೇಪೆ ಕಾರ್ಯ ಮಾತ್ರ ಮಾಡಲಾಯಿತು. ಇದೀಗ ಮತ್ತೆ ತೇಪೆ ಎದ್ದು ಹೋಗಿ ಸಮಸ್ಯೆ ಉಂಟಾಗಿದೆ. ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕಾಗಿದೆ. ರಸ್ತೆಯನ್ನು ವಿಸ್ತರಿಸಿ ಕಾಂಕ್ರೀಟ್‌ ಕಾಮಗಾರಿ ನಡೆಸಿದರೆ ಸಮಸ್ಯೆ ಪರಿಹಾರ ಆಗಲು ಸಾಧ್ಯವಿದೆ ಎಂದು ಸ್ಥಳೀಯರಾದ ರವೀಂದ್ರ ಕುಮಾರ್‌ ಕೆರೆಕಾಡು ತಿಳಿಸಿದ್ದಾರೆ.

Advertisement

ತೆರಿಗೆ ಕಟ್ಟಬೇಕು; ಸಮರ್ಪಕ ರಸ್ತೆ ಇಲ್ಲ
ರಸ್ತೆ ತೆರಿಗೆ ಹೊರೆ ಜನರ ಮೇಲೆ ಇದ್ದು ಅದೂ ಸಾಲದ್ದಕ್ಕೆ ಟ್ರಾಫಿಕ್‌ ಪೊಲೀಸರಿಂದ ದಂಡವೂ ಬೀಳುತ್ತದೆ. ಆದರೆ ರಸ್ತೆ ದುರಸ್ತಿಯ ಬಗ್ಗೆ ಯಾವ ಅಧಿಕಾರಿಯೂ ಚಕಾರ ಎತ್ತುತ್ತಿಲ್ಲ.
-ಸ್ಟೇನೀ ಪಿಂಟೋ, ಕಿನ್ನಿಗೋಳಿ

ದ್ವಿಚಕ್ರ ವಾಹನ ಚಾಲಕರಿಗೆ ಅಪಾಯ
ದಾಮಸಕಟ್ಟೆಯಿಂದೆ – ಏಳಿಂಜೆ ಇಳಿಜಾರಿನ ರಸ್ತೆಯ ತಿರುವಿನಲ್ಲಿ ಡಾಮರು ಕಿತ್ತು ಹೋಗಿ ರಸ್ತೆಯಲ್ಲಿ ಹೊಂಡಗಳಾಗಿವೆ. ಅಲ್ಲಿ ರಸ್ತೆಯ ಅಗಲ ಕಿರಿದಾಗಿದ್ದು ದ್ವಿಚಕ್ರ ವಾಹನಗಳಿಗೆ ತುಂಬಾ ಅಪಾಯಕಾರಿಯಾಗಿ ಪರಿಣಮಿಸಲಿದೆ.
-ರಾಮಚಂದ್ರ ಕಾಮತ್‌ ಬೆಳ್ಮಣ್ಣು, ದ್ವಿಚಕ್ರ ವಾಹನ ಸವಾರ

-ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next